ಸತೀಶ್ ಕೆ.ಬಳ್ಳಾರಿ ಬೆಂಗಳೂರು
ಕರೊನಾ ಲಾಕ್​ಡೌನ್​ನಿಂದ ಸಂಕಷ್ಟ ಕ್ಕೀಡಾಗಿರುವವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಹಂಚಿಕೆ ಪ್ರಕ್ರಿಯೆಯಲ್ಲೂ ಕಮಿಷನ್ ದಂಧೆ ಶುರುವಾಗಿದೆ. ಧನಸಹಾಯ ಪಡೆಯಲು ಮಧ್ಯವರ್ತಿಗಳಿಗೆ ಶೇ.5 ರಿಂದ ಶೇ.25ರವರೆಗೆ ಲಂಚ ನೀಡಬೇಕಾದ ಪರಿಸ್ಥಿತಿ ಇದ್ದು, ಈ ದಂಧೆ ಹಿಂದೆ ಕೆಲ ಅಧಿಕಾರಿಗಳೇ ಶಾಮೀಲಾಗಿರುವ ಆರೋಪ ಕೇಳಿಬಂದಿದೆ.
ಹೂವು ಬೆಳೆಗಾರರಿಗೆ ತಲಾ 25 ಸಾವಿರ ರೂ., ಮಡಿವಾಳ ಮತ್ತು ಕ್ಷೌರಿಕರಿಗೆ ತಲಾ 3 ಸಾವಿರ ರೂ., ಆಟೋ, ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ. ಧನಸಹಾಯ ಸೇರಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವವರಿಗಾಗಿ ಸರ್ಕಾರ 2000 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದೆ.
ಆದರೆ ಧನಸಹಾಯ ಪಡೆಯುವ ಸ್ಪಷ್ಟ ನಿಯಮಾವಳಿ ಹೊರಡಿಸುವ ಮುನ್ನವೇ ನೆರವು ಕೊಡಿಸುವ ನೆಪದಲ್ಲಿ ಅಮಾಯಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ.
ಇದನ್ನೂ ಓದಿಮಾಸ್ಕ್​ ಧರಿಸದವರಿಗೆ ರೈಲ್ವೆ ಟ್ರ್ಯಾಕ್ ಬಳಿ ಉರುಳುವ ಶಿಕ್ಷೆ !
ಚಾಲಕರಿಗೂ ಮೋಸ: ರಾಜ್ಯದ 7.75 ಲಕ್ಷ ಆಟೋ- ಟ್ಯಾಕ್ಸಿ ಚಾಲಕರಿಗೆ ತಲಾ 5 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಸೇವಾಸಿಂಧು ಪೋರ್ಟಲ್ ಮೂಲಕ ಹಣ ಪಡೆಯಲು ಸಾರಿಗೆ ಇಲಾಖೆ ಹೇಳಿದೆ. ಆದರೆ, ಈವರೆಗೆ ವೆಬ್​ಸೈಟ್​ನಲ್ಲಿ ಲಿಂಕ್ ಹಾಕಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಚಾಲಕರ ಡಿಎಲ್, ಆಧಾರ್​ಕಾರ್ಡ್ ಹಾಗೂ ಬ್ಯಾಂಕ್ ಖಾತೆ ದಾಖಲೆ ಜತೆಗೆ ತಲಾ 500 ರೂ. ಸಂಗ್ರಹಿಸುತ್ತಿದ್ದಾರೆ.
ಪ್ರಕ್ರಿಯೆ ಶುರುವಾಗಿಲ್ಲ
ರಾಜ್ಯದ 2.30 ಲಕ್ಷ ಕ್ಷೌರಿಕರು ಹಾಗೂ 60 ಸಾವಿರಕ್ಕೂ ಹೆಚ್ಚು ಮಡಿವಾಳ ವೃತ್ತಿ ಮಾಡುವವರಿಗೆ ತಲಾ 5 ಸಾವಿರ ರೂ. ಪ್ರೋತ್ಸಾಹಧನ ಘೋಷಿಸಲಾಗಿದೆ. ಆದರೆ ಇವರಿಗೆ ಯಾವ ಮಾರ್ಗದಲ್ಲಿ ಹಣ ಪಡೆಯಬೇಕು ಎಂಬ ಮಾನದಂಡಗಳೇ ಬಿಡುಗಡೆಯಾಗಿಲ್ಲ. ಆನ್​ಲೈನ್ ಅರ್ಜಿ ಭರಿಸುವ ಹೆಸರಲ್ಲಿ ಮಧ್ಯವರ್ತಿಗಳು 100 ರಿಂದ 200 ರೂ. ವಸೂಲಿ ಮಾಡುತ್ತಿರುವುದು ಬಯಲಾಗಿದೆ.
