ಹುಬ್ಬಳ್ಳಿ: ಖ್ಯಾತ ಯೋಗ ಗುರು ಬಾಬಾ ರಾಮದೇವ್ ನಡೆಸಿಕೊಡುತ್ತಿರುವ 5 ದಿನಗಳ ಬೃಹತ್ ಯೋಗ ಯಜ್ಞಕ್ಕೆ ಗುರುವಾರ ಹುಬ್ಬಳ್ಳಿ ಕೇಶ್ವಾಪುರ ರೈಲ್ವೆ ಸ್ಪೋರ್ಟ್ಸ್ ಮೈದಾನದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ವಿಆರ್​ಎಲ್ ಲಾಜಿಸ್ಟಿಕ್ಸ್, ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ ನ್ಯೂಸ್ ಚಾನಲ್, ಪವರ್ ನ್ಯೂಸ್ ಆಪ್ ಸಹಯೋಗದಲ್ಲಿ ಪತಂಜಲಿ ಪೀಠ ಹಮ್ಮಿಕೊಂಡಿರುವ ಶಿಬಿರವನ್ನು ಬೆಳಗಿನ ಜಾವ 4.45ಕ್ಕೆ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿ ದರು. ಬಾಬಾ ರಾಮದೇವ್ ಅವರು ಸಾಂರ್ದಭಿಕ ಹಾಸ್ಯ ಚಟಾಕಿಗಳನ್ನು ಹಾರಿ ಸುತ್ತ ಯೋಗದ ಮಹತ್ವ ತಿಳಿಸಿಕೊಟ್ಟರು. ಪ್ರತಿ ಯೊಂದಕ್ಕೂ ವೈಜ್ಞಾನಿಕ ವಿವರಣೆ ನೀಡುತ್ತ ಆಸನಗಳನ್ನು ಲೀಲಾಜಾಲವಾಗಿ ಮಾಡಿ ತೋರಿಸಿ ಶಿಬಿರಾರ್ಥಿಗಳಲ್ಲಿ ಪ್ರೇರಣೆ ಮೂಡಿಸಿದರು.
ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅನೇಕರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಆಮ್ಲಜನಕ ಕೊರತೆಯಿಂದ ದೇಹ ರೋಗದ ಗೂಡಾಗುತ್ತಿದೆ. ಬಸ್ತ್ರಿಕಾ ಪ್ರಾಣಾಯಾಮ, ಕಪಾಲಭಾತಿ, ಅನುಲೋಮ- ವಿಲೋಮ ನಿತ್ಯ ಅಭ್ಯಾಸ ಮಾಡುವುದರಿಂದ ಶೇ. 90 ರೋಗಗಳು ದೂರವಾಗುತ್ತವೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ವಿವರಿಸಿದರು.
ಶಿಬಿರದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಪಾಲ್ಗೊಂಡಿದ್ದರು. ವಾಣಿಜ್ಯನಗರಿ ಪೂರ್ಣ ಯೋಗಮಯವಾಗಿತ್ತು. ಫೆ. 3ರವರೆಗೆ ನಿತ್ಯ ಬೆಳಗ್ಗೆ 5ರಿಂದ 7.30ರವರೆಗೆ ಶಿಬಿರ ನಡೆಯಲಿದೆ.
ಬಡತನ ದೂರ: ಭಾರತದಲ್ಲಿ ಶೇ. 80 ಬಡವರು ನಶೆ ಪದಾರ್ಥ ಸೇವನೆ ಮಾಡುತ್ತಿದ್ದಾರೆ. ಡ್ರಗ್ಸ್, ನಶೆಗೆ ಸಂಬಂಧಿಸಿದ ಪದಾರ್ಥ ಸೇವನೆಯನ್ನು ಕೈ ಬಿಟ್ಟರೆ ಭಾರತದ ಶೇ. 50 ಬಡತನ ದೂರವಾಗುತ್ತದೆ. ಯಾವುದೇ ಮತ, ಪಂಥ, ಧರ್ಮದ ಹಂಗಿಲ್ಲದ ಯೋಗವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಆಗ ಭಾರತ ರೋಗಮುಕ್ತವಾಗಲಿದೆ ಎಂದು ರಾಮದೇವ್ ಹೇಳಿದರು.
