ಬೆಂಗಳೂರು:ಪಾಪ್ಯುಲರ್​ ಫ್ರಂಟ್​​ ಆಫ್​ ಇಂಡಿಯಾ (ಪಿಎಫ್​ಐ) ನಿಷೇಧಗೊಳ್ಳುತ್ತಿದ್ದಂತೆ ಅದರ ಉಗ್ರ ಸ್ವರೂಪವೂ ಒಂದೊಂದಾಗಿ ಬಯಲಾಗುತ್ತಿದೆ. ಉಗ್ರ ಚಟುವಟಿಕೆ, ಅದಕ್ಕಾಗಿ ಯುವಕರ ನೇಮಕಾತಿ ಆರೋಪದಲ್ಲಿ ಬಂಧಿತರಾಗಿರುವ ಶಂಕಿತರು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಕೋಮುಗಲಭೆ ಸೃಷ್ಟಿಸುವ ಮೂಲಕ ಅಶಾಂತಿ ಉಂಟು ಮಾಡಲು ಸಂಚು ರೂಪಿಸಿದ್ದರೆಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ರಾಜ್ಯದಲ್ಲಿ ಸ್ಲೀಪರ್​ ಸೆಲ್​ಗಳಾಗಿ ಕೆಲವರು ಕೆಲಸ ಮಾಡುತ್ತಿದ್ದಾರೆಂಬ ಸುಳಿವು ದೊರೆತಿರುವ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಪೊಲೀಸರ ಕಾರ್ಯಾಚರಣೆ ತೀವ್ರವಾಗಿದೆ. ಪಿಎಫ್​ಐ ಬ್ಯಾಂಕ್​ ಖಾತೆಗಳಿಗೆ ನೂರಾರು ಕೋಟಿ ರೂ. ಜಮೆಯಾಗಿರುವುದು ಬೆಳಕಿಗೆ ಬಂದಿದೆ.
ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿ ಪಿಎಫ್​ಐನ 15 ಮುಖಂಡರನ್ನು ಬಂಧಿಸಲಾಗಿದ್ದು, ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಇವರ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ಮೂಲದ ಮಹಮ್ಮದ್​ ಅಶ್ರ್​ (43) ಎಂಬಾತನನ್ನು ದೆಹಲಿಯಲ್ಲಿ ಬಂಧಿಸಿದ್ದು, ಪಟಿಯಾಲಾ ಹೌಸ್​ ಕೋರ್ಟ್​ಗೆ ಹಾಜರುಪಡಿಸಿ ಟ್ರಾನ್ಸಿಟ್​ ವಾರಂಟ್​ ಮೇಲೆ ಬೆಂಗಳೂರಿಗೆ ಕರೆತಂದಿದ್ದಾರೆ. ಪೊಲೀಸರು ಕೋರ್ಟ್​ಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ದುಷತ್ಯಗಳು ಮತ್ತು ಸಂಚುಗಳ ಬಗ್ಗೆ ಉಲ್ಲೇಖಿಸಲಾಗಿದೆ.
ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಮಹಮ್ಮದ್​ ಅಶ್ರ್​, ಮುಸ್ಲಿಂ ಯೂತ್​ ಫೆಡರೇಷನ್​, ಪಿಎ್​ಐ, ಕೆಎ್​ಡಿ ಮತ್ತು ಎಸ್​ಡಿಪಿಐ ಸಂಟನೆಗಳಲ್ಲಿ ಸಕ್ರಿಯ ಸದಸ್ಯನಾಗಿದ್ದಾನೆ. ಕರ್ನಾಟಕ, ಗೋವಾ, ಕೇರಳ ಮತ್ತು ಅಸ್ಸಾಮ್​ ಟಕಗಳಿಗೆ ಮುಖ್ಯಸ್ಥನಾಗಿದ್ದು, ಪಿಎ್​ಐ ಸಂಟಿಸುವ ಉದ್ದೇಶಕ್ಕೆ ದೇಶವ್ಯಾಪಿ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದ.