ಬಾಯ್ಬಿಟ್ಟು ಕೇಳುತ್ತಾರೆ
ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಸಲ್ಲಿಕೆಗೆ ಹೋದಾಗ ನಮ್ಮ ಭೂಮಿಯಲ್ಲಿ ಅರ್ಧ ಎಕರೆ ಮಾತ್ರ ಹೂವಿನ ಬೆಳೆ ಇತ್ತು. ಆಗ ಅಧಿಕಾರಿಗಳು1 ಎಕರೆ ಪ್ರದೇಶವನ್ನು ಹೂವಿನ ಬೆಳೆ ಎಂದು ಸೇರಿಸಿದರೆ 10 ಸಾವಿರ ರೂ. ಹಣ ಬರುತ್ತದೆ. ನಮಗೆ 1 ಸಾವಿರ ರೂ. ನೀಡಿದರೆ ಅರ್ಧ ಎಕರೆ ಬೆಳೆ ಸೇರಿಸುತ್ತೇವೆ ಎಂದರು. 500 ರೂ. ಕೊಡುವುದಾಗಿ ಹೇಳಿದಾಗ, ನಾವು ಹಣ ಪಡೆದರೂ ಅದರಲ್ಲಿ ಮೇಲಧಿಕಾರಿಗಳು ಹಾಗೂ ನಿಮ್ಮ ಜಮೀನಿಗೆ ಸ್ಥಳಭೇಟಿ ಮಾಡುವ ಸಮಿತಿಯವರಿಗೂ ಕೊಡಬೇಕು. ಹೀಗಾಗಿ 1 ಸಾವಿರ ರೂ ಕೊಡುವಂತೆ ಕೇಳಿದ್ದಾಗಿ ಬೆಂಗಳೂರು ಹೊರವಲಯದ ರೈತರೊಬ್ಬರು ಹೇಳಿದರು.
ಇದನ್ನೂ ಓದಿಉತ್ತರ ಪ್ರದೇಶ ಸರ್ಕಾರದಿಂದ 15 ಕೋಟಿ ರೂಪಾಯಿ ಮೊತ್ತದ ಮೊದಲ ಕಂತು ಬಿಡುಗಡೆ
ಯಾವ ಜಿಲ್ಲೆಗಳಲ್ಲಿ ದಂಧೆ?
ಮೈಸೂರು- ಮಧ್ಯವರ್ತಿಗಳು ಅಧಿಕಾರಿಗಳ ಹೆಸರಲ್ಲಿ ಲಂಚ ಪಡೆಯುತ್ತಿದ್ದಾರೆ. ಶೀಘ್ರ ಹಣ ಕೊಡಿಸುವ ಆಮಿಷವೊಡ್ಡಿ ಕಾರ್ವಿುಕರಿಂದ ತಲಾ 200- 500 ರೂ. ಹಣ ಪಡೆದು ವಂಚಿಸುತ್ತಿರುವ ಆರೋಪ ಕೇಳಿಬಂದಿದೆ. ಹೂ ಬೆಳೆದ ರೈತರು ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸುವಾಗಲೂ ಮಧ್ಯವರ್ತಿಗಳು ರೈತರಿಂದ ಹಣ ವಸೂಲು ಮಾಡುತ್ತಿರುವ ದೂರುಗಳು ಕೇಳಿಬಂದಿವೆ.
ಬೆಳಗಾವಿ- ಆಟೋ, ಟ್ಯಾಕ್ಸಿ ಚಾಲಕರು, ಕ್ಷೌರಿಕ, ಟೇಲರ್, ಮಡಿವಾಳರು 5 ಸಾವಿರ ರೂ. ಸಹಾಯಧನಕ್ಕಾಗಿ ಮಧ್ಯವರ್ತಿಗಳಿಗೆ, ಜಿಲ್ಲಾ, ತಾಲೂಕು ಮಟ್ಟದ ಸಂಘಟನೆಗಳ ಮುಖಂಡರಿಗೆ 250 ರೂ. ದಿಂದ 500 ರೂ. ವರೆಗೆ ನೀಡುತ್ತಿದ್ದಾರೆ.
ಶಿವಮೊಗ್ಗ- 3 ದಿನಗಳ ಹಿಂದೆ ಆರ್​ಟಿಒ ಕಚೇರಿ ಬಳಿ ಆಟೋ ಚಾಲಕರ ಮಾಹಿತಿ ಕಲೆಹಾಕುತ್ತಿದ್ದ ವ್ಯಕ್ತಿಯೊಬ್ಬನನ್ನು ಆಟೋ ಚಾಲಕರೇ ತರಾಟೆಗೆ ತೆಗೆದುಕೊಂಡಿದ್ದರು. ಕೆಲವೆಡೆ ನೋಂದಣಿಗೆ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ.
