ಹುಬ್ಬಳ್ಳಿ:ಅಯ್ಯಯ್ಯೋ ಯಾರಾದ್ರೂ ಕಾಪಾಡ್ರಿ ಸರ, ಇಲ್ಲಿ ಮಣ್ಣಾಗ ಸಿಕ್ಕೊಂಡೀನಿ.. ಹೆಂಗರ ಮಾಡಿ ದೌಡ್ ಹೊರಗ ತಗೀರಿ.. ಯಪ್ಪಾ ನನ್ ಕಾಲು ನೋಯಕತ್ತತಿ, ಕುಡಿಯಾಕ ನೀರು ಕೊಡ್ರಿ… ಒಳಚರಂಡಿ ದುರಸ್ತಿ ಕಾಮಗಾರಿ ವೇಳೆ ಮೇಲಿಂದ ಮಣ್ಣು ಕುಸಿದು ಸಿಲುಕಿಕೊಂಡ ಕಾರ್ವಿುಕನ ಚೀರಾಟ ಇದು.
ಕರ್ಕಿ ಬಸವೇಶ್ವರನಗರ ನಿವಾಸಿ ಶ್ರೀಧರ ಶಂಕ್ರಪ್ಪ ಮೊರಬದ ಮಣ್ಣಿನಡಿ ಸಿಲುಕಿದ್ದ ಕಾರ್ವಿುಕ. ಬೆಳಗ್ಗೆ ಒಳಚರಂಡಿ ಕೆಳಗೆ ಇಳಿದು ಕೆಲಸ ಮಾಡುತ್ತಿದ್ದಾಗ ಮೇಲಿಂದ ಏಕಾಏಕಿ ಮಣ್ಣು ಕುಸಿದಿದೆ. ತಲೆವೊಂದು ಬಿಟ್ಟು ದೇಹ ಪೂರ್ತಿ ಮಣ್ಣು, ಕಲ್ಲಿನಡಿ ಸಿಲುಕಿತ್ತು. ಕೂಡಲೇ ಎಚ್ಚೆತ್ತುಕೊಂಡ ಸ್ಥಳೀಯರು ಆತನ ರಕ್ಷಣೆಗೆ ಮುಂದಾದರೂ ಪ್ರಯೋಜನವಾಗಲಿಲ್ಲ. ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಉಪನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿ, ಜೆಸಿಬಿ ಮೂಲಕ ಪಕ್ಕದಲ್ಲೊದು ಗುಂಡಿ ಶ್ರೀಧರನನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ತೀವ್ರ ಅಸ್ವಸ್ಥನಾಗಿದ್ದ ಕಾರ್ವಿುಕನನ್ನು ಕಿಮ್ಸ್​ಗೆ ದಾಖಲಿಸಲಾಗಿದೆ.
ಬ್ರೆಜಿಲ್​ ಅಧ್ಯಕ್ಷನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ಉದ್ಯಮಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
