ಬೆಂಗಳೂರು:ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ಮೂಲಕವಾಗಿ ಮನೆಮಾತಾಗಿರುವ ಹಾಸ್ಯ ಕಲಾವಿದ ಸಂಜು ಬಸಯ್ಯ ಅವರು ಪಲ್ಲವಿ ಬಳ್ಳಾರಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಂಜು ಬಸಯ್ಯ ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಜೊತೆ ಸಂಜು ಬಸಯ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಂಜು ಮತ್ತು ಪಲ್ಲವಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಜೋಡಿಯ ಫೋಟೋಗಳು ವೈರಲ್ ಆಗಿವೆ.

ಸೋಷಿಯಲ್ ಮೀಡಿಯಾದಲ್ಲಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಸಂಜು ಬಸಯ್ಯ, ‘ಕನ್ನಡದ ಕಲಾಭಿಮಾನಿಗಳಿಗೆ ನಿಮ್ಮ ಪ್ರೀತಿಯ ಸಂಜು ಬಸಯ್ಯ ಮತ್ತು ಪಲ್ಲವಿ ಬಳ್ಳಾರಿ ಮಾಡುವ ಅನಂತ ಕೋಟಿ ನಮಸ್ಕಾರಗಳು. ಇಲ್ಲಿಯವರೆಗಿನ ನನ್ನ ಹಾಗೂ ಪಲ್ಲವಿ ಬಳ್ಳಾರಿಯವರ ನಡುವಿನ ಸಂಬಂಧಗಳ ಊಹಾಪೋಹಗಳಿಗೆ ಇಂದು ನಾವು ತೆರೆ ಎಳೆದಿದ್ದೆವೆ. ಮೊದಲಿಗೆ ನಮ್ಮಿಬ್ಬರ ಪರಿಚಯವಾಗಿತು, ಆ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿದ್ದು ನಿಮಗೆಲ್ಲರಿಗೂ ಗೊತ್ತಿದ್ದ ವಿಷಯ. ಈಗ ನಾವಿಬ್ಬರು ಕಾನೂನಬದ್ದವಾಗಿ, ಅಧಿಕೃತವಾಗಿ, ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
A post shared by Sanju Basayya official (@sanjubasayyafficial)
ನಮ್ಮ, ನಮ್ಮ ಕುಟುಂಬದ ಒಪ್ಪಿಗೆ ಪಡೆದು ನಿಮ್ಮೆಲ್ಲರ ಸುಮ್ಮುಖದಲ್ಲಿ ಆದಷ್ಟು ಬೇಗ ಸಪ್ತಪದಿ ತುಳಿಯಲಿದ್ದೇವೆ. ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಮೇಲೆ ಹೀಗೆ ಇರ್ಲಿ. ನಿಜವಾದ ಪ್ರೀತಿಗೆ ಯಾವುದೇ ಜಾತಿ, ಧರ್ಮ, ಇನ್ನಿತರ ಯಾವುದೇ ವಿಷಯಗಳು ಅಡ್ಡ ಬರಲಾರದು ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ನಾವೇ ಕಾರಣ ಎಂದು ಪೋಸ್ಟ್‌ ಹಾಕಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಜು ಬಸಯ್ಯ ಅವರ ಜೋಡಿಗೆ ಅಭಿಮಾನಿಗಳು ಕಾಮೆಂಟ್​​ ಮಾಡುವ ಮೂಲಕವಾಗಿ ಶುಭಕೋರುತ್ತಿದ್ದಾರೆ.
ನಾಟಕ ಕಂಪನೆಯಲ್ಲಿ ಗುರುತಿಸಿಕೊಂಡಿದ್ದ ಸಂಜು ಬಸಯ್ಯ ಬಳಿಕ ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿ ಶೋ ಮೂಲಕವೇ ಕನ್ನಡಿಗರ ಮನೆಮಾತಾಗಿದ್ದಾರೆ. ಸಂಜು ಮದುವೆಯಾಗಿರುವ ಹುಡುಗಿ ಪಲ್ಲವಿ ಕೂಡ ಕಲಾವಿದೆ. ಅನೇಕ ಕಿರುಚಿತ್ರಗಳಲ್ಲಿ ನಟಿಸಿದ್ದಾರೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 12 =
Remember me
