ಬೆಂಗಳೂರು:ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (COMEDK) COMEDK UGET 2020 ಪರೀಕ್ಷೆಗೆ ಹೊಸ ದಿನಾಂಕ ಬಿಡುಗಡೆ ಮಾಡಿದೆ.ಹೊಸ ವೇಳಾಪಟ್ಟಿಯ ಪ್ರಕಾರ, ಪದವಿ ಪ್ರವೇಶ ಪರೀಕ್ಷೆ ಆಗಸ್ಟ್ 19 ರಂದು ನಡೆಯಲಿದೆ. ಈ ಮೊದಲು ಒಕ್ಕೂಟವು ಜುಲೈ 25 ರಿಂದ ಆಗಸ್ಟ್ 1 ರವರೆಗೆ ಪರೀಕ್ಷೆಗಳನ್ನು ಮರು ನಿಗದಿಪಡಿಸಿತ್ತು.ಪ್ರವೇಶ ಪರೀಕ್ಷೆ ಎರಡು ಅವಧಿಯಲ್ಲಿ ನಡೆಯಲಿದೆ. ಮೊದಲ ಅವಧಿ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೇ ಅವಧಿ 2 ರಿಂದ 5 ರವರೆಗೆ ಇರಲಿದೆ. ಪರೀಕ್ಷೆಯ ಒಟ್ಟು ಅವಧಿ ಮೂರು ಗಂಟೆಗಳು.
ಇದನ್ನೂ ಓದಿ:ಕೋವಿಡ್ -19 ಶೀಘ್ರ ಪತ್ತೆ ಹಚ್ಚಲು ಬರಲಿದೆ ಮದ್ರಾಸ್ ಐಐಟಿಯ ರಿಸ್ಟ್ ಟ್ರ್ಯಾಕರ್
“ಕೋವಿಡ್​​ನಿಂದಾಗಿ ಆರೋಗ್ಯದ ದೃಷ್ಟಿಯಿಂದ, ಒಕ್ಕೂಟದ ಸಹಾಯವಾಣಿ ಈಗ ಬಂದ್​ ಆಗಿದ್ದು, ಎಲ್ಲ ವಿಚಾರಣೆಗಳಿಗೆ/ ಪ್ರಶ್ನೆಗಳಿಗೆ ಇಮೇಲ್ ಮೂಲಕ ಮಾತ್ರ ಉತ್ತರಿಸಲಾಗುವುದು. ವಿಚಾರಣೆ / ಪ್ರಶ್ನೆಗಳಿದ್ದಲ್ಲಿ[email protected]ಗೆ ತಿಳಿಸಬಹುದು ಎಂದು COMDEK ತಿಳಿಸಿದೆ.
ಭಾರತದಲ್ಲಿ ಅಡಗಿದ್ದಾಳೆ ಶ್ರೀಲಂಕಾ ಆತ್ಮಹತ್ಯಾ ಬಾಂಬರ್​​ನ ಪತ್ನಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 2 =
Remember me