ಮುಸ್ಲಿಂ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಅನ್ಯ ಧರ್ಮದವರ ವಿರುದ್ಧ ದ್ವೇಷ ಭಾವನೆ ಮೂಡಿಸಲು ಪ್ರಚೋದನೆ ನೀಡುತ್ತಿದ್ದ. ಯುವಕರ ಮನಪರಿವರ್ತಿಸಿ ದೇಶಾದ್ಯಂತ ಸ್ಲೀಪರ್​ ಸೆಲ್​ಗಳಾಗಿ ಕೆಲಸ ಮಾಡುವಂತೆ ಹೇಳುತ್ತಿದ್ದ ಎಂಬ ವಿಚಾರ ತನಿಖೆಯಲ್ಲಿ ದೃಢಪಟ್ಟಿದೆ. ರಾಜ್ಯದ ವಿವಿಧೆಡೆ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮುಸ್ಲಿಂ ಯುವಕರಿಗೆ ಪ್ರೇರೇಪಿಸುತ್ತಿದ್ದ. ಅದಕ್ಕಾಗಿ ಬೇಕಾದ ತರಬೇತಿ, ಹಣ ಸಹಾಯ, ಕೃತ್ಯದ ಬಳಿಕ ಭೂಗತವಾಗಲು ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುತ್ತಿದ್ದ. ಪ್ರಮುಖವಾಗಿ ಹಿಂದು ಮುಖಂಡರ ಮೇಲೆ ಹಲ್ಲೆ ಮತ್ತು ಕೊಲೆಗೆ ಮುಸ್ಲಿಂ ಯುವಕರಿಗೆ ಪ್ರಚೋದನೆ ಮತ್ತು ತರಬೇತಿ ನೀಡುವಲ್ಲಿ ನಿರತನಾಗಿದ್ದ. ಇದಕ್ಕಾಗಿ ಯುವಕರನ್ನು ಸಂಟಿಸಿ ಮತೀಯವಾದ ಬೋಧಿಸಿ ಮೂಲಭೂತವಾದಿಗಳಾಗಿ ಪರಿವರ್ತಿಸುತ್ತಿದ್ದ. ಹಿಂದು ಧರ್ಮದ ವಿರುದ್ಧ ದ್ವೇಷದ ಬೀಜ ಬೀಜ ಬಿತ್ತುವ ಕೆಲಸ ಈತನದ್ದಾಗಿತ್ತು. ರಾಷ್ಟ್ರದ ಯಾವುದೇ ಮೂಲೆಯಲ್ಲಿ ನಡೆಯುವಂತಹ ಸಣ್ಣಪುಟ್ಟ ವಿಷಯವನ್ನು ಸಹ ಕೋಮುಗಲಭೆಗೆ ಕಿಡಿಯನ್ನಾಗಿ ರೂಪಿಸುತ್ತಿದ್ದ. ಸಣ್ಣ ವಿಷಯವನ್ನು ವಿವಾದಾತ್ಮಕವಾಗಿಸಿ ಜಾಲತಾಣದಲ್ಲಿ ವೈರಲ್​ ಮಾಡಿ ವಾಟ್ಸ್​ ಆ್ಯಪ್​ ಗ್ರೂಪ್​ಗಳಲ್ಲಿ ಅಪ್​ಲೋಡ್​ ಮಾಡುತ್ತಿದ್ದ. ಪ್ರತಿಭಟನೆ, ಕೋಮುಗಲಭೆ ಮತ್ತು ಕಾನೂನುಬಾಹಿರ ಚಟುವಟಿಕೆಗೆ ಪ್ರಚೋದನೆ ಕೊಡುತ್ತಿದ್ದ. ಪರಿಣಾಮ ುಲ್ಲಕ ವಿಷಯವೂ ರಾಷ್ಟ್ರೀಯ ಮಟ್ಟದಲ್ಲಿ ವಿವಾದ ಸೃಷ್ಟಿಸಿ ಭಾರತದಲ್ಲಿ ಅಶಾಂತಿ ಮೂಡುತ್ತಿತ್ತು ಎಂದು ಪೊಲೀಸರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೇರೆ ರಾಜ್ಯಗಳಲ್ಲೂ ದುಷತ್ಯಕ್ಕೆ ಸ್ಕೆಚ್​ಆರೋಪಿ ಮಹಮ್ಮದ್​ ಅಶ್ರ್​ ಮತ್ತು ಇನ್ನಿತರರು ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ಬೇರೆ ರಾಜ್ಯಗಳಲ್ಲಿಯೂ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಸ್ಲೀಪರ್​ ಸೆಲ್​ಗಳ ಕುರಿತು ಮಾಹಿತಿ ಕಲೆ ಹಾಕಿ ಬಂಧನಕ್ಕೆ ಬಲೆಬೀಸಿದ್ದಾರೆ.