ಜ್ಞಾನ, ಭಕ್ತಿ, ಕೃತಿ, ಪ್ರಕೃತಿ, ಸಂಸ್ಕೃತಿ, ಪ್ರಗತಿ ಇವುಗಳೇ ಉನ್ನತಿಯ ಮಾರ್ಗ. ಅದರ ಹೊರತಾಗಿರುವುದೆಲ್ಲ ದುರ್ಗತಿ. ರೋಗ ಮುಕ್ತ ವಿಶ್ವದ ಅಭಿಯಾನ ಆರಂಭವಾಗಿದೆ. ವಿಜ್ಞಾನ ಕ್ಕಿಂತ ಯೋಗ ಮಿಗಿಲಾದದ್ದು ಎಂದರು.
ಆರೋಗ್ಯ ಸಲಹೆ: ಮಧ್ಯಾಹ್ನ 12 ಗಂಟೆಯವರೆಗೂ ಯಾವುದೇ ತಯಾರಿಸಿದ ಆಹಾರ ತಿನ್ನಬಾರದು. ಬದಲಾಗಿ ಕಚ್ಚಾ ತರಕಾರಿ ಇಲ್ಲವೇ ಹಣ್ಣಿನ ಸಲಾಡ್, ಜ್ಯೂಸ್ ತೆಗೆದುಕೊಳ್ಳಬಹುದು. ಮಧ್ಯಾಹ್ನ 12ರಿಂದ ರಾತ್ರಿ 7 ಗಂಟೆಯೊಳಗೆ ಊಟ ಮುಗಿಸಿರಬೇಕು. ಊಟವಾದ ಒಂದು ತಾಸಿನ ಬಳಿಕ ನೀರು ಕುಡಿಯಬೇಕು. ಅದರ ಮಧ್ಯೆ ಆಹಾರ ತೆಗೆದುಕೊಳ್ಳಬಾರದು. ಉಪವಾಸ, ಉಪಾಸನೆಗೆ ಆದ್ಯತೆ ನೀಡಬೇಕು.
ಆಶೀರ್ವಚನ: ಯೋಗ ಸಾಧಕರಿಗೆ ಮಣಿಮಾಲೆ ತೊಡಿಸುವ ಮೂಲಕ ಬಾಬಾ ರಾಮದೇವ್ ಆಶೀರ್ವದಿಸಿದರು. ಪತಂಜಲಿ ಯೋಗ ಸಮಿತಿ ಹಾಗೂ ಸಂಘಟಕರು ಬಾಬಾ ರಾಮದೇವ್ ಅವರಿಗೆ ಪೇಟ ತೊಡಿಸಿ, ಶಾಲು ಹೊದೆಸಿ ಸ್ಮರಣಿಕೆ ನೀಡಿದರು. ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಹಾಗೂ ಆನಂದ ಸಂಕೇಶ್ವರ ಅವರಿಗೂ ಬಾಬಾ ರಾಮದೇವ್ ಆಶೀರ್ವಾದ ಮಾಡಿದರು. ಹೈಕೋರ್ಟ್ ನ್ಯಾಯಮೂರ್ತಿ ದಿನೇಶಕುಮಾರ, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಶ್ರೀಮತಿ ವಾಣಿ ಆನಂದ ಸಂಕೇಶ್ವರ, ಉದ್ಯಮಿವಿ.ಎಸ್.ವಿ. ಪ್ರಸಾದ, ಬ್ರಹ್ಮಕುಮಾರ ಬಸವರಾಜ ರಾಜಋಷಿ, ರವೀಂದ್ರ ದಂಡಿನ ಇತರರು ಇದ್ದರು.
ದಿಗ್ವಿಜಯದಲ್ಲಿ ನೇರ ಪ್ರಸಾರ
ದಿಗ್ವಿಜಯ ನ್ಯೂಸ್ ಚಾನೆಲ್ ಯೋಗ ಶಿಬಿರವನ್ನು ನೇರ ಪ್ರಸಾರ ಮಾಡುತ್ತಿದೆ. ಬೆಳಗ್ಗೆ 5ರಿಂದ 7.30ರವರೆಗೆ ಪ್ರಸಾರವಾಗಲಿದ್ದು, ಶಿಬಿರಕ್ಕೆ ಬರಲಾಗದಿದ್ದವರು ಮನೆಯಲ್ಲೇ ಕುಳಿತು ವೀಕ್ಷಿಸಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
