ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿಯ ಖುಷಿ ಮೂಡ್​ನಿಂದ ಕಾಂಗ್ರೆಸ್ ಹೊರಬಂದು, ಸರ್ಕಾರ ರಚನೆಗೆ ಪೂರ್ವಭಾವಿಯಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕಸರತ್ತಿಗೆ ಚಾಲನೆ ನೀಡಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ಸಮುದಾಯದ ನಾಯಕನಿಗೇ ನೀಡಬೇಕು ಎಂದು ಒಕ್ಕಲಿಗರು ಹಾಗೂ ಕುರುಬರು ಬಿಗಿಪಟ್ಟು ಹಿಡಿದಿದ್ದಾರೆ.
ಎರಡೂ ಪ್ರಬಲ ಸಮುದಾಯಗಳು ಪ್ರತ್ಯೇಕ ಸಭೆ ನಡೆಸುವ ಮೂಲಕ ಒತ್ತಡತಂತ್ರ ಬಳಸಿದ್ದು, ಶಾಸಕಾಂಗದ ಪಕ್ಷದ ನಾಯಕನ ಆಯ್ಕೆಗೆ ಕಾಂಗ್ರೆಸ್ ಕರೆದಿದ್ದ ಸಭೆಯ ಮೇಲೂ ಪ್ರಭಾವಬೀರಿದೆ.
ಈಗಷ್ಟೇ ಚುನಾವಣೆ ನಡೆದಿದ್ದು, ಸ್ಪಷ್ಟ ಜನಾದೇಶ ದೊರೆತಿದೆ. ಸಿಎಂ ಹುದ್ದೆಯ ಹಗ್ಗಜಗ್ಗಾಟದಿಂದ ಜನತೆಗೆ ತಪು್ಪ ಸಂದೇಶ ರವಾನೆಯಾಗಲಿದೆ ಎಂದು ಅರಿತ ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆಯಿಟ್ಟಿದೆ.
ಬಿಸಿ ಚರ್ಚೆ:ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಠಾಧೀಶ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯ ಸಭೆ ಸೇರಿ, ಸಿಎಂ ಹುದ್ದೆ ಸಮುದಾಯಕ್ಕೆ ಪಡೆದುಕೊಳ್ಳಲೆಂದು ಬಿಸಿ ಬಿಸಿ ಚರ್ಚೆ ನಡೆಸಿದ್ದಾರೆ.
ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಈ ಪಟ್ಟ ಕಟ್ಟಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಗಿದ್ದು, ಕಾಂಗ್ರೆಸ್ ಮೇಲೆ ನೇರವಾಗಿ ಒತ್ತಡ ಹೇರಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಕುರುಬ ಸಮುದಾಯವು ಸಭೆ ಸೇರುವ ಮೂಲಕ
ತನ್ನ ಬಲಪ್ರದರ್ಶಿಸಿದೆ. ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಮಾಜಿ ಮೇಯರ್ ವೆಂಕಟೇಶಮೂರ್ತಿ, ಬಿಬಿಎಂಪಿ ಮಾಜಿ ಪ್ರತಿಪಕ್ಷ ನಾಯಕ ಎಂ.ಶಿವರಾಜ, ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಭಾಗವಹಿಸಿದ್ದರು.
ಸ್ವಾಮೀಜಿಗಳಿಗೆ ಈ ಸಭೆ ಏಕೆ ಬೇಕಿತ್ತು ಎಂದು ಕೆಲವರು ಪ್ರಶ್ನೆ ಮಾಡಬಹುದು. ಆದರೆ, ನಾಡಿನ ರಾಜಕಾರಣದ ವಿಚಾರ ಬಗ್ಗೆ ನಾವು ಪ್ರಸ್ತಾಪ ಮಾಡುತ್ತಿಲ್ಲ. ಸಮುದಾಯ ಹಾಗೂ ಮನೆಯ ಮಗನಾಗಿ ನಾಡು ಕಟ್ಟಲು ಡಿಕೆಶಿಗೆ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಇವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ.
|ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಅವರಿಗೆ ಸಹಕಾರ ನೀಡಿದ್ದೇನೆ, ಈಗ ಅವರೂ ಸಹಕಾರ ನೀಡುತ್ತಾರೆ. ಕಾಂಗ್ರೆಸ್ ಎಲ್ಲವನ್ನೂ ನನಗೆ ನೀಡಿದೆ, ನಾನು ಪಕ್ಷನಿಷ್ಠನಾಗಿ ನಡೆದುಕೊಂಡಿದ್ದೇನೆ. ಜೈಲಿನಿಂದ ಹೊರಬರುತ್ತಲೇ ಪಕ್ಷದ ಜವಾಬ್ದಾರಿ ವಹಿಸಿಕೊಂಡು ಹಗಲು, ರಾತ್ರಿ ದುಡಿದಿದ್ದೇನೆ. ನೋಡೋಣ ಸಿಎಂ ಆಗ್ತಿನಿ ಎಂಬ ನಂಬಿಕೆ ನನಗಿದೆ.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + thirteen =
Remember me
