ಬೆಂಗಳೂರು:ಪ್ರತಿ ಬಾರಿ ಮಳೆ ಬಂದಾಗಲೂ ಬೆಂಗಳೂರಿನಲ್ಲಿ ಹಲವು ಅವಾಂತರಗಳು ನಡೆಯುತ್ತಿದ್ದು, ಕಳೆದ 25 ವರ್ಷಗಳಿಂದಲೂ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ, ಬಿಬಿಎಂಪಿ ಸಮಸ್ಯೆಳನ್ನು ಸರಿಪಡಿಸುವಲ್ಲಿ ವಿಫಲವಾಗಿರುವ ಕಾರಣ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಾಜೀನಾಮೆ ಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಆಗ್ರಹಿಸಿದ್ದಾರೆ.
ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರವಾಗಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ, ಚರಂಡಿ ಬ್ಲಾಕ್ ಆಗುವುದು, ರಸ್ತೆ ಗುಂಡಿಗಳು ಬೀಳುವುದು, ಮರಗಳು ಮುರಿದು ಬೀಳುವುದು ಸಾಮಾನ್ಯ ಎನ್ನುವಂತಾಗಿದೆ. ಯಾವುದೇ ಸರ್ಕಾರಗಳು ಹಾಗೂ ಅಧಿಕಾರಿಗಳು ಬಂದರು ಸಮಸ್ಯೆ ಮಾತ್ರ ಹಾಗೆ ಉಳಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರತಿ ಬಾರಿ ಸಮಸ್ಯೆಯಾದಾಗ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಬಿಬಿಎಂಪಿ ಕಮಿಷನರ್ ಭೇಟಿ ನೀಡಿ ಕಣ್ಣೊರೆಸುವ ಕೆಲಸ ಮಾಡಿ ಹೋಗುತ್ತಾರೆ. ಆದರೆ ಸಮಸ್ಯೆ ಮಾತ್ರ ಹಾಗೆ ಉಳಿಯುತ್ತಿದೆ. ಬೆಂಗಳೂರನ್ನು ಉದ್ಧಾರ ಮಾಡ್ತೀವಿ, ಬ್ರಾಂಡ್ ಬೆಂಗಳೂರು ಮಾಡ್ತೀವಿ ಎಂದವರು ದಿನಕ್ಕೊಂದು ಜಿಲ್ಲೆ ಸುತ್ತುತ್ತಿದ್ದಾರೆ ಎಂದರು.
ಮಳೆ ಬಂದರೆ ನಗರದ ರಸ್ತೆಗಳಲ್ಲಿ ನೀರು ತುಂಬಿರುತ್ತದೆ. ವಾಹನ ಸವಾರರಿಗೆ ಪ್ರತಿ ಬಾರಿ ಜೀವ ಕೈಯಲ್ಲಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ತುಂಬಿರುವ ನೀರು ಹರಿಯುವಂತೆ ಮಾಡುತ್ತಿದ್ದಾರೆ. ಆದರೆ ಈ ಕೆಲಸ ಮಾಡಬೇಕಾದ ಬಿಬಿಎಂಪಿ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ. ಟ್ರಾಫಿಕ್ ಪೊಲೀಸ್ ಇಲಾಖೆ 180 ಸ್ಥಳಗಳನ್ನು ಗುರುತಿಸಿ, ಮಳೆ ಬಂದಾಗ ಸಮಸ್ಯೆಯಾಗುತ್ತಿದೆ ಎಂದು ಬಿಬಿಎಂಪಿಗೆ ವರದಿ ಕೊಟ್ಟಿದ್ದಾರೆ. ಅಧಿಕಾರಿಗಳು ಆ ವರದಿಯನ್ನು ನೋಡಿದ್ದೀರಾ?, ನಿಮ್ಮಿಂದಾಗಿ ಟ್ರಾಫಿಕ್ ಪೊಲೀಸರು ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉಸ್ತುವಾರಿ ಸಚಿವರು ಪ್ರದಕ್ಷಿಣೆ ಹಾಕಿ ಫೋಟೊ ತೆಗೆಸಿಕೊಂಡು ಹೋಗುವ ಬದಲು, ವರದಿಯನ್ನೊಮ್ಮೆ ನೋಡಿ ಸಮಸ್ಯೆ ಸರಿಪಡಿಸಲಿ ಎಂದು ಡಾ. ಸತೀಶ್ ಆಗ್ರಹಿಸಿದರು.
ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಕೆಲಸ ಮಾಡುವುದೇ ಗೊತ್ತಿಲ್ಲವಾ? ಸರಿಯಾದ ಮಾಹಿತಿ ಕೂಡ ಕೊಡುತ್ತಿಲ್ಲ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಎಷ್ಟಿದೆ ಎನ್ನುವ ಮಾಹಿತಿ ಇಲ್ಲವಾ? ತುಷಾರ್ ಗಿರಿನಾಥ್ ಅವರಿಗೆ ಕೆಲಸ ಮಾಡಲು ಕಷ್ಟವಾಗುತ್ತಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಳ್ಳಲಿ ಎಂದು ಹೇಳಿದರು.
ಡಿಕೆ ಶಿವಕುಮಾರ್ ಪ್ರತಿ ವಾರ್ಡ್‌ಗೆ ರಸ್ತೆ ಗುಂಡಿ ಮುಚ್ಚಲು 15 ಲಕ್ಷ ರೂಪಾಯಿ ಕೊಡುತ್ತೇವೆ, ಮಳೆಗಾಲ ಮುಗಿದ ಮೇಲೆ ಕೊಡುತ್ತೀರಾ? ಡಿಕೆ ಶಿವಕುಮಾರ್ ಅವರಿಗೆ ಹಲವು ಖಾತೆಗಳನ್ನು ನಿಭಾಯಿಸಲು ಕಷ್ಟವಾದರೆ, ಅದನ್ನು ವಹಿಸಿಕೊಳ್ಳುವುದೇಕೆ. ಬೆಂಗಳೂರಿಗೆ ನಿಮ್ಮಿಂದ ಯಾವುದೇ ಉಪಯೋಗ ಆಗಿಲ್ಲ ಎಂದರು.
ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮಾತನಾಡಿ, ಡಿಕೆ ಶಿವಕುಮಾರ್ ಅವರು ಬೆಂಗಳೂರು ಉಸ್ತುವಾರಿಯನ್ನು ಬೇರೆಯವರಿಗೆ ಕೊಡಲಿ. ಬಿಬಿಎಂಪಿ ಚುನಾವಣೆ ಮಾಡದ ಕಾರಣ, ಜನರ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಡಿಕೆ ಶಿವಕುಮಾರ್ ದಿನಕ್ಕೊಂದು ಜಿಲ್ಲೆಗೆ ಹೋಗುತ್ತಿದ್ದಾರೆ, ಅವರು ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವನ್ನು ಬೇರೆ ಅರ್ಹರಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು. ಸಮಸ್ಯೆ ಹೀಗೆ ಮುಂದುವರೆದರೆ ಆಮ್ ಅದ್ಮಿ ಪಾರ್ಟಿ ವತಿಯಿಂದ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 12 =
Remember me
