| ಕೇಶವಮೂರ್ತಿ ವಿ.ಬಿ. ಹಾವೇರಿರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್​ನ ಬಿಲ್ ಪಾವತಿಗೂ ಅಧಿಕಾರಿಗಳು ಕಮಿಷನ್ ಕೇಳಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಹಾವೇರಿ, ಹಿರೇಕೆರೂರ ಹಾಗೂ ರಾಣೆಬೆನ್ನೂರಿನ ಮೂರು ಇಂದಿರಾ ಕ್ಯಾಂಟೀನ್​ಗಳ ಒಂದು ವರ್ಷ ಅವಧಿಯ 35 ಲಕ್ಷ ರೂಪಾಯಿಗೂ ಅಧಿಕ ಬಿಲ್ ಬಾಕಿ ಇದೆ. ಬಿಲ್ ಬಿಡುಗಡೆಗಾಗಿ ಹಲವು ಬಾರಿ ಮನವಿ ಮಾಡಿದ್ದರೂ ಹಾವೇರಿ ಮತ್ತು ರಾಣೆಬೆನ್ನೂರ ನಗರಸಭೆ, ಹಿರೇಕೆರೂರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಬಿಲ್ ಪಾವತಿಗೆ ಕಮಿಷನ್ ಕೊಡಬೇಕು ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ಮೂರೂ ಇಂದಿರಾ ಕ್ಯಾಂಟೀನ್ ನಡೆಸುತ್ತಿರುವ ಯಾದಗಿರಿ ಜಿಲ್ಲೆ ಶಹಾಪುರದ ನಿರ್ಮಲಾದೇವಿ ಮಹಿಳಾ ಮಂಡಳದ ಕಾರ್ಯದರ್ಶಿ ವಿಶ್ವನಾಥ ರೆಡ್ಡಿ ದರ್ಶನಾಪುರ ಆರೋಪಿಸಿದ್ದಾರೆ.
ನಾನೇ ಐದು ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದೇನೆ. ರಾಣೆಬೆನ್ನೂರ ಕ್ಯಾಂಟೀನ್​ಗೆ 2 ಲಕ್ಷ ರೂ. ಖರ್ಚು ಮಾಡಿ ಕೆಲ ಅಗತ್ಯ ವಸ್ತುಗಳನ್ನು ತರಿಸಿದ್ದೇನೆ. ಎಲ್ಲ ಹಣವನ್ನೂ ಕೈಯಿಂದ ಖರ್ಚು ಮಾಡಿ ಉದ್ಘಾಟನೆ ಮಾಡಿಸಿದ್ದೇನೆ. ಈವರೆಗೂ ಸರ್ಕಾರದಿಂದ ನನಗೆ ಒಂದು ರೂಪಾಯಿಯೂ ಬಂದಿಲ್ಲ. ಎರಡು ತಿಂಗಳಿಂದ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳವನ್ನೂ ನೀಡಿಲ್ಲ. ಇದರಿಂದಾಗಿ ಕ್ಯಾಂಟೀನ್​ಗಳು ಆಗಾಗ ಬಂದ್ ಆಗುತ್ತಿವೆ ಎನ್ನುತ್ತಾರೆ ವಿಶ್ವನಾಥ ರೆಡ್ಡಿ.
2022ರ ಆಗಸ್ಟ್ 5ರಂದು ಜಿಲ್ಲಾಧಿಕಾರಿ ತಮ್ಮ ಸಂಸ್ಥೆಗೆ ಟೆಂಡರ್ ನೀಡಿದ್ದು, ಇದೀಗ ಟೆಂಡರ್ ಅವಧಿ ಮುಗಿದಿದೆ. ಸಂಸ್ಥೆಯಿಂದ ಭರಿಸಿದ ವೆಚ್ಚ ಈವರೆಗೆ ಸಂದಾಯವಾಗದ ಕಾರಣ ಕ್ಯಾಂಟೀನ್ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಮ್ಮ ಸಂಸ್ಥೆಯ ಟೆಂಡರ್ ಆದೇಶವನ್ನು ರದ್ದುಪಡಿಸಿ ಎಂದು ಜಿಲ್ಲಾಧಿಕಾರಿಗೆ ಕಳೆದ ಆಗಸ್ಟ್ 10ರಂದು ವಿಶ್ವನಾಥ ರೆಡ್ಡಿ ಪತ್ರ ಬರೆದಿದ್ದಾರೆ.

