|ಹರೀಶ್ ಬೇಲೂರುಬೆಂಗಳೂರು
ಸಾರ್ವಜನಿಕರ ಠೇವಣಿ ಹಣ ನುಂಗುತ್ತಿರುವ ಸೊಸೈಟಿಗಳ ಭ್ರಷ್ಟಾಚಾರ ಬಗೆದಷ್ಟೂ ಮೇಲೇಳುತ್ತಿದೆ. ಕೆಲ ಸೊಸೈಟಿಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿಯಿಂದ ‘ಕಮೀಷನ್’ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಸಿಕ್ಕಸಿಕ್ಕವರಿಗೆ ಕೋಟ್ಯಂತರ ರೂ. ಸಾಲ ಕೊಟ್ಟು ಸೊಸೈಟಿಗಳು ದಿವಾಳಿಯಾಗಲು ನಕಲಿ ಠೇವಣಿ, ಬೇನಾಮಿ ಹೆಸರಿನಲ್ಲಿ ವ್ಯವಹಾರ ಮತ್ತು ಕಮಿಷನ್ ದಂಧೆಯೂ ಕಾರಣ ಎಂಬ ಸಂಗತಿ ತನಿಖಾ ಸಂಸ್ಥೆಗಳ ಪರಿಶೀಲನೆ ಯಲ್ಲಿ ಬಯಲಾಗಿದೆ. ಅಲ್ಲದೆ, ಕೆಲ ಸೊಸೈಟಿ ಹಾಗೂ ಬ್ಯಾಂಕ್​ಗಳು ಅಧಿಕೃತ ಮತ್ತು ಅನಧಿಕೃತ ಎಂದು ಎರಡು ರೀತಿ ‘ಸಾಫ್ಟ್​ವೇರ್’ ಬಳಸಿ ವಂಚಿಸುತ್ತಿವೆ.
ರಾಜ್ಯಾದ್ಯಂತ ಕೋ ಆಪರೇಟಿವ್ ಸೊಸೈಟಿಗಳಲ್ಲಿ ಮಲ್ಟಿಲೆವೆಲ್ ಮಾರ್ಕೆಟಿಂಗ್ ಸ್ಕೀಮ್ ದಂಧೆ ನಡೆಯುತ್ತಿದೆ. ಸೊಸೈಟಿಗಳ ಅಧ್ಯಕ್ಷರು, ನಿರ್ದೇಶಕರು ಬೇರೆಯವರಿಗೆ ಸಾಲ ಮಂಜೂರು ಮಾಡುವಾಗ ಶೇ.2 ಕಮಿಷನ್ ನಿಗದಿಪಡಿಸಿ ಪಡೆಯುವ ಆರೋಪವಿದೆ. ಅಲ್ಲದೆ, ಸೊಸೈಟಿಗಳು ಠೇವಣಿ ಇಡುವವರ ಬಳಿ ನಿಮ್ಮ ಸ್ನೇಹಿತರಿಂದ, ಸಂಬಂಧಿಕರಿಂದ, ಪರಿಚಯಸ್ಥರಿಂದ ಸಾಧ್ಯವಾದಷ್ಟು ಹೆಚ್ಚು ಠೇವಣಿ ಇರಿಸಲು ಸೂಚಿಸುತ್ತಾರೆ. ಅಧಿಕ ಬಡ್ಡಿ ಕೊಡುವ ಆಸೆ ತೋರಿಸಿ ಠೇವಣಿ ಇರಿಸುವಂತೆ ಹೇಳಿ, ಕಮಿಷನ್ ಕೊಡುವ ಆಮಿಷವೊಡ್ಡಿ ಆರ್ಥಿಕ ವ್ಯವಹಾರ ಹೆಚ್ಚಿಸಿಕೊಳ್ಳುವ ಕಳ್ಳಾಟ ನಡೆಯುತ್ತಿದೆ. ಎರಡೆರಡು ಸಾಫ್ಟ್​ವೇರ್: ಠೇವಣಿದಾರರ ಹಣ ದುರ್ಬಳಕೆಗಾಗಿ ಎರಡು ಸಾಫ್ಟ್​ವೇರ್ ರೂಪಿಸಲಾಗುತ್ತಿದೆ.
ಹೀಗೂ ನಡೆಯುತ್ತೆ ವಂಚನೆ:
| ಡಾ.ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರುಮುಖ್ಯ ಪೋಷಕರು, ಶ್ರೀ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಠೇವಣಿದಾರರ ಹಿತರಕ್ಷಣಾ ವೇದಿಕೆ
ಬೆಂಗಳೂರಿನಲ್ಲೇ ಹೆಚ್ಚು ಅಕ್ರಮ..?
