2019 ಏ.1ಕ್ಕಿಂತ ಮುಂಚೆ ನೋಂದಣಿಯಾಗಿರುವ ವಾಹನಗಳಿಗೆ ಕಡ್ಡಾಯವಾಗಿ ಹೈಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್​ಎಸ್​ಆರ್​ಪಿ) ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ಸಾರಿಗೆ ಇಲಾಖೆ, ನ. 17ರ ಒಳಗಾಗಿ ಬದಲಾವಣೆ ಮಾಡದಿದ್ದರೆ ದಂಡ ವಿಧಿಸುವ ಎಚ್ಚರಿಕೆ ಕೊಟ್ಟಿದೆ. ಆದರೆ, ಅರ್ಹತೆ ಇಲ್ಲದ ಕಂಪನಿಗಳಿಗೆ ನಂಬರ್ ಪ್ಲೇಟ್ ಅಳವಡಿಸುವ ಟೆಂಡರ್ ಕೊಟ್ಟಿರುವ ಆರೋಪದಲ್ಲಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿರುವ ಬೆನ್ನಲ್ಲೇ ನಂಬರ್ ಪ್ಲೇಟ್ ಹಾಕಲು ಸ್ಲಾಟ್ ಬುಕ್ಕಿಂಗ್ ಹೆಸರಲ್ಲಿ ಜನರಿಂದ ಕಮೀಷನ್ ವಸೂಲಿ ದಂಧೆ ಶುರುವಾಗಿದೆ. ನಿಯಮಾನುಸಾರ ಟೆಂಡರ್ ನಡೆಸದೆ, ಕ್ರಿಮಿನಲ್ ಹಿನ್ನೆಲೆಯುಳ್ಳ ಕೆಲ ಕಂಪನಿಗಳಿಗಷ್ಟೇ ಎಚ್​ಎಸ್​ಆರ್​ಪಿ ಅಳವಡಿಸಲು ಸಾರಿಗೆ ಇಲಾಖೆ ಅನುಮತಿ ನೀಡಿದೆ ಎಂದು ಆರೋಪಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿರುವುದರಿಂದ ವಾಹನಗಳ ಮಾಲೀಕರಲ್ಲಿ ಕೋರ್ಟ್ ಅಂತಿಮ ಆದೇಶದವರೆಗೆ ಎಚ್​ಎಸ್​ಆರ್​ಪಿ ನಂಬರ್ ಪ್ಲೇಟ್​ಗಳನ್ನು ಹಾಕಿಸಬೇಕೋ ಬೇಡವೋ ಎಂಬ ಗೊಂದಲ ಶುರುವಾಗಿದೆ. ಇದೇ ವೇಳೆ ಸಾರಿಗೆ ಇಲಾಖೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿರುವುದಕ್ಕೆ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದಲ್ಲದೆ ಮೆಕಾನಿಕ್ ಶಾಪ್ ಅಥವಾ ರಸ್ತೆ ಬದಿ ಮಾರಾಟಗಾರರ ಬಳಿ ಹೋಗಿ ಹೊಸ ನಂಬರ್ ಅಳವಡಿಸಿಕೊಳ್ಳಲು ಅವಕಾಶ ಇಲ್ಲ. ಏನಿದ್ದರೂ ಆನ್​ಲೈನ್​ನಲ್ಲೇ ಸ್ಲಾಟ್ ಬುಕ್ ಮಾಡಿಕೊಂಡು ಅಲ್ಲೇ ಶುಲ್ಕ ಪಾವತಿಸಿ, ಆಯ್ಕೆ ಮಾಡಿಕೊಂಡ ಡೀಲರ್ ಸ್ಥಳಕ್ಕೆ ಹೋಗಿ ರಸೀದಿ ತೋರಿಸಿದರೆ ನಂಬರ್ ಪ್ಲೇಟ್ ಹಾಕಿಕೊಡುತ್ತಾರೆ. ಆದರೆ, ಬಹುತೇಕ ಜನರಿಗೆ ಆನ್​ಲೈನ್​ನಲ್ಲಿ ಸ್ಲಾಟ್ ಬುಕ್ಕಿಂಗ್ ಬರುವುದಿಲ್ಲ. ಮತ್ತೆ ಕೆಲವರಿಗೆ ಬಂದರೂ ಅಷ್ಟೆಲ್ಲ ಕಿರಿಕಿರಿ ಅನುಭವಿಸಲು ತಯಾರಿಲ್ಲ.