ರಾಜ್ಯವ್ಯಾಪಿ ಪಂಚನಾಮೆಬೆಂಗಳೂರು, ಕೊಪ್ಪಳ, ಮೈಸೂರು, ದಣ ಕನ್ನಡ, ಶಿವಮೊಗ್ಗ, ದಾವಣಗೆರೆ, ಕಾರವಾರಕ್ಕೆ ಆರೋಪಿಗಳನ್ನು ಕರೆದೊಯ್ದು ಪಂಚನಾಮೆ ನಡೆಸಲಾಗಿದೆ. ಕೋಮುದ್ವೇಷ ಮತ್ತು ಕಾನೂನುಬಾಹಿರ ಚಟುವಟಿಕೆ ನಡೆಸಲು ರಹಸ್ಯ ಸಭೆ ಮತ್ತು ತರಬೇತಿ ನಡೆಸಿರುವ ಸ್ಥಳಕ್ಕೆ ಕರೆದೊಯ್ದು ಪೊಲೀಸರು ಪಂಚನಾಮೆ ಮಾಡಿದ್ದಾರೆ.
ತಾಂತ್ರಿಕ ಸಾಕ್ಷ್ಯಾ ಸಂಗ್ರಹಬಂಧಿತ 15 ಆರೋಪಿಗಳಿಂದ ಜಪ್ತಿ ಮಾಡಿರುವ ಎಲೆಕ್ಟ್ರಾನಿಕ್​ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಡೇಟಾ, ೇಸ್​ಬುಕ್​, ಟ್ವಿಟರ್​, ಇನ್​ಸ್ಟ್ರಾಗ್ರಾಮ್​, ಟೆಲಿಗ್ರಾಮ್​, ವಾಟ್ಸ್​ಆ್ಯಪ್​ ಖಾತೆಗಳ ಮತ್ತು ಡಿಜಿಟಲ್​ ಸಂಪರ್ಕದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಾನೂನುಬಾಹಿರ ಮತ್ತು ಉಗ್ರ ಚಟುವಟಿಕೆಯಲ್ಲಿ ತೊಡಗಿರುವುದು ಇದರಿಂದ ಬೆಳಕಿಗೆ ಬರಬೇಕಾಗಿದೆ. ದಾಳಿ ವೇಳೆ ಜಪ್ತಿ ಮಾಡಿರುವ ಇಂಗ್ಲಿಷ್​ ಡೈರಿ ಮತ್ತು ಪುಸ್ತಕಗಳನ್ನು ಪರಿಶೀಲನೆ ನಡೆಸುತ್ತಿದ್ದು, ವಿಧ್ವಂಸಕ ಕೃತ್ಯ ಸಂಬಂಧ ಮಾಹಿತಿ ಕಲೆ ಹಾಕಲಾಗುತ್ತಿದೆ. ಬ್ಯಾಂಕ್​ ಖಾತೆ, ಮೊಬೈಲ್​ ಕರೆಗಳ, ವ್ಯಾಲೆಟ್​ಗಳ ಮೂಲಕ ಹಣದ ವಹಿವಾಟು ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ವಿದ್ಯಾ ಸಂಸ್ಥೆಗಳಿಗೂ ಮತೀಯವಾದಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಿ ಅವರಲ್ಲೂ ಮತೀಯ ಮೂಲಭೂತ-ವಾದ ತುಂಬಲು ಸಿಎ್​ಐ (ಕ್ಯಾಂಪಸ್​ ್ರಂಟ್​ ಆ್​ ಇಂಡಿಯಾ) ಸಂಟನೆಯನ್ನು ಮಹಮ್ಮದ್​ ಅಶ್ರ್​ ಪ್ರಾರಂಭಿಸಿದ್ದ. ಇದರಲ್ಲಿ ಸಕ್ರಿಯನಾಗಿ ಮುಸ್ಲಿಂ ಯುವಕರನ್ನು ಸೆಳೆಯುತ್ತಿದ್ದ. ರಾಜ್ಯ ವ್ಯಾಪಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕೋಮು ಗಲಭೆ ಮತ್ತು ದೇಶ ವಿರೋಧಿ ಕೃತ್ಯಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಹುನ್ನಾರ ನಡೆಸಿದ್ದ. ಸಂಟನೆ ಮತ್ತು ಅಕ್ರಮ ಚಟುವಟಿಕೆಗಳಿಗಾಗಿಯೇ ವ್ಯವಸ್ಥಿತ ಜಾಲ ಹೊಂದಿದ್ದ ಆರೋಪಿತರು, ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಪ್ರತ್ಯ ಮತ್ತು ಪರೋಕ್ಷ$ವಾಗಿ ಸಹಾಯದಲ್ಲಿ ತೊಡಗಿ-ದ್ದರು ಎಂಬ ವಿಚಾರ ಈವರೆಗಿನ ವಿಚಾರಣೆಯಲ್ಲಿ ಗೊತ್ತಾಗಿದೆ.
