
| ಸ್ವಾಮಿ ಜಪಾನಂದ
ಬನ್ನಿ ಆಚರಿಸೋಣ ‘ವಿಜಯ್ ದಿವಸ್’. ಆ ವೀರಸೇನಾನಿಗಳನ್ನು ನೆನಪಿಸಿಕೊಳ್ಳೋಣ. ದೇಶ ಉಳಿದಿರುವುದೇ ಇಂತಹ ಧೀರ ಹುತಾತ್ಮರಿಂದ.ಸಮುದ್ರ ಮಟ್ಟದಿಂದ ಸುಮಾರು 8000 ಅಡಿಯಿಂದ 23000 ಅಡಿಯವರೆಗೆ ಹರಡಿಕೊಂಡಿದ್ದ ಹಿಮಚ್ಛಾದಿತ ಶಿಖರ, ಕಣಿವೆಗಳ ಪ್ರದೇಶಗಳಾಗಿರುವ ನಮಿಕಾಲ, ಪಿನ್​ಜಿನ್, ಚೊಲಿಯಾ, ಫಾತುಲಾ ಪ್ರದೇಶಗಳಲ್ಲಿ 1999 ಮೇ ತಿಂಗಳಿನಿಂದ ಜುಲೈವರೆಗೆ ಘೋರಯುದ್ಧ ನಡೆಯಿತು. ಕಾಶ್ಮೀರ ಕಣಿವೆ ಹಾಗೂ ಲೇಹ್ ಜಿಲ್ಲೆಗಳ ಮುಖ್ಯದ್ವಾರವಾಗಿತ್ತು ಈ ಪ್ರದೇಶ. ಈ ಪ್ರದೇಶದಲ್ಲಿ ಪಾಕಿಸ್ತಾನದ ನುಸುಳುಕೋರರು ಭಾರತದ ಗಡಿ ರೇಖೆಯನ್ನು ದಾಟಿ ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ ಭಾರತದ ಹೆಮ್ಮೆಯ ಪುತ್ರರು ದೇಶದ ಭದ್ರತೆಗಾಗಿ ತಮ್ಮನ್ನೇ ತಾವು ಸಮರ್ಪಿಸಿಕೊಂಡರು. ಆ ವೀರರ ನೆನಪಿಗೆ ‘ಕಾರ್ಗಿಲ್ ವಿಜಯ್ ದಿವಸ’. ಶತ್ರುಗಳನ್ನು ಸದೆಬಡಿದು ಭಾರತಾಂಬೆಯನ್ನು ರಕ್ಷಿಸಿದ ವೀರ ಸೇನಾನಿಗಳಿಗೆ ನಾವು ಗೌರವ ಸಲ್ಲಿಸಿದಾಗಲೇ ನಿಜವಾದ ದೇಶ ಪ್ರೇಮ ತೋರಿದಂತಾಗುತ್ತದೆ. ಅವರಲ್ಲಿ ಮುಖ್ಯವಾಗಿ ಕ್ಯಾಪ್ಟನ್ ವಿಕ್ರಮಭಾತ್ರ (ಪರಮವೀರ ಚಕ್ರ), ಗ್ರೆನೇಡಿಯರ್ ಯೋಗೀಂದ್ರಸಿಂಗ್ ಯಾದವ್ (ಪರಮವೀರ ಚಕ್ರ), ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ (ಪರಮವೀರ ಚಕ್ರ), ಲೆಫ್ಟಿನೆಂಟ್ ಬಲವಾನ್ ಸಿಂಗ್ (ಮಹಾವೀರ ಚಕ್ರ), ಮೇಜರ್ ರಾಜೇಶ್ ಸಿಂಗ್ ಅಧಿಕಾರಿ (ಮಹಾವೀರ ಚಕ್ರ), ವಿವೇಕ ಗುಪ್ತ (ಮಹಾವೀರ ಚಕ್ರ), ಕ್ಯಾಪ್ಟನ್ ಎನ್. ಕೆಂಗೂರುಸೆ (ಮಹಾವೀರ ಚಕ್ರ), ಲೆಫ್ಟಿನೆಂಟ್ ಕೇಶಿಂಗ್ ಕ್ಲಿಪೋರ್ಡ್ ನಾನ್​ಗ್ರೂಮ್ (ಮಹಾವೀರ ಚಕ್ರ), ನಾಯಕ್ ಧೀರೇಂದ್ರ ಕುಮಾರ್ (ಮಹಾವೀರ ಚಕ್ರ), ಕ್ಯಾಪ್ಟನ್ ಅಮೋಲ್ ಕಾಲಿಯಾ ಎಂಬ ಭಾರತಾಂಬೆಯ ವೀರ ಸುಪುತ್ರರು ಹುತಾತ್ಮರಾಗಿ ದೇಶದ ಸುಭದ್ರತೆಗೆ ತಮ್ಮನ್ನೇ ತಾವು ಸಮರ್ಪಿಸಿಕೊಂಡ ಕ್ಷಣವನ್ನು ನಾವು ನೆನಪಿಸಿಕೊಳ್ಳಲೇಬೇಕು. ಕಾರಣ, ಆ ಮಹಾನ್ ಯೋಧರಿಂದಲೇ ನಾವಿಂದು ಕ್ಷೇಮದಿಂದಿರುವೆವು. ಈ ತ್ಯಾಗವೀರರ ಜತೆಯಲ್ಲಿ 527 ಸೈನಿಕರು ಹುತಾತ್ಮರಾಗಿದ್ದಾರೆ. ಅದೇ ತೆರನಾಗಿ ಶತ್ರುಗಳ ದಾಳಿಗೆ 1363 ಯೋಧರು ಗಾಯಗೊಂಡಿದ್ದರು. ಪಾಕ್ ಪಡೆ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿ ಸೋಲೊಪ್ಪಿಕೊಂಡು 1999ರ ಜು.26ನೇ ತಾರೀಖು ಗಡಿರೇಖೆಯಿಂದ ಬೆದರಿ ಓಡಿ ಹೋಗುವಂತೆ ಮಾಡಿದರು. ಈ ದೇಶದ ಯೋಧರು ಅಪ್ರತಿಮ ವೀರರು ಎಂಬುದನ್ನು ಮರೆಯಬಾರದು. ಭಯಂಕರ ತಾಪ ಅಂದರೆ 50 ಡಿಗ್ರಿ ಉಷ್ಣಾಂಶ ಮೀರಿದ ರಾಜಸ್ಥಾನದ ಗಡಿಯಿಂದ, ಮೈನಸ್ 50 ಡಿಗ್ರಿ ಹಿಮಾಚ್ಛಾದಿತ ವಲಯಗಳಲ್ಲಿ ಭಯಾನಕ ಶೀತಗಾಳಿಯನ್ನು ಎದುರಿಸುತ್ತ ನಮ್ಮೆಲ್ಲರನ್ನೂ ರಕ್ಷಿಸುತ್ತಿರುವ ರಕ್ಷಕರ ಕಡೆಗೆ ನಮ್ಮ ಕೖತಜ್ಞತಾಪೂರ್ವಕ ಗೌರವವನ್ನು ಸಲ್ಲಿಸೋಣ.
ದುರದೃಷ್ಟವಶಾತ್ ಈ ತೆರನಾದ ‘ವಿಜಯ್ ದಿವಸ’ದ ಬಗ್ಗೆ ನಮ್ಮ ಯುವ ಪೀಳಿಗೆಗೆ ಏನಾದರೂ ಅರಿವಿದೆಯೇ? ನಮ್ಮ ಯುವ ಪೀಳಿಗೆ ಯಾವ ದಿಕ್ಕಿನಲ್ಲಿ ಧಾವಿಸುತ್ತಿದೆ?
