ವಿಜಯಪುರ:ಸಮುದಾಯ ಭವನದ ಕೀ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯ ಕಿವಿಯನ್ನೇ ಕಚ್ಚಿರುವ ಘಟನೆ ವಿಜಯಪುರ ತಾಲೂಕಿನ ಮಹಲ-ಐನಾಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಸಿಆರ್​ಪಿಎಫ್​ ಯೋಧನ ಕುಟುಂಬದ ಮೇಲೆ ರಮೇಶ್​ ಜಾರಕಿಹೊಳಿ ಬೆಂಬಲಿಗರಿಂದ ಹಲ್ಲೆ ಆರೋಪ
ಸುರೇಶ್​ ಚವ್ಹಾಣ ಎಂಬಾತನೇ ಪೇದೆಯ ಕಿವಿ ಕಚ್ಚಿದವ. ಖಾಸಗಿ ಶಾಲೆಯ ಶಿಕ್ಷಕನಾಗಿರುವ ಈತ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಬಾಬು ಕಡಣಿ ಅವರ ಕಿವಿಯನ್ನು ಕಚ್ಚಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಕ್ವಾರಂಟೈನ್​ನಲ್ಲಿ ಇಡಲು ಪೇದೆ ಬಾಬು ಅವರು ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಆದೇಶದ ಮೇರೆಗೆ ಸಮುದಾಯ ಭವನದ ಕೀ‌ ಕೇಳಿದ್ದರು. ಆದರೆ, ಸಮುದಾಯ ಭವನ ನನ್ನದು ಎಂದು ಕೀ ಕೊಡದೆ ಸತಾಯಿಸಿದ್ದ ಸುರೇಶ್​ ಏಕಾಏಕಿ ಹಲ್ಲೆಮಾಡಿ ತಹಶೀಲ್ದಾರ್ ಮೋಹನಕುಮಾರಿ ಎದುರಲ್ಲೇ ಕಿವಿ ಕಚ್ಚಿ, ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದನ್ನೂ ಓದಿ:ಪತ್ನಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ನಡೆದಿತ್ತೊಂದು ಭೀಕರ ಘಟನೆ…!
ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತಹಶೀಲ್ದಾರ್ ಮೋಹನಕುಮಾರಿ ಅವರೇ ಖುದ್ದಾಗಿ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.(ಏಜೆನ್ಸೀಸ್​)
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಕ್ಕೆಆರ