ಬೆಂಗಳೂರು:ವಿಧಾನಸಭೆ ಸ್ಪೀಕರ್​ಗಳ ಅಧಿಕಾರ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ ಕುರಿತಂತೆ ಸ್ಪಷ್ಟತೆ ಕಂಡುಕೊಳ್ಳಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಮಿತಿ ರಚಿಸಿದ್ದಾರೆ.
ರಾಜಸ್ಥಾನ ವಿಧಾನಸಭಾಧ್ಯಕ್ಷ ಡಾ.ಸಿ.ಪಿ.ಜೋಷಿ ಅಧ್ಯಕ್ಷತೆಯ ಸಮಿತಿಯಲ್ಲಿ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಒರಿಸ್ಸಾ ವಿಧಾನಸಭೆ ಅಧ್ಯಕ್ಷ ಡಾ| ಸೂಜರ್ ನಾರಾಯಣ ಪಾತ್ರೊ ಸದಸ್ಯರಾಗಿದ್ದಾರೆ.
ಇತ್ತೀಚಿಗೆ ವಿಧಾನಸಭೆ ಸ್ಪೀಕರ್ ಅಧಿಕಾರದ ಬಗ್ಗೆ ಹೆಚ್ಚೆಚ್ಚು ಚರ್ಚೆಯಾಗುತ್ತಿದೆ, ನ್ಯಾಯಾಲಯಗಳೂ ಸ್ಪೀಕರ್ ತೀರ್ಮಾನಗಳನ್ನು ಪರಾಮರ್ಶೆಗೊಳಪಡಿಸಿ ಗೊಂದಲಗಳ ಅಭಿಪ್ರಾಯ ದಾಖಲಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಮಿತಿ ಅಭಿಪ್ರಾಯ ಶಾಸಕಾಂಗದಲ್ಲಿ ಮಹತ್ವದ ಪಾತ್ರ ವಹಿಸಲಿದೆ.
‘ಸಂವಿಧಾನದ ಹತ್ತನೇ ಅನುಸೂಚಿಯಡಿ ಪೀಠಾಸೀನಾಧಿಕಾರಿಗಳ ಅಧಿಕಾರಗಳು, ಅದರಡಿ ರಚಿಸಲಾದ ನಿಯಮಗಳ ಮರು ಪರಿಶೀಲನೆ ಮಾಡಲು’ ಸಮಿತಿಯು ಚರ್ಚೆ ನಡೆಸಿ, ಕಾನೂನು ಸಂಸದೀಯ ಪರಿಣಿತರಿಂದ ಅಭಿಪ್ರಾಯ ಪಡೆದು ವಿವಿಧ ರಾಜ್ಯಗಳಲ್ಲಿ ಎದುರಾಗಿರುವ ಸವಾಲು ಮತ್ತು ಪರಿಹಾರ ಮಾಗೋಪಾಯಗಳ ಕುರಿತು ತನ್ನ ನಿಲುವನ್ನು ಲೋಕಸಭೆ ಸ್ಪೀಕರ್​ಗೆ ತಿಳಿಸಲಿದೆ. ಬಳಿಕ ಶಾಸನ ಸಭೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಬಗ್ಗೆ ನಿರ್ಧಾರಕ್ಕೆ ಬರಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 12 =
Remember me