ಬಸವರಾಜ ಬೊಮ್ಮಾಯಿ ಸಿಎಂ
ಖಾತೆಗಳಿಗೆ ಕೋಟ್ಯಂತರ ರೂ. ಜಮಾಪಿಎಫ್​ಐ ಹಾಗೂ ಅಂಗಸಂಸ್ಥೆಗಳ ಬ್ಯಾಂಕ್​ ಖಾತೆಗಳಿಗೆ ನೂರಾರು ಕೋಟಿ ರೂ. ಜಮೆ ಆಗಿರುವುದು ಜಾರಿ ನಿರ್ದೇಶನಾಲಯ (ಇಡಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2018ರಲ್ಲಿ ಇಡಿ ಅಧಿಕಾರಿಗಳು ಪಿಎಫ್​ಐ ಮೇಲೆ ದಾಳಿ ನಡೆಸಿದಾಗ 120 ಕೋಟಿ ರೂ.ಗೂ ಅಧಿಕ ಹಣ ನಗದು ರೂಪದಲ್ಲಿ ಬ್ಯಾಂಕ್​ ಖಾತೆಗೆ ಜಮೆ ಆಗಿತ್ತು. ಇದಲ್ಲದೆ, ಕೇರಳದ ಮುನ್ನಾರ್​ನ ಮುಖಂಡನ ಬ್ಯಾಂಕ್​ ಖಾತೆಗೆ ವಿದೇಶದಿಂದ 22 ಕೋಟಿ ರೂ. ಜಮೆ ಆಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ವಿಲ್ಲಾ ಪ್ರಾಜೆಕ್ಟ್​ಗೆ ಹೂಡಿಕೆ ಎಂದು ಹೇಳಿಕೆ ನೀಡಿದ್ದ. ಈ ಬಗ್ಗೆ ಪಿಎಫ್​ಐ ಮುಖಂಡರಿಗೆ ನೋಟಿಸ್​ ಕೊಟ್ಟು ವಿಚಾರಣೆ ನಡೆಸಲಾಗಿದೆ. ದೇಣಿಗೆ ನೀಡಿದವರ ವಿವರ ಪಡೆದು ಅವರ ವಿಳಾಸ ಪತ್ತೆ ಮಾಡಿದಾಗ ದೆಹಲಿ ಕಾಲನಿಗಳ ಮನೆಗಳು ಸಿಗುತ್ತಿದ್ದವು. ಆದರೆ, ವಿಳಾಸದಲ್ಲಿರುವ ವ್ಯಕ್ತಿಗಳು ಲಾಂತರ ರೂ. ದೇಣಿಗೆ ನೀಡುವಷ್ಟು ಶ್ರೀಮಂತರಾಗಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಬ್ಯಾಂಕ್​ ಖಾತೆಗಳಿಗೆ ಜಮೆಯಾದ ಹಣವನ್ನೇ ಬಳಸಿಕೊಂಡು ದೇಶದ ವಿವಿಧೆಡೆ ಗಲಭೆ, ಕೋಮುಸಂರ್ಷ ಸೃಷ್ಟಿಸುತ್ತಿದ್ದರು ಎಂದು ಇಡಿ ಅಧಿಕಾರಿಗಳು ಕೋರ್ಟ್​ಗೆ ವರದಿ ಸಲ್ಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − thirteen =
Remember me
