ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹೊಂದಾಣಿಕೆ ಕೊರತೆ ಬಗೆಹರಿಸಲು ಎಲ್ಲ ವಿಭಾಗದ ಅಧಿಕಾರಿಗಳ ಸಮನ್ವಯ ಸಮಿತಿ ರಚಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಸಿಎಎ ಹೋರಾಟ, ರಾಷ್ಟ್ರ ವಿರೋಧಿ ಹೇಳಿಕೆ, ಹೋರಾಟದ ಹಿಂದಿನ ಸಂಚು ಇತ್ಯಾದಿ ವಿಚಾರಗಳ ಕುರಿತು ಭಾನುವಾರ ನೃಪತುಂಗ ರಸ್ತೆ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗೃಹ ಸಚಿವರು, ಡಿಜಿ- ಐಜಿಪಿ ಪ್ರವೀಣ್ ಸೂದ್, ಗುಪ್ತದಳ ವಿಭಾಗ ಎಡಿಜಿಪಿ ಕಮಲ್ ಪಂತ್, ಐಎಸ್​ಡಿ ಎಡಿಜಿಪಿ ಪ್ರತಾಪ್ ರೆಡ್ಡಿ ಸೇರಿ ಇಲಾಖೆಯ ಎಲ್ಲ ವಿಭಾಗದ ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿದರು.
ಸಭೆಯ ತೀರ್ವನಗಳನ್ನು ಗೌಪ್ಯವಾಗಿಟ್ಟಿದ್ದು, ವಿವಿಧ ಮಾಹಿತಿ ವಿನಿಮಯ ಮಾಡಿಕೊಂಡರು. ಗೃಹ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ವಿಭಾಗಗಳ ನಡುವೆ ಸಮನ್ವಯ ಕೊರತೆ ಎದ್ದುಕಾಣುತ್ತಿದೆ. ಸಮಾಜಘಾತುಕ ಕೃತ್ಯಗಳನ್ನು ತಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಗುಪ್ತದಳ, ಆಂತರಿಕ ಭದ್ರತಾ ಪಡೆ, ಸಿಐಡಿ, ಜೈಲು ಸೇರಿ ಇಲಾಖೆಯ ಎಲ್ಲ ವಿಭಾಗದ ಮುಖ್ಯಸ್ಥರು ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಈ ಸಲುವಾಗಿ ಉನ್ನತಾಧಿಕಾರಿಗಳು ಸಮನ್ವಯ ಸಮಿತಿ ರಚಿಸುವಂತೆ ಗೃಹ ಸಚಿವರು ಐಪಿಎಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಮೂಲ್ಯ ಲಿಯೋನಾ ಪಾಕಿಸ್ತಾನ ಪರ ಘೊಷಣೆ ಕೂಗಿದ್ದರ ಹಿಂದೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ದೊಡ್ಡ ಸಂಘಟನೆಗಳೇ ಕೆಲಸ ಮಾಡುತ್ತಿವೆ. ಇವುಗಳನ್ನು ಪತ್ತೆಹಚ್ಚಬೇಕು. ದೇಶದ್ರೋಹ ಕೆಲಸ ಮಾಡುತ್ತಿರುವ ಕೆಲ ಸ್ವಯಂಸೇವಾ ಸಂಸ್ಥೆಗಳ ಮೇಲೆ ನಿಗಾವಹಿಸಿ ಮಾಹಿತಿ ಕಲೆ ಹಾಕಿ ತಪು್ಪ ಕಂಡುಬಂದರೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಪಾಕ್ ಪರ ಘೊಷಣೆ ಷಡ್ಯಂತ್ರದ ಭಾಗ