ಒಮ್ಮೆ ಸ್ವಾಮಿ ವಿವೇಕಾನಂದರು ವಿದೇಶದಲ್ಲಿ ಪ್ರಯಾಣಿಸುತ್ತಿದ್ದಾಗ, ಒಬ್ಬ ವಿದೇಶಿ ಮಹಿಳೆ ಸ್ವಾಮಿ ವಿವೇಕಾನಂದ ಅವರಿಗೆ ಹೀಗೆ ಹೀಯಾಳಿಸುತ್ತಾಳೆ: ‘ಸ್ವಾಮೀಜಿ ನಿಮ್ಮ ದೇಶ ಯಾವ ದೇಶವನ್ನೂ ಯಾವುದೇ ಯುದ್ಧ ಮಾಡಿ ಗೆಲ್ಲಲಿಲ್ಲ! ಅಲ್ಲವೇ?’ ಎಂದು. ಅದಕ್ಕೆ ವೀರ ಸಂನ್ಯಾಸಿ ಉತ್ತರಿಸಿದ್ದು ಹೀಗೆ: ಛೇ! ದೇಶಗಳನ್ನು ಯುದ್ಧ ಮಾಡಿ ಗೆಲ್ಲುವುದೇ ಇಲ್ಲ! ಭಾರತಾಂಬೆ ಇಡೀ ವಿಶ್ವವನ್ನೇ ಗೆಲ್ಲುತ್ತಾಳೆ. ಆದರೆ ಯುದ್ಧದಿಂದಲ್ಲ ಬದಲಾಗಿ ಶಾಂತಿ, ಪ್ರೀತಿ, ಭಾವೈಕ್ಯದಿಂದ’ ಎಂದರು. ಆದರೆ, ಈಗಿನ ಯುವಪೀಳಿಗೆಯಲ್ಲಿ ದೇಶದ ಬಗ್ಗೆ ಒಲವು, ದೇಶಾಭಿಮಾನ ಕಾಣುತ್ತಿಲ್ಲ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಯುವ ಪೀಳಿಗೆ ದೇಶದ ಬಗ್ಗೆ, ದೇಶ ಭಕ್ತರ ಬಗ್ಗೆ, ಸ್ವಾತಂತ್ರ÷ ಸಂಗ್ರಾಮದ ಬಗ್ಗೆ, ಭಗತ್ ಸಿಂಗ್, ಮಂಗಳ್ ಪಾಂಡೆ, ಚಂದ್ರಶೇಖರ ಆಜಾದ್, ನೇತಾಜಿ ಸುಭಾಸ್ ಚಂದ್ರ ಬೋಸ್, ಸುಖದೇವ್, ರಾಜಗುರು, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹಾನ್ ರಾಷ್ಟŠಭಕ್ತರ ಜೀವನ ಚರಿತ್ರೆ, ಆತ್ಮಾಹುತಿಯ ವಿಚಾರ ಇತ್ಯಾದಿಗಳು ಬೇಕಿಲ್ಲ ಎಂದು ಭಾವಿಸುತ್ತಾರೆ. ಯುಕರಿಗೆ ಭಗತ್ ಸಿಂಗ್​ನ ವಿಚಾರ ಎಳ್ಳಷ್ಟೂ ಗೊತ್ತಿಲ್ಲ, ಬೇಕಿಲ್ಲ. ಕೇವಲ 24ನೇ ವಯಸ್ಸಿನಲ್ಲಿ ಬ್ರಿಟಿಷರ ಗಲ್ಲು ಶಿಕ್ಷೆಗೆ ಗುರಿಯಾದ ಈ ಯುವಕ ತನ್ನ ಚಿಕ್ಕ ವಯಸ್ಸಿನಲ್ಲಿಯೇ ದೇಶಭಕ್ತಿಯನ್ನು ರೂಢಿಸಿಕೊಂಡು ಆತ್ಮಾರ್ಪಣೆ ಮಾಡಿದ ದೇಶಭಕ್ತ. ಹಾಗೆಯೇ ಸುಖದೇವ್ ಎಂಬ 24 ವರ್ಷದ ಯುವಕ ತಾಯ್ನಾಡಿಗೆ ತನ್ನನ್ನೇ ತಾನು ಗಲ್ಲಿಗೇರುವ ಸ್ಥಿತಿಯಲ್ಲೂ ‘ಭಾರತ ಮಾತೆಗೆ ಜಯವಾಗಲಿ’ ಎಂದೂ, ಮತ್ತೊಬ್ಬ ದೇಶಭಕ್ತನಾದ ಶಿವರಾಂ ರಾಜಗುರು ಅಂತಹವರೊಂದಿಗೆ ನೇಣುಗಂಬಕ್ಕೆ ತೆರಳುವಾಗಲೂ ‘ಭಾರತ್ ಮಾತಾಕೀ ಜೈ’ ಎಂದು ಉದ್ಘೋಷಿಸಿ ಹುತಾತ್ಮರಾದುದನ್ನು ಇಂದಿನ ಯುವ ಪೀಳಿಗೆ ಮರೆತಂತಿದೆ. ಇಲ್ಲಿ ಒಂದು ಸ್ವಾರಸ್ಯಕರ ಅಂಶವಿದೆ. 