ಖಾತೆದಾರರು ಪ್ರತಿನಿತ್ಯ ಪಾವತಿಸುವ ಹಣ, ಠೇವಣಿದಾರರ ನಿಶ್ಚಿತ ಠೇವಣಿ ಹಣವನ್ನು ಸಮರ್ಪಕವಾಗಿ ನಮೂದಿಸಿಕೊಳ್ಳಲು ಅಥವಾ ಬ್ಯಾಂಕಿನ ವ್ಯವಹಾರ ನಡೆಸಲು ಒಂದು ಸಾಫ್ಟ್ ವೇರ್ ಬಳಸಿಕೊಂಡರೆ, ಅದೇ ಮೊತ್ತವನ್ನು ಇನ್ನೊಂದು ಸಾಫ್ಟ್​ವೇರ್​ನಲ್ಲಿ ತಪು್ಪ ಮಾಹಿತಿಯಾಗಿ ನಮೂದಿಸುವ ಮೂಲಕ ಸೊಸೈಟಿಗಳು ಕೋಟ್ಯಂತರ ರೂ. ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪ್ರತಿ ವರ್ಷ ನಡೆಯುವ ಸೊಸೈಟಿಗಳ ಲೆಕ್ಕಪರಿಶೋಧನೆ ಹಾಗೂ ಸಹಕಾರ ಇಲಾಖೆಗೆ ತಪು್ಪ ಮಾಹಿತಿ ನೀಡಲು ಸಾಫ್ಟ್​ವೇರ್ ಬಳಸಿಕೊಳ್ಳಲಾಗುತ್ತಿದೆ.
ಏಕರೂಪ ಸಾಫ್ಟ್​ವೇರ್​ನಿಂದ ಅಕ್ರಮಕ್ಕೆ ಬ್ರೇಕ್: ರಾಷ್ಟ್ರೀಕೃತ, ಅರ್ಬನ್ ಕೋ ಆಪರೇಟಿವ್ ಹಾಗೂ ಶೆಡ್ಯೂಲ್ಡ್ ಬ್ಯಾಂಕ್​ಗಳು ಆರ್​ಬಿಐ ನಿಯಂತ್ರಣದಲ್ಲಿವೆ. ಸಾಫ್ಟ್​ವೇರ್ ಮೂಲಕ ನಡೆಯುವ ಈ ಬ್ಯಾಂಕಿನ ಆರ್ಥಿಕ ವ್ಯವಹಾರಗಳು ಆರ್​ಬಿಐಗೆ ತಿಳಿಯುತ್ತದೆ. ಆದರೆ, ಆರ್​ಬಿಐ ವ್ಯಾಪ್ತಿಗೆ ಒಳಪಡದ ಸೊಸೈಟಿಗಳ ಆರ್ಥಿಕ ವ್ಯವಹಾರಗಳು ಯಾರಿಗೂ ಗೊತ್ತಾಗುವುದಿಲ್ಲ. ಹಾಗಾಗಿ, ಈ ಸೊಸೈಟಿಗಳ ವ್ಯವಹಾರದಲ್ಲಿ ಪಾರದರ್ಶಕತೆ ತರಲು ಸರ್ಕಾರ, ರಾಜ್ಯಾದ್ಯಂತ ಏಕರೂಪ ಸಾಫ್ಟ್ ವೇರ್ ಅಭಿವೃದ್ಧಿಪಡಿಸಬೇಕು. ಇದರ ನಿಯಂತ್ರಣವನ್ನು ಆರ್​ಬಿಐಗೆ ಮೇಲ್ವಿಚಾ ರಣೆ ನಡೆಸಲು ವಹಿಸಬೇಕು. ಇದರಿಂದಾಗಿ ಸೊಸೈಟಿಗಳಲ್ಲಿ ನಡೆಯುವ ಅಕ್ರಮಗಳಿಗೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವ ಜತೆಗೆ ಠೇವಣಿದಾರರ ಹಣವೂ ಸುರಕ್ಷಿತವಾಗಿರಲಿದೆ ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ.