ಮೈಸೂರು:ಪಾಕಿಸ್ತಾನ ಪರ ಘೊಷಣೆ ಕೂಗಿದ ಅಮೂಲ್ಯಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದೇವೆ. ಆಕೆಯ ಹಿಂದೆ ಯಾರಿದ್ದಾರೆ? ಯಾವ ಸಂಘಟನೆ ಇದೆ ಎಂಬ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಡಿಜಿಪಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಸಿಐಡಿ ಸೇರಿ ಎಲ್ಲ ವಿಂಗ್​ಗಳು ತನಿಖೆ ನಡೆಸುತ್ತಿವೆ. ಈ ರೀತಿ ದೇಶ ವಿರೋಧಿ ಘೊಷಣೆ ಕೂಗುವುದನ್ನು ಸಹಿಸಲು ಸಾಧ್ಯವಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ರೀತಿಯ ಶಕ್ತಿಗಳು ಹೆಚ್ಚಾಗಿದ್ದು, ಅವುಗಳನ್ನು ಮಟ್ಟ ಹಾಕಲಾಗುವುದು ಎಂದರು. ರಾಜ್ಯದಲ್ಲಿ ಕೆಲವು ಎನ್​ಜಿಒಗಳು ಕೆಲ ಸಂಘಟನೆಗಳಿಗೆ ಹಣ ಪೂರೈಕೆ ಮಾಡುತ್ತಿರುವ ಕುರಿತು ವರದಿ ಬಂದಿವೆ. ಈ ಬಗ್ಗೆ ಮಾಹಿತಿ ಕಲೆ ಹಾಕ ಲಾಗುತ್ತಿದೆ. ಮಾಹಿತಿ ಬಂದ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ದೇಶ ದ್ರೋಹದ ಚಟುವಟಿಕೆಗಳಲ್ಲಿ ತೊಡಗಿರವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಅದು ಶಿಕ್ಷಣ ಸಂಸ್ಥೆ ಆಗಲಿ ಅಥವಾ ಎನ್​ಜಿಒ ಆದರೂ ಬಿಡುವುದಿಲ್ಲ.
| ಬಸವರಾಜ ಬೊಮ್ಮಾಯಿ ಗೃಹ ಸಚಿವ
ರಾಜಕೀಯ ಮೇಲಾಟ ಶುರು
ಬೆಂಗಳೂರು: ಪೌರತ್ವ ವಿರೋಧಿ ಹೋರಾಟ, ರಾಷ್ಟ್ರ ದ್ರೋಹಿ ಹೇಳಿಕೆ ಸಂಬಂಧ ರಾಜಕೀಯ ನಾಯಕರ ಟೀಕೆ ಟಿಪ್ಪಣಿ ಆರಂಭವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಮಾತಿನ ಸಮರಕ್ಕೆ ಮುನ್ನುಡಿ ಬರೆದಿದ್ದಾರೆ. ಸಿಎಎ ವಿರುದ್ಧ ಸುಳ್ಳು ಪ್ರಚಾರ ಮಾಡುವ ಮೂಲಕ, ಸಮಾಜದಲ್ಲಿ ಕ್ಷೋಭೆ ಉಂಟು ಮಾಡಲಾಗುತ್ತಿದೆ. ಇದಕ್ಕೆ ವಿರೋಧ ಪಕ್ಷಗಳ ಜತೆಯಲ್ಲಿ ದೇಶದ್ರೋಹ ಶಕ್ತಿಗಳು ಸೇರಿಕೊಂಡಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಅಮೂಲ್ಯ ಏನು ಹೇಳಲು ಹೊರಟಿದ್ದಳು ಎಂಬುದನ್ನೂ ತಿಳಿದುಕೊಳ್ಳಬೇಕು. ಆಕೆ ಈ ಹಿಂದೆ ಒಂದು ಸಿದ್ಧಾಂತದ ವಿಚಾರವಾಗಿ ಮಾತನಾಡಿರುವುದನ್ನು ನೋಡಿದ್ದೇನೆ. ಹೀಗಾಗಿ ಆಕೆ ಏನು ಹೇಳಲು ಹೋರಟಿದ್ದಳು ಎಂಬುದು ನಮಗೆ ಗೊತ್ತಿಲ್ಲ. ಈ ವಿಚಾರದಲ್ಲಿ ಆತುರಪಡುವುದು ಬೇಡ ಎಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ.
ದೇಶ ವಿರೋಧಿ ಘೊಷಣೆ ಕೂಗಿದವರನ್ನು ಕಂಡಲ್ಲಿ ಗುಂಡಿಕ್ಕುವ ಕಾನೂನು ತರಬೇಕು. ಈ ಸಂಬಂಧ ಪ್ರಧಾನಿಗೆ ಮನವಿ ಮಾಡುತ್ತೇನೆ.
| ಬಿ.ಸಿ.ಪಾಟೀಲ್ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 20 =
Remember me
