ಬೆಂಗಳೂರು: ಬಿಎಂಟಿಸಿ ಬಸ್​ ಮತ್ತು ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೆ ಜಾರಿಗೊಳ್ಳಬೇಕಿದ್ದ ಕಾಮನ್​ ಮೊಬಿಲಿಟಿ ಕಾರ್ಡ್​ ವ್ಯವಸ್ಥೆ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ. ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಏಕರೂಪದ ಟಿಕೆಟ್​ ವ್ಯವಸ್ಥೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಅದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಈಗಾಗಲೆ ಆ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯನ್ನು ಬೆಂಗಳೂರಿನಲ್ಲೂ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಅದರಂತೆ ಬಿಎಂಟಿಸಿ ಬಸ್​ ಮತ್ತು ನಮ್ಮ ಮೆಟ್ರೋ ರೈಲು ಪ್ರಯಾಣ ಶುಲ್ಕ ಪಾವತಿಗೆ ಒಂದೇ ಮಾದರಿಯ ಕಾರ್ಡ್​ ಬಳಕೆ ವ್ಯವಸ್ಥೆ ಜಾರಿಗೊಳ್ಳಲಿದೆ.
ಈ ವ್ಯವಸ್ಥೆ 2020ರ ಆರಂಭದಲ್ಲಿಯೇ ಅನುಷ್ಠಾನಗೊಳ್ಳಬೇಕಿತ್ತು. ಆದರೆ, ಆದರೆ, ಮೆಟ್ರೋ ನಿಲ್ದಾಣಗಳಲ್ಲಿ ಆಟೋಮ್ಯಾಟಿಕ್​ ಶುಲ್ಕ ವಸೂಲಿ ಗೇಟ್​ (ಎಎ್​ಸಿ) ಅಳವಡಿಯಲ್ಲಾದ ವಿಳಂಬ, ಬಿಎಂಟಿಸಿಯ ನಿರ್ಲಕ್ಷ$್ಯ, ಕರೊನಾ ಸೋಂಕಿನ ಕಾರಣದಿಂದಾಗಿ ಯೋಜನೆ ಜಾರಿಯಾಗಿಲ್ಲ. ಇದೀಗ ಬಿಎಂಟಿಸಿ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಆಟೋಮ್ಯಾಟಿಕ್​ ಟಿಕೆಟ್​ ಶುಲ್ಕ ವಸೂಲಿ ವ್ಯವಸ್ಥೆ ಜಾರಿಗೊಳಿಸುವ ಬ್ಯಾಂಕ್​ಗಳ ನೇಮಕಕ್ಕೆ ನಿರ್ಧರಿಸಿದೆ. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜತೆಗೆ ಎಲೆಕ್ಟ್ರಾನಿಕ್​ ಟಿಕೆಟ್​ ಯಂತ್ರಗಳನ್ನು ಹೊಸದಾಗಿ ಖರೀದಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಪ್ರಕ್ರಿಯೆ ರ್ಪೂಣಗೊಂಡು ಯೋಜನೆ ಜಾರಿಗೊಳ್ಳಲು ಇನ್ನೂ 8 ತಿಂಗಳು ಬೇಕಾಗಲಿದೆ.
ಎರಡೂ ಹಂತದಲ್ಲಿ ಜಾರಿ: ಬಿಎಂಆರ್​ಸಿಎಲ್​ ನಿರ್ಧರಿಸಿದಂತೆ ನಮ್ಮ ಮೆಟ್ರೋ ಮೊದಲ ಮತ್ತು ಎರಡನೇ ಹಂತದಲ್ಲಿ ಏಕಕಾಲಕ್ಕೆ ಯೋಜನೆ ಜಾರಿಗೊಳಿಸಲಾಗುತ್ತದೆ. ಈಗಾಗಲೆ ರೈಲು ಕಾರ್ಯಾಚರಣೆಗೊಂಡಿರುವ ಮೊದಲ ಹಂತದ 40 ನಿಲ್ದಾಣಗಳ ಜತೆಗೆ ಎರಡನೇ ಹಂತದ 62 ನಿಲ್ದಾಣಗಳ ಪೈಕಿ 44 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮನ್​ ಮೊಬಿಲಿಟಿ ಕಾರ್ಡ್​ಗಳ ಪೂರೈಕೆಗೆ ಸ್ಟೇಟ್​ ಬ್ಯಾಂಕ್​ ಆ್​ ಇಂಡಿಯಾಗೆ ವಹಿಸುವ ಕುರಿತು ಚರ್ಚೆಗಳು ನಡೆದಿವೆ.
ಬಿಇಎಲ್​ನಿಂದ ಯಂತ್ರ ಪೂರೈಕೆ: ನಿಲ್ದಾಣಗಳಲ್ಲಿನ ಟಿಕೆಟ್​ ಶುಲ್ಕ ಕಡಿತ ದ್ವಾರದಲ್ಲಿ ಆ ಯಂತ್ರ ಅಳವಡಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮನ್​ ಮೊಬಿಲಿಟಿ ಕಾರ್ಡ್​ನಿಂದ ಆಟೋಮ್ಯಾಟಿಕ್​ ಟಿಕೆಟ್​ ಶುಲ್ಕ ವಸೂಲಿ ಯಂತ್ರಗಳ ಪೂರೈಕೆ ಹೊಣೆಯನ್ನು ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ಗೆ ವಹಿಸಲಾಗಿದೆ. ಬೈಯ್ಯಪ್ಪನಹಳ್ಳಿಯಲ್ಲಿ ಪ್ರಾಯೋಗಿಕವಾಗಿ 2 ಗೇಟ್​ ಅಳವಡಿಸಲಾಗಿದೆಯಾದರೂ, ಅದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಅದೇ ಮಾದರಿಯ ಗೇಟ್​ಗಳನ್ನು ಸದ್ಯದಲ್ಲೇ ಉದ್ಘಾಟನೆಗೊಳ್ಳಲಿರುವ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್​ಶಿಪ್​ವರೆಗಿನ ಮಾರ್ಗದಲ್ಲೂ ಅಳವಡಿಸಲಾಗಿದೆ.
ಬಿಎಂಆರ್​ಸಿಎಲ್​ ನಿರ್ವಹಣೆ: ಕಾಮನ್​ ಮೊಬಿಲಿಟಿ ಕಾರ್ಡ್​ ವ್ಯವಸ್ಥೆ ಜಾರಿ ಕುರಿತಂತೆ ಬಿಎಂಆರ್​ಸಿಎಲ್​ ಮತ್ತು ಬಿಎಂಟಿಸಿ ಅಧಿಕಾರಿಗಳು ಈಗಾಗಲೆ ಹಲವು ಬಾರಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತೀರ್ಮಾನವಾದಂತೆ ಕಾರ್ಡ್​ಗಳ ವಿತರಣೆ ಮತ್ತು ನಿರ್ವಹಣೆಯ ಹೊಣೆ ಬಿಎಂಆರ್​ಸಿಎಲ್​ದ್ದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + thirteen =
Remember me