24ನೇ ವಯಸ್ಸಿನ ಯುವ ಭಗತ್ ಸಿಂಗ್​ನ ತಂದೆ ಕಿಶನ್ ಸಿಂಗ್ ಅಂದಿನ ನ್ಯಾಯಾಲಯಕ್ಕೆ ತನ್ನ ಮುದ್ದು ಮಗನ ಪರವಾಗಿ ಅರ್ಜಿ ಸಲ್ಲಿಸಲು ಮುಂದಾದಾಗ ಭಾರತಾಂಬೆಯ ವೀರಪುತ್ರ ತಂದೆಯವರಿಗೆ ಆ ರೀತಿ ಕರುಣೆ ಕೋರಿಕೆಯ ಅರ್ಜಿಯನ್ನು ಹಾಕಬಾರದೆಂದು ತಾಕೀತು ಮಾಡಿದನಂತೆ. ಎಂತಹ ಅದ್ಭುತ ಮನಃಸ್ಥೈರ್ಯ, ದೃಢತೆ. ಇಂಥ ದೇಶಭಕ್ತರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕೇ ವಿನಃ ಚಿತ್ರ ನಟರಲ್ಲ, ಕ್ರಿಕೆಟ್ ಪಟುಗಳಲ್ಲ. ಬುದ್ಧ, ಮಹಾವೀರ, ವಿವೇಕಾನಂದ, ರಾಮತೀರ್ಥ, ರಮಣ ಮಹರ್ಷಿ, ಅರವಿಂದ ಘೋಷ್, ನೇತಾಜಿ ಮಾದರಿಯಾಗಬೇಕು. ವಿವೇಕಾನಂದರು ಬಯಸಿದ ‘ನವ ಭಾರತ ನಿಮಾಣ’ ಕೈಗೂಡಬೇಕಾದರೆ ಈ ದೇಶದ ಯುವ ಶಕ್ತಿ ಜಾಗೃತವಾಗಬೇಕು. ಈ ರಾಷ್ಟŠದ ಮುಖ್ಯ ಆಸ್ತಿ ಎಂದರೆ ನಮ್ಮನ್ನು ಅಹರ್ನಿಶಿ ರಕ್ಷಿಸುತ್ತಿರುವ ರಕ್ಷಣಾ ಪಡೆ. ನಮ್ಮ 4671 ಮೈಲಿ ಸಮುದ್ರತೀರ, 15106 ಕಿ.ಮೀ. ಭೂಗಡಿ ಪ್ರದೇಶ ಮತ್ತು ಭಾರತದ ಗಗನದ ವಿಶಾಲ ಪ್ರದೇಶ ಕಾಪಾಡುತ್ತಿರುವ ವೀರ ಯೋಧರಿಗೆ ನಮ್ಮ ನಮನಗಳು. ಈ ರೋಮಾಂಚನಕಾರಿ ಸಂದರ್ಭ ಅಂದರೆ ‘ಕಾರ್ಗಿಲ್ ವಿಜಯ ದಿವಸ್’.
(ಲೇಖಕರು, ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರು.)
ಬನ್ನಿ ಭಾರತದ ಯುವ ಪೀಳಿಗೆ, ನವ ಭಾರತ ನಿಮಾಣಕ್ಕೆ ತಯಾರಾಗೋಣ. ಭಾರತವೇ ನಮ್ಮ ಉಸಿರಾಗಲಿ, ಭಾರತವೇ ನಮ್ಮ ಸರ್ವಸ್ವವಾಗಲಿ, ಪ್ರಬುದ್ಧ ಭಾರತವೇ ನಮ್ಮ ಗುರಿಯಾಗಲಿ. ಹಾಗೆ ಮಾಡಿದಲ್ಲಿ ಮಾತ್ರ ದೇಶ, ದ್ರೋಹಿಗಳಿಂದ, ಭ್ರಷ್ಟರಿಂದ, ಶತ್ರುಗಳಿಂದ ಭಾರತ ಮುಕ್ತವಾಗುತ್ತದೆ. ಇದರಲ್ಲಿ ಸಂದೇಹವೇ ಬೇಡ. ನಮ್ಮ ಗುರಿ ನವಭಾರತ ನಿಮಾಣ….
| ಸ್ವಾಮಿ ವಿವೇಕಾನಂದ
ವೀಲ್​ಚೇರ್​ನಲ್ಲೇ ಬಂದು ಪ್ರಧಾನಿ ಮೋದಿ ಭೇಟಿಯಾದ ಎಚ್‌ಡಿ ದೇವೇಗೌಡ: ಇಲ್ಲಿವೆ ಪೋಟೋಗಳು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