ಎಚ್​ಎಸ್​ಆರ್​ಪಿ ಸ್ಲಾಟ್ ಬುಕ್ಕಿಂಗ್​ಗಾಗಿಯೇ 3ನೇ ವ್ಯಕ್ತಿಗಳು/ಏಜೆನ್ಸಿಗಳು ಅಥವಾ ಸೈಬರ್ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ. ವಾಹನದ ವಿವರ ಹಾಗೂ ಹಣ ಕೊಟ್ಟರೆ ಅವರೇ ಸ್ಲಾಟ್ ಬುಕ್ ಮಾಡಿಕೊಡುತ್ತಾರೆ. ಆದರೆ, ಒಂದು ಕಾರು, ಒಂದು ಬೈಕ್​ಗೆ ಹೊಸದಾಗಿ ನಂಬರ್ ಪ್ಲೇಟ್ ಅಳವಡಿಸಲು ಬುಕ್ಕಿಂಗ್ ಮಾಡಲು ಫಲಕದ ಶುಲ್ಕ ಬಿಟ್ಟು ಹೆಚ್ಚುವರಿಯಾಗಿ ಕನಿಷ್ಠ 400 ರೂ.ನಿಂದ 500 ರೂ. ಕಮೀಷನ್ ಕೀಳುತ್ತಿದ್ದಾರೆ. ನಂಬರ್ ಪ್ಲೇಟ್ ಶುಲ್ಕದ ಜತೆಗೆ ಕಮೀಷನ್ ಹೊರೆಯೂ ಜನರ ಮೇಲೆ ಬೀಳುತ್ತಿದೆ.
526 ರೂ. ಹೆಚ್ಚುವರಿ ವಸೂಲಿ!:ಪ್ರಕಾಶ್ ಎಂಬುವರು ತಮ್ಮ ಕಾರು ಹಾಗೂ ಬೈಕ್​ಗೆ ಎಚ್​ಎಸ್​ಆರ್​ಪಿ ಅಳವಡಿಸಲು 3ನೇ ವ್ಯಕ್ತಿಯ ಮೂಲಕ ಯಶವಂತಪುರದ ಟ್ರೖೆಡೆಂಟ್ ಆಟೋಮೊಬೈಲ್ಸ್​ನಲ್ಲಿ ಸ್ಲಾಟ್ ಬುಕ್ ಮಾಡಿಸಿದ್ದಾರೆ. ಬುಕ್ ಮಾಡಿಕೊಟ್ಟ ವ್ಯಕ್ತಿ ಒಟ್ಟು 1800 ರೂ. ಸ್ವೀಕರಿಸಿದ್ದಾನೆ. ರಸೀದಿಯಲ್ಲಿ ಕಾರಿಗೆ 778 ರೂಪಾಯಿ 80 ಪೈಸೆ ಹಾಗೂ ಬೈಕ್ 495 ರೂಪಾಯಿ 60 ಪೈಸೆ ನಮೂದಾಗಿದೆ. ಅಂದರೆ ಹೆಚ್ಚುವರಿಯಾಗಿ 526 ರೂ. ಪಡೆಯಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಸ್ಲಾಟ್ ಬುಕ್ಕಿಂಗ್ ಮಾಡಿಕೊಟ್ಟಿದ್ದಕ್ಕೆ ಕಮೀಷನ್ ಎಂಬ ಉತ್ತರ ಬಂದಿದೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 2 =
Remember me