ಭದ್ರತೆ ಇಲ್ಲದೆ -1323 ಕೋಟಿ ರೂ. ಸಾಲ:ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿ ಪ್ರಧಾನ ಕಚೇರಿ ಹೊಂದಿರುವ ಕೋ ಆಪರೇಟಿವ್ ಬ್ಯಾಂಕ್​ನಲ್ಲೇ 2400 ಕೋಟಿ ರೂ. ಹಗರಣ ನಡೆದಿದೆ. ಈ ಬ್ಯಾಂಕ್​ನಿಂದ 5,336 ಖಾತೆಗಳಿಂದ 1,584.85 ಕೋಟಿ ರೂ. ಸಾಲ ನೀಡಲಾಗಿದೆ. ಈ ಪೈಕಿ ಭದ್ರತೆ ಇಲ್ಲದೆ 69 ಜನರ ಹೆಸರಿನಲ್ಲಿ 2,876 ಖಾತೆಗಳಿಗೆ 1,323 ಕೋಟಿ ರೂ. ಸಾಲ ವಿತರಿಸಿದೆ. ಈ ಬ್ಯಾಂಕ್​ನಲ್ಲಿ 120 ಸೊಸೈಟಿಗಳು, ಸಾವಿರಾರು ಗ್ರಾಹಕರು ಠೇವಣಿ ಇಟ್ಟಿದ್ದಾರೆ. ಸಿಐಡಿ ತನಿಖಾ ವರದಿ ಪ್ರಕಾರ ಈ ಬ್ಯಾಂಕ್​ನಲ್ಲಿ 69 ಮಂದಿ ಸಾಲ ಪಡೆದಿದ್ದಾರೆ. ಅದರಲ್ಲಿ 10.81 ಕೋಟಿ ರೂ. ಸಾಲ ಪಡೆದ ವ್ಯಕ್ತಿ ಈಗ 12.12 ಕೋಟಿ ರೂ. ಹಿಂತಿರುಗಿಸಲು ಬಾಕಿಯಿದೆ. 113.14 ಕೋಟಿ ರೂ. ಸಾಲ ಪಡೆದವರು 139.85 ಕೋಟಿ ರೂ. ಹಿಂತಿರುಗಿಸಬೇಕಿದೆ. 136.18 ಸಾಲ ಪಡೆದ ವ್ಯಕ್ತಿ 153.50 ಕೋಟಿ ರೂ. ನೀಡಬೇಕಿದೆ. 39.3 ಕೋಟಿ ರೂ., 25.78 ಕೋಟಿ, 55 ಕೋಟಿ ಹೀಗೆ ಕೋಟ್ಯಂತರ ರೂ. ಸಾಲ ಪಡೆದು ಕಂತು ಪಾವತಿಸಿಲ್ಲ, ಬಡ್ಡಿಯೂ ಕಟ್ಟಿಲ್ಲ.
ರಾಜಕೀಯ ಹಿಡಿತ:ರಾಜ್ಯದ ಶೇ.75 ಸೊಸೈಟಿಗಳ ಅಧ್ಯಕ್ಷರು ರಾಜಕೀಯ ಹಿನ್ನೆಲೆ ಹೊಂದಿರುವವರು ಆಗಿರುತ್ತಾರೆ. ಕಾಪೋ ರೇಟರ್​ನಿಂದ ಹಿಡಿದು ಎಂಎಲ್​ಎ ಆಗಿರು ವವರು ಸೊಸೈಟಿಗಳ ಪ್ರಮುಖ ಹುದ್ದೆಗಳಲ್ಲಿ ಕುಳಿತು ಕಾರ್ಯಭಾರ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಇಲ್ಲದಿದ್ದರೆ ಅವರ ಸಂಬಂಧಿಕರು ಅಥವಾ ಕುಟುಂಬಸ್ಥರು ಅಧಿಕಾರ ಚಲಾಯಿಸಿರುತ್ತಾರೆ. ಒಕ್ಕೂಟ ವ್ಯವಸ್ಥೆಗೆ ಸಹಕಾರ ಸಂಘಗಳು ತುಂಬಾ ಬಲಾಢ್ಯವಾಗಿದೆ. ಅದೇ ರೀತಿ, ಒಕ್ಕೂಟ ವ್ಯವಸ್ಥೆಯನ್ನೇ ಹಾಳು ಮಾಡುವುದಕ್ಕೆ ಅಷ್ಟೇ ಆಧ್ವಾನಗಳೂ ನಡೆದಿವೆ.
ರಾಜ್ಯಾದ್ಯಂತ ವಿವಿಧ ಕಾರಣಕ್ಕಾಗಿ ಸೊಸೈಟಿಗಳ ವಿರುದ್ಧ 2017-18ರಿಂದ 2021ರ ಡಿಸೆಂಬರ್​ವರೆಗೆ ಸಹಕಾರ ಇಲಾಖೆಯಲ್ಲಿ 923 ದೂರುಗಳು ದಾಖಲಾಗಿವೆ. ಇದರಲ್ಲಿ ಬರೀ 166 ದೂರುಗಳು ವಿಲೇವಾರಿಯಾಗಿದ್ದು, ಉಳಿದ ಕೇಸ್​ಗಳು ತನಿಖೆ ಹಂತದಲ್ಲೇ ಇವೆ.
2021ರ ಮಾ.31ರ ಅಂತ್ಯಕ್ಕೆ ರಾಜ್ಯಾದ್ಯಂತ ದಿವಾಳಿಯಾಗಿರುವ 3983 ಸೊಸೈಟಿಗಳ ಜಿಲ್ಲಾವಾರು ಪಟ್ಟಿಯನ್ನು ಸರ್ಕಾರವೇ ಬಿಡುಗಡೆ ಮಾಡಿದೆ. ದಿವಾಳಿ ಸೊಸೈಟಿಗಳ ಮಾಹಿತಿ:


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + twelve =
Remember me
