|ಕೇಶವಮೂರ್ತಿ ವಿ.ಬಿ.ಹುಬ್ಬಳ್ಳಿ
ರಾಜ್ಯದಲ್ಲಿ ಭಯೋತ್ಪಾದಕರ ಚಟುವಟಿಕೆಗಳನ್ನು ತ್ವರಿತವಾಗಿ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಗೃಹ ಇಲಾಖೆ ‘ಕಮಾಂಡೋ ಪಡೆ’ಯನ್ನು ಸಜ್ಜುಗೊಳಿಸುತ್ತಿದೆ. ಇದಕ್ಕಾಗಿ ಎನ್​ಎಸ್​ಜಿ, ಎಸ್​ಪಿಜಿ ಮಾದರಿಯಲ್ಲಿ ಖಾಕಿ ಪಡೆಗೆ ವಿಶೇಷ ಕಠಿಣ ತರಬೇತಿ ನೀಡುತ್ತಿದೆ.
ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಪ್ರಕರಣಗಳಿಗಿಂತ ಉಗ್ರರ ದಾಳಿಯಂಥ ಪ್ರಕರಣಗಳು ಭಿನ್ನ ಮತ್ತು ಭಯಾನಕ. ನುರಿತ ಸಿಬ್ಬಂದಿಯಿಂದ ಮಾತ್ರ ಎದುರಾಳಿಗಳನ್ನು ಮಣಿಸಬಹುದು ಎಂಬುದನ್ನು ಮನಗಂಡ ರಾಜ್ಯ ಸರ್ಕಾರ, ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಸಂಭವಿಸಿದರೆ ಕೂಡಲೇ ಅವುಗಳನ್ನು ಎದುರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ‘ಸಿಟಿ ಸ್ಪೆಶಲ್ ವೆಪನ್ ಆಂಡ್ ಟ್ಯಾಕ್ಟಿಕ್ಸ್’ (ಸಿಸ್ವಾಟ್)’ ಹೆಸರಲ್ಲಿ ಕಮಾಂಡೋಗಳನ್ನು ತಯಾರು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೆ ಬೆಂಗಳೂರಿನಲ್ಲಿ ‘ಗರುಡ ಫೋರ್ಸ್’ ಕಾರ್ಯತತ್ಪರವಾಗಿದೆ. 300ಕ್ಕೂ ಹೆಚ್ಚು ತರಬೇತಿ ಹೊಂದಿದ ಕಮಾಂಡೋಗಳು ಸನ್ನದ್ಧರಾಗಿದ್ದಾರೆ.
ಬೆಂಗಳೂರು ನಂತರದಲ್ಲಿ ಹುಬ್ಬಳ್ಳಿ- ಧಾರವಾಡ, ಮೈಸೂರು, ಬೆಳಗಾವಿ, ಮಂಗಳೂರು, ಕಲಬುರಗಿ ಸೇರಿ ವಿವಿಧ ಮಹಾನಗರಗಳಿಗೂ ಈ ತಂಡವನ್ನು ವಿಸ್ತರಿಸಲಾಗುತ್ತಿದೆ. ಸ್ಥಳೀಯವಾಗಿ ಭಯೋತ್ಪಾದಕ ಕೃತ್ಯಗಳು ಸಂಭವಿಸಿದರೆ, ಈ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಿದೆ. ಭಯೋತ್ಪಾದಕರ ಹೆಡೆಮುರಿ ಕಟ್ಟಲಿದೆ. ಭವಿಷ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಈ ತಂಡ ರಚಿಸುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ವ್ಯಾಪ್ತಿಯ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್)ನ 32 ಸಿಬ್ಬಂದಿ ಈ ತರಬೇತಿ ಪಡೆದಿದ್ದಾರೆ. ಇದರಲ್ಲಿ ಇಬ್ಬರು ಆರ್​ಎಸ್​ಐ ಇಬ್ಬರು, 30 ಕಾನ್​ಸ್ಟೆಬಲ್​ಗಳಿದ್ದಾರೆ. ಸಿಎಆರ್ ಡಿಸಿಪಿ ಮಾರ್ಗದರ್ಶನದಲ್ಲಿ ಇವರು ಕೆಲಸ ಮಾಡುತ್ತಾರೆ.
ಹೇಗೆ ನಡೆಯುತ್ತೆ ಟ್ರೇನಿಂಗ್ ?:‘ಬೆಂಗಳೂರಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ’ ಕೇಂದ್ರದಲ್ಲಿ ಎರಡು ತಿಂಗಳ ಕಾಲ ಆಯ್ದ ಸಿಬ್ಬಂದಿಗೆ ಈ ತರಬೇತಿ ನೀಡಲಾಗುತ್ತದೆ. ಈ ಸಿಬ್ಬಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಬುಲೆಟ್ ಫ್ರೂಪ್ ಜಾಕೆಟ್, ಎಕೆ 47, ಎಕ್ಸ್ ಕ್ಯಾಲಿಬರ್ ಸೇರಿ ವಿಶೇಷ ಕಿಟ್ ನೀಡಲಾಗುತ್ತದೆ. ಇದರ ಬಳಕೆಯ ತರಬೇತಿಯನ್ನೂ ನೀಡಲಾಗುತ್ತದೆ. ಯೋಧರಿಗೆ ನೀಡುವ ತರಬೇತಿಯಂತೆ ಇಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ. ದೈಹಿಕ ಜತೆಗೆ ಮಾನಸಿಕವಾಗಿಯೂ ಗಟ್ಟಿಗೊಳಿಸಲಾಗುತ್ತದೆ. ತರಬೇತಿ ನಂತರವೂ ಕರ್ತವ್ಯದ ಸ್ಥಳದಲ್ಲಿ ನಿರಂತರವಾಗಿ ರಿರ್ಹರ್ಸಲ್ ಮಾಡಿಸಲಾಗುತ್ತದೆ. ವಿಶೇಷ ಸಂದರ್ಭದಲ್ಲೂ ಬಳಕೆ ಪ್ರಧಾನಿ, ಮುಖ್ಯಮಂತ್ರಿ, ಗಣ್ಯರು ಆಗಮಿಸಿದ ಸಂದರ್ಭ, ಮಹತ್ವದ ಹಬ್ಬಗಳು, ಬೃಹತ್ ರ್ಯಾಲಿಗಳು, ಗಲಭೆಯಂಥ ವಿಶೇಷ ಸಂದರ್ಭಗಳಲ್ಲೂ ಸ್ಥಳೀಯ ಪೊಲೀರಿಗೆ ಈ ಕಮಾಂಡೋ ಪಡೆ ಸಾಥ್ ನೀಡಲಿದೆ.
ಉಗ್ರರ ದಾಳಿ, ಗಲಭೆ ಮತ್ತಿತರ ಸಂದರ್ಭದಲ್ಲಿ ಸಿಸ್ವಾಟ್ ತಂಡ ಕಾರ್ಯಾಚರಣೆ ನಡೆಸಲಿದೆ.
| ಎಸ್.ಸಿ. ಯಾದವ ಡಿಸಿಪಿ, ಸಿಎಆರ್
ಬಿಜೆಪಿ ಯುವ ಮುಖಂಡನ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ವಾರದ ಹಿಂದೆ ನಡೆದ ಕೊಲೆ ರಿವೇಂಜ್?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