ಹಾವೇರಿ- ಅರ್ಜಿ ಭರ್ತಿ ಮಾಡಲು ಸೈಬರ್ ಕೇಂದ್ರಗಳಲ್ಲಿ 50ರೂ. ಪಾವತಿಸಿ ಸೇವಾ ಸಿಂಧು ವೆಬ್​ಸೈಟ್ ಮೂಲಕ ಹೆಸರು ನೋಂದಣಿ ಮಾಡಿಸುತ್ತಿದ್ದಾರೆ. ಕ್ಷೌರಿಕರು ಹಾಗೂ ಮಡಿವಾಳ ಸಮುದಾಯದವರಿಗೆ ಸ್ಪಷ್ಟ ಮಾರ್ಗಸೂಚಿಯಿಲ್ಲದ ಕಾರಣ ಕೆಲವು ಸಂಘಟನೆಗಳು 50 ರೂ.ಗೆ ಪಡೆದು ಅರ್ಜಿ ಸ್ವೀಕರಿಸುತ್ತಿದ್ದಾರೆ.
ಉತ್ತರ ಕನ್ನಡ-ಸೈಬರ್ ಕೇಂದ್ರಗಳಲ್ಲಿ ಮೊದಲು ನಿಮ್ಮದೇ ಅರ್ಜಿ ಭರ್ತಿ ಮಾಡುವುದಾಗಿ ದಾಖಲೆಗಳೊಂದಿಗೆ ತಲಾ 100 ರೂ. ಪಡೆಯಲಾಗುತ್ತಿದೆ.
ರಾಯಚೂರು-ಕಾರ್ವಿುಕರ ನೋಂದಣಿಗೆ ಮಧ್ಯವರ್ತಿಗಳು ಅರ್ಜಿ ಭರ್ತಿಗೆ 100 ರಿಂದ 150 ರೂ. ಪಡೆಯುತ್ತಿದ್ದಾರೆ.
ಸಮಿತಿಯಿಂದ ಧೋಖಾ
ರೈತರ ಪಹಣಿಯಲ್ಲಿ ಹೂವಿನ ಬೆಳೆ ಎಂದು ನಮೂದಾಗದಿದ್ದರೆ, ಸ್ಥಳ ಭೇಟಿ ಮೂಲಕ ಒಪ್ಪಿಗೆ ನೀಡಲು ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿ ರಚಿಸಲಾಗಿದೆ. ಆದರೆ, ಫಲಾನುಭವಿಗಳ ಅರ್ಜಿ ತುಂಬುವಾಗ, ಹೆಚ್ಚು ವಿಸ್ತೀರ್ಣದಲ್ಲಿ ಹೂವು ಬೆಳೆದಿದೆ ಎಂದು ನಮೂದಿಸುವ ಮೂಲಕ ಅಧಿಕಾರಿಗಳು ಹಣ ಪಡೆಯುತ್ತಿದ್ದಾರೆ.
25 ಸಾವಿರಕ್ಕೆ 5 ಸಾವಿರ ಲಂಚ
ಲಾಕ್​ಡೌನ್ ಅವಧಿಯಲ್ಲಿ ಹೂವು ಕಟಾವಿಗೆ ಬಂದಿದ್ದು, ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದವರನ್ನು ಗುರುತಿಸಿ ಹೆಕ್ಟೇರ್​ಗೆ ತಲಾ 25 ಸಾವಿರ ರೂ.ನಂತೆ (1 ಎಕರೆಗೆ 10 ಸಾವಿರ ರೂ.) ಪರಿಹಾರ ನೀಡಲಾಗುತ್ತದೆ. ಆದರೆ ಬಹುತೇಕರು ತುಂಡು ಭೂಮಿ ಹೊಂದಿದ್ದಾರೆ. ಇದರಲ್ಲಿ ವಿವಿಧ ಬೆಳೆಗಳನ್ನು ಹೊಂದಿದ್ದರೆ ಅದನ್ನು ಹೂವಿನ ಬೆಳೆ ಎಂದು ಅರ್ಜಿಯಲ್ಲಿ ಪರಿಗಣಿಸಲು 25 ಸಾವಿರ ರೂ. ಪರಿಹಾರಕ್ಕೆ 5 ಸಾವಿರ ರೂ. ಕೊಡಬೇಕು.
ಪತ್ರ ಅಭಿಯಾನದ ಮೋಸಜಾಲ
ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿ ಕೆಲವು ಭಾಗಗಳಲ್ಲಿ ಮಧ್ಯವರ್ತಿಗಳು ಕಾರ್ವಿುಕರಿಂದ ದಾಖಲೆಗಳನ್ನು ಸಂಗ್ರಹಿಸಿ ಸಿಎಂಗೆ ಪೋಸ್ಟ್ ಕಳಿಸುವುದಾಗಿ ಸುಳ್ಳು ಹೇಳಿ ತಲಾ 500 ರೂ. ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.
ಅಂಫಾನ್ ಚಂಡಮಾರುತ ಸಂತ್ರಸ್ತರ ರಕ್ಷಣೆ ವೇಳೆಯೂ ಕರೊನಾ ನಿಯಮ ಪಾಲನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 3 =
Remember me
