
ಬೆಂಗಳೂರು:ರಂಗಭೂಮಿ ಮೂಲಕ ಕಲಾಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವ ಕಲಾವಿದರು ಕ್ರಿಯಾಶೀಲ ಮತ್ತು ಉತ್ತಮ ಅಭಿನಯವನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಅಭಿಪ್ರಾಯಿಸಿದ್ದಾರೆ.ಗವಿಪುರಂ ಗುಟ್ಟಳ್ಳಿಯಲ್ಲಿರುವ ಉದಯಭಾನು ಕಲಾಸಂಘದಲ್ಲಿ ಆಯೋಜಿಸಿದ್ದ ರಂಗಸಂಸ್ಕೃತಿ ತಂಡದ8ನೇ ವಾರ್ಷಿಕೋತ್ಸವ ಮತ್ತು ‘ರಂಗಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಿರುತೆರೆ,ಬೆಳ್ಳಿತೆರೆಯಲ್ಲಿ ಅಭಿನಯಿಸುವ ಬಹುಪಾಲು ಕಲಾವಿದರ ಹಿನ್ನೆಲೆ ರಂಗಭೂಮಿಯಾಗಿದ್ದು,ರಂಗಭೂಮಿ ಹಿನ್ನೆಲೆಯಿಂದ ಬಂದ ಕಲಾವಿದರ ಕಲಾನೈಪುಣ್ಯತೆ ಇತರರಲ್ಲಿ ಕಂಡು ಬರುವುದಿಲ್ಲ.ರಂಗಭೂಮಿಗೆ ಕಲಾವಿದರಲ್ಲಿ ಕ್ರಿಯಾಶೀಲತೆಯನ್ನು ಸೃಷ್ಠಿಸುವ ಶಕ್ತಿ ಇದೆ.ರಂಗಭೂಮಿಯಲ್ಲಿ ತೊಡಗಿಸಿಕೊಂಡ ಕಲಾವಿದರಗೆ ಜೀವನದ ಏರಿಳಿತಗಳ ಅನುಭವವಿರುತ್ತದೆ.ಸವಾಲಗಳನ್ನು ಎದುರಿಸುವ ಶಕ್ತಿಯನ್ನು ರಂಗಭೂಮಿ ಕಲಿಸುತ್ತದೆ.
ಒಂದು ಕಾಲಕ್ಕೆ ರಂಗಭೂಮಿ ಅತ್ಯಂತ ಪ್ರಭಲ ಮಾಧ್ಯಮವಾಗಿತ್ತು.ಸಮಾಜಕ್ಕೆ ಯಾವುದೇ ಸಂದೇಶವನ್ನು ನೀಡುವಲ್ಲಿ ರಂಗಭೂಮಿ ಪ್ರಮುಖ ಪಾತ್ರ ನಿರ್ವಹಿಸುತ್ತಿತ್ತು.ಆದರೆ ಕಿರುತೆರೆ ಮತ್ತು ಬೆಳ್ಳಿತೆರೆಯ ಪ್ರಭಾವ ಹೆಚ್ಚಾಗುತ್ತಲೇ ರಂಗಭೂಮಿ ಕೊಂಚ ಮಂಕಾದಂತೆ ಕಂಡು ಬಂತು.ಅದರಲ್ಲೂ ಕರೊನಾ ನಂತರದ ದಿನಗಳಲ್ಲಿ ರಂಗಭೂಮಿ ಸಂಪೂರ್ಣ ಸ್ತಬ್ಧವಾದಂತೆ ಕಂಡು ಬಂದರೂ ಸದ್ಯ ಮತ್ತೆ ರಂಗಚಟುವಟಿಕೆಗಳು ಬಿರುಸುಗೊಂಡಿರುವುದು ಆಶಾದಾಯಕ ಬೆಳವಣಿಗೆ.ಆ ನಿಟ್ಟಿನಲ್ಲಿ ರಂಗಸಂಸ್ಕೃತಿ ತಂಡದ ವಿಭಿನ್ನ ಪ್ರಯತ್ನಗಳನ್ನು ಎಂಎಸ್‌ಎನ್ ಸ್ವಾಗತಿಸಿದರು.
ಸಮಾರಂಭದಲ್ಲಿ ಹಿರಿಯ ನಾಟಕಕಾರರಾದ ಲೋಕನಾಥ ದೀಕ್ಷಿತ್,ಪತ್ರಕರ್ತ ಪ್ರಶಾಂತ ರಿಪ್ಪನ್‌ಪೇಟೆ,ನ್ಯಾಯವಾದಿ ರಘು,ಜಯಂತಿ,ಸುಗುಣ ಮತ್ತಿತರರು ಉಪಸ್ಥಿತರಿದ್ದರು.

ರಂಗಸಂಸ್ಕೃತಿಸಿರಿ ಪ್ರಶಸ್ತಿ ಪ್ರದಾನ :ರಂಗಸಂಸ್ಕೃತಿ ತಂಡದ ವಾರ್ಷಿಕೋತ್ಸವದ ಅಂಗವಾಗಿ ಕೊಡಮಾಡುವ ‘ರಂಗಸಂಸ್ಕೃತಿ ಸಿರಿ’2024ನೇ ಸಾಲಿನ ಪ್ರಶಸ್ತಿಯನ್ನು ಹಿರಿಯನಟಿ ಕಲ್ಯಾಣಿ ಪ್ರದೀಪ್ ಅವರಿಗೆ ನೀಡಲಾಯಿತು.ಪ್ರಶಸ್ತಿಯು5ಸಾವಿರ ನಗದು,ಪ್ರಶಸ್ತಿಪತ್ರ,ಸ್ಮರಣಿಕೆ,ಲತಾಂಬೂಲವನ್ನೊಳಗೊಂಡಿದೆ.
ಕಳೆದ5ದಶಕಗಳಿಂದ5ಸಾವಿರಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನು ನೀಡಿರುವ ಕಲ್ಯಾಣಿ ಪ್ರದೀಪ್ ಹಲವಾರು ಧಾರವಾಹಿ ಮತ್ತು ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
ಭರತನಾಟ್ಯ,ನಾಟಕ ಪ್ರದರ್ಶನ :ರಂಗಸಂಸ್ಕೃತಿ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವು ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.ಸೌಭಾಗ್ಯ ಹಂದ್ರಾಳ ಅವರು ಭರತನಾಟ್ಯ ಪ್ರದರ್ಶಿಸಿದರು.ರಂಗಸಂಸ್ಕೃತಿಯ ಕಲಾವಿದರು ‘ಭಾಗವತರ ನಾಟಕ ಮಂಡಳಿ’ ಎಂಬ ಹಾಸ್ಯ ಪ್ರದಾನ ನಾಟಕ ಪ್ರದರ್ಶಿಸಿದರು.ನಾಟಕದ ರಚನೆ ಲೋಕನಾಥ ದೀಕ್ಷಿತ್,ನಿರ್ದೇಶನ ಕೆ.ಜಿ.ಸಂಪತ್‌ಕುಮಾರ್,ನಿರ್ಮಾಣ ಎಂ.ಲೋಕೇಶ್,ಪ್ರಸಾದನ ಜೆ.ಸೋಮೇಶೇಖರ್ ಮಾಡಿದ್ದರು.ಕಲಾ ಬಳಗದಲ್ಲಿ ಲೀಲಾವತಿ,ಪ್ರಭಾಕರ,ದತ್ತಾತ್ರೇಯ,ವಿಜಯ್,ನಾಗರಾಜ,ಶೋಭ,ನವೀನ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
