ಶಿವಮೊಗ್ಗ:ರಾಜ್ಯದಲ್ಲಿ ಕೇಳಿಬರುತ್ತಿರುವ ಕಾಮಗಾರಿಗಳ ಪರ್ಸೆಂಟೇಜ್​ಗೆ ಕಡಿವಾಣ ಹಾಕಲು ಉನ್ನತ ಮಟ್ಟದ ರಚನೆೆ ಮಾಡಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಇನ್ನೊಂದು ವಾರದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಎಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿ 50 ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳ ಟೆಂಡರ್ ಈ ಸಮಿತಿ ಮುಂದೆ ಬರಲಿದೆ. 15 ದಿನದೊಳಗೆ ಟೆಂಡರ್ ಕಡತ ವಿಲೇವಾರಿ ಮಾಡುವಂತೆಯೂ ಆದೇಶಿ ಸಲಾಗಿದೆ. ಜತೆಗೆ, ಟೆಂಡರ್​ಗಳ ಸಂಖ್ಯೆ ಹೆಚ್ಚಾದರೆ ಪರ್ಯಾಯ ವ್ಯವಸ್ಥೆಗೂ ಆಲೋಚನೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಸ್ತುತ ಪರ್ಸೆಂಟೇಜ್ ಎನ್ನುವುದು ಎಲ್ಲ ಕಾಮಗಾರಿಗಳಲ್ಲೂ ವ್ಯಾಪಾಕವಾಗಿ ಕೇಳಿಬರುತ್ತಿದ್ದು, ನಿಯಂತ್ರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಕಾಮಗಾರಿಗಳ ಅಂದಾಜುವೆಚ್ಚ (ಎಸ್ಟಿಮೇಷನ್) ಮತ್ತು ಟೆಂಡರ್ ನಿಯಮಗಳನ್ನು ಜಾರಿಗೆ ತರುವ ಹಂತದಿಂದಲೇ ಪರ್ಸೆಂಟೇಜ್ ಶುರುವಾಗುತ್ತದೆ. ಹಾಗಾಗಿ, ಕೆಟಿಪಿಪಿ (ಕರ್ನಾಟಕ ಟ್ರಾನ್ಸಫರೆನ್ಸಿ ಇನ್ ಪಬ್ಲಿಕ್ ಪ್ರಕ್ಯೂರ್ಮೆಂಟ್) ಕಾಯ್ದೆಯಡಿ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
ಸಮಿತಿಯಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು, ಆರ್ಥಿಕ ತಜ್ಞರು, ಸಂಬಂಧಪಟ್ಟ ಇಲಾಖೆಯವರು ಮತ್ತು ತಾಂತ್ರಿಕ ಪರಿಣತರು ಇರಲಿದ್ದಾರೆ. ಈ ಸಮಿತಿ ಟೆಂಡರ್ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅನುಮೋದನೆ ನೀಡಲಿದೆ. ಇದರಿಂದ ಕಮಿಷನ್ ಅಥವಾ ಪರ್ಸೆಂಟೇಜ್​ಗೆ ಸ್ವಲ್ಪ ಮಟ್ಟಿಗಾದರೂ ಕಡಿವಾಣ ಬೀಳಲಿದೆ. ಈ ಸಮಿತಿಯ ಕಾರ್ಯವೈಖರಿ ನೋಡಿಕೊಂಡು ಸಾಧ್ಯವಾದರೆ ಜಿಲ್ಲಾ ಮಟ್ಟಕ್ಕೂ ವಿಸ್ತರಣೆ ಮಾಡುವ ಬಗ್ಗೆಯೂ ಚಿಂತಿಸಲಾಗುವುದು ಎಂದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಎಂಎಲ್​ಸಿ ಡಿ.ಎಸ್.ಅರುಣ್, ಸಣ್ಣ ಕೈಗಾರಿಕೆ ಸಂಘದ ಉಪಾಧ್ಯಕ್ಷ ಎಸ್.ದತ್ತಾತ್ರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗಬೇಕಿದೆ. ಅದಕ್ಕೆ ಪೂರಕವಾಗಿ ಬಜೆಟ್ ಕೂಡ ಅದೇ ರೂಪುರೇಷೆಯಲ್ಲಿ ಮಂಡಿಸಲಾಗಿದೆ. ಶೇ.75 ಆದೇಶ ಮಾಡಿದ್ದು, ಈ ಮಾಸಾಂತ್ಯದೊಳಗೆ ಉಳಿದ ಶೇ.25 ಆದೇಶ ಮಾಡಲಾಗುವುದು. ಬಜೆಟ್​ನಲ್ಲಿನ ಎಲ್ಲ ಯೋಜನೆಗಳಿಗೂ ಆದೇಶ ಮಾಡಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು. ಮುಂಬರುವ ದಿನಗಳಲ್ಲಿ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ.
|ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ
ಚಿತ್ರದುರ್ಗ:ಮಠಗಳಿಗೆ ಅನುದಾನ ನೀಡುವ ಪರಂಪರೆ ಆರಂಭಿಸಿದ ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಹಿಡಿದು ಈಗಿನ ಸಿಎಂ ಬಸವರಾಜ ಬೊಮ್ಮಾಯಿವರೆಗೆ ಯಾವ ಅಧಿಕಾರಿಗಳೂ ನಮ್ಮಿಂದ ಪರ್ಸಂಟೇಜ್ ಕೇಳಿಲ್ಲ ಎಂದು ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಸ್ವಾಮೀಜಿಗಳು ತಿಳಿಸಿದ್ದಾರೆ. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನನಾಂದ ಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಶ್ರೀ, ಕುಂಚಿಟಿಗ ಗುರುಪೀಠದ ಶ್ರೀ ಶಾಂತವಿರ ಸ್ವಾಮೀಜಿ ಇತರರು ಸುದ್ದಿಗೋಷ್ಠಿ ನಡೆಸಿ ದಿಂಗಾಲೇಶ್ವರ ಶ್ರೀಗಳ ಹೇಳಿಕೆಗೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಮಠಗಳ ಅಭಿವೃದ್ಧಿಗೆ ಬಿಡುಗಡೆಯಾಗುವ ಅನುದಾನ ಜಿಲ್ಲಾಧಿಕಾರಿ ಖಾತೆಗೆ ಜಮೆಯಾಗುತ್ತದೆ. ಇಲಾಖೆ ವರದಿ ಪಡೆದು ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಇದುವರೆಗೆ ನಯಾಪೈಸ ಕಮಿಷನ್ ನೀಡಿಲ್ಲ ಎಂದರು. ಭಗೀರಥ ಗುರುಪೀಠದ ಪುರಷೋತ್ತಮಾನಂದ ಶ್ರೀ, ಕುಂಚಿಟಿಗ ಮಠದ ಶಾಂತವೀರ ಶ್ರೀ, ಆರ್ಯ ರೇಣುಕಾನಂದ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ಇದ್ದರು.
ಮೇ ಮೊದಲ ವಾರ ವಿಶೇಷ ಸಭೆ:ಅರಣ್ಯ ಭೂಮಿ ಒತ್ತುವರಿ ವಿಷಯಕ್ಕೆ ಸಂಬಂಧಿ ಸಿದ ಸಮಸ್ಯೆಗಳ ನಿವಾರಣೆಗೆ ಪಶ್ಚಿಮಘಟ್ಟಗಳ ವ್ಯಾಪ್ತಿಯ 4-5 ಜಿಲ್ಲೆಗಳ ಜನಪ್ರತಿನಿಧಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರನ್ನೊಳಗೊಂಡ ವಿಶೇಷ ಸಭೆಯನ್ನು ಮೇ ಮೊದಲ ವಾರದಲ್ಲಿ ನಡೆಸಲಾಗುವುದು. ಈ ವೇಳೆ ರಾಜ್ಯಮಟ್ಟದಲ್ಲೇ ಸಾಧ್ಯವಿರುವ ಕೆಲ ನಿರ್ಣಯಗಳನ್ನು ತ್ವರಿತವಾಗಿ ತೆಗೆದುಕೊಳ್ಳಲಾಗುವುದು. ಇನ್ನುಳಿದವುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಏರ್​ಪೋರ್ಟ್​ಗೆ ಬಿಎಸ್​ವೈ ಹೆಸರು:ಶಿವಮೊಗ್ಗದ ಸೋಗಾನೆಯಲ್ಲಿ ನಿರ್ವಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಸರನ್ನು ನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ವನಿಸಲಾಗಿದೆ. ಈ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆಗೆ ಪ್ರಸ್ತಾವನೆ ಕಳಿಸಿದ್ದೇವೆ. ಉದ್ಘಾಟನೆಗೂ ಮುನ್ನ ಅಧಿಕೃತವಾಗಿ ಬಿಎಸ್​ವೈ ಹೆಸರನ್ನು ನಾಮಕರಣ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡುವಂತಿಲ್ಲ:ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿ ಯಾವುದೇ ಇಲಾಖೆ ಕಾಮಗಾರಿಗಳನ್ನು ಮೌಖಿಕ ಆದೇಶಗಳ ಮೇಲೆ ಮಾಡಬಾರ ದೆಂದು ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದರು. ಆದರೂ ಈ ರೀತಿ ನಡೆದರೆ ಸಂಬಂಧಪಟ್ಟ ಇಂಜಿನಿಯರ್, ಸಹಾಯಕ ಇಂಜಿನಿಯರ್, ಎಇಇ, ಶಾಖಾಧಿಕಾರಿಗಳು ಜವಾಬ್ದಾರರಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಪಿಡಿಒ ಮತ್ತು ಇಒಗಳು ಜವಾಬ್ದಾರರಾಗುತ್ತಾರೆಂದು ಸ್ಪಷ್ಟವಾದ ಲಿಖಿತ ಸೂಚನೆ ನೀಡಲಾಗುವುದು ಎಂದರು.