ಡಿಯುಡಿಸಿಯಿಂದ ನನಗೆ ಬಂದಿರುವ ಮಾಹಿತಿ ಪ್ರಕಾರ ಟೆಂಡರ್​ದಾರರು ಈವರೆಗೆ ಬಿಲ್ ಸಲ್ಲಿಸಿಲ್ಲ. ಒಂದು ಬಾರಿಯೂ ಅವರು ನನ್ನನ್ನು ಭೇಟಿ ಮಾಡಿಲ್ಲ. ಈ ಸಮಸ್ಯೆ ಕುರಿತು ನನ್ನ ಗಮನಕ್ಕೆ ತಂದಿಲ್ಲ. ಬಿಲ್ ಸಲ್ಲಿಸಿ ನನ್ನನ್ನು ಭೇಟಿಯಾದರೆ ಕೂಡಲೇ ಸಮಸ್ಯೆ ಬಗೆಹರಿಸುತ್ತೇನೆ.
| ರಘುನಂದನಮೂರ್ತಿ, ಡಿಸಿ
ಬಡವರಿಗೆ ಅನುಕೂಲವಾಗಲಿ ಎಂಬ ಸಿಎಂ ಸಿದ್ದರಾಮಯ್ಯ ಕನಸಿಗೆ ಸ್ಥಳೀಯ ಸಂಸ್ಥೆಯ ಕೆಲ ಅಧಿಕಾರಿಗಳು ವಿರುದ್ಧವಾಗಿದ್ದಾರೆ. ಒಂದು ವರ್ಷದ ಬಾಕಿ 35 ಲಕ್ಷ ರೂ. ಪಾವತಿಗೆ ಶೇ.10 ಕಮಿಷನ್ ಕೇಳುತ್ತಿದ್ದಾರೆ. ಸರ್ಕಾರ ಬಾಕಿ ನೀಡಲು ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು.
| ವಿಶ್ವನಾಥ ರೆಡ್ಡಿ ದರ್ಶನಾಪುರ, ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ
ಪರ್ಸೆಂಟೇಜ್ ವ್ಯವಹಾರ!:ಹಿರೇಕೆರೂರ ಪಟ್ಟಣ ಪಂಚಾಯಿತಿ ಹಿಂದಿನ ಕಮಿಷನರ್ ಇಂದಿರಾ ಕ್ಯಾಂಟೀನ್ ಬಿಲ್ ಕ್ಲಿಯರ್ ಮಾಡಲು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. 40 ಸಾವಿರ ರೂ. ಮಾತ್ರ ಕೊಟ್ಟ ಕಾರಣಕ್ಕೆ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು. ಶೇ.10 ಪರ್ಸೆಂಟ್ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೆ 80 ಸಾವಿರ ರೂ. ಪಡೆದರೂ ಬಿಲ್ ಮೊತ್ತ ನೀಡಲಿಲ್ಲ. ಕೆಲ ದಿನಗಳ ನಂತರ ಪ್ರಕರಣವೊಂದರಲ್ಲಿ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಹಾವೇರಿ ಹಾಗೂ ರಾಣೆಬೆನ್ನೂರ ನಗರಸಭೆ ಅಧಿಕಾರಿಗಳೂ ಕಮಿಷನ್​ಗೆ ಬೇಡಿಕೆ ಇಟ್ಟಿದ್ದು, ಈವರೆಗೂ ಬಿಲ್ ಕ್ಲಿಯರ್ ಮಾಡಿಲ್ಲ’ ಎಂದು ರೆಡ್ಡಿ ಹೇಳಿದ್ದಾರೆ.
#NoBindiNoBusiness | ಹಿಂದೂಗಳಿಂದ ಮತ್ತೆ ಅಭಿಯಾನ, ಟ್ರೆಂಡ್ ಆಯ್ತು ಕ್ಯಾಂಪೇನ್..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