ಗುತ್ತಿದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕನಕಪುರದವರು. ಅವರು ಕಾಂಗ್ರೆಸ್ ಏಜೆಂಟ್. ಪ್ರತಿ ದಿನ ಲಂಚದ ಆರೋಪ ಮಾಡುತ್ತಿದ್ದಾರೆ. ಯಾವ ಸಚಿವರು ಗುತ್ತಿಗೆದಾರರ ಬಳಿ ಕಮಿಷನ್ ಪಡೆದಿದ್ದಾರೆ ಎಂಬ ದಾಖಲೆಗಳನ್ನು ಒದಗಿಸಿ ಬಳಿಕ ಮಾತನಾಡಲಿ.
|ಕೆ.ಎಸ್.ಈಶ್ವರಪ್ಪಮಾಜಿ ಸಚಿವ
ವಿದ್ಯುತ್ ಪ್ರಸರಣ, ವಿತರಣೆ ಸಮಸ್ಯೆ:ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿಲ್ಲ. ಆದರೆ, ವಿದ್ಯುತ್ ಪ್ರಸರಣ ಮತ್ತು ವಿತರಣೆಯಲ್ಲಿ ಸಮಸ್ಯೆ ಆಗಿರುವುದರಿಂದ ರೈತರು, ಜನರು ತೊಂದರೆ ಅನುಭವಿಸುವಂತಾಗಿದೆ. ಸಿಎಂ ಆದ ಬಳಿಕ 100 ಸ್ಟೇಷನ್ ನಿರ್ವಿುಸಲು ಅನುಮೋದನೆ ನೀಡಿದ್ದೇನೆ. ಕೇಂದ್ರ ಸರ್ಕಾರದ ಸೋಲಾರ್ ಗ್ರಿಡ್ ಯೋಜನೆಗೂ ಒತ್ತು ನೀಡಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು. ಜಾತಿ ಗಣತಿ ವರದಿ ಪೂರ್ಣ ಪ್ರಮಾಣದಲ್ಲಿ ಮಂಡನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಕೈಕೊಟ್ಟ ಕರೆಂಟ್:ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ಪ್ರಸರಣ ಮತ್ತು ಹಂಚಿಕೆಯದ್ದೇ ಸಮಸ್ಯೆ ಎಂದು ಸಿಎಂ ಹೇಳಿದರು. ಕಾಕತಾಳೀಯವೆಂಬಂತೆ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆಯೇ ಎರಡು ಸಲ ವಿದ್ಯುತ್ ಕೈಕೊಟ್ಟಿತು. ಇದು ಅವರಿಗೆ ಕೊಂಚ ಕಿರಿಕಿರಿ ಉಂಟು ಮಾಡಿತು.
ಉಡುಪಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈ ಸೇರಿದೆ. ಕೆಎಂಸಿ ಫೊರೆನ್ಸಿಕ್ಸ್ ಲ್ಯಾಬ್ ವಿಭಾಗದಿಂದ ಬಂದಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿಗೆ ನಿಖರ ಕಾರಣವನ್ನು ಕಾಯ್ದಿರಿಸಲಾಗಿದೆ. ರಕ್ತ, ಶ್ವಾಸಕೋಶ, ಕಿಡ್ನಿ, ಚರ್ಮದ ಪರೀಕ್ಷೆ ವರದಿ ಬಾಕಿಯಿದ್ದು, ಮರಣೋತ್ತರ ಪರೀಕ್ಷೆ ಮತ್ತು ಆರ್​ಎಫ್​ಎಸ್​ಎಲ್ ವರದಿ ಜತೆ ಹೋಲಿಕೆ ಮಾಡಿ ವೈದ್ಯರು ಅಂತಿಮ ವರದಿ ನೀಡಲಿದ್ದಾರೆ. ದೇಹದ ಒಳಾಂಗಗಳ ಪರೀಕ್ಷಾ ವರದಿ ಬಂದ ಮೇಲೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twelve =
Remember me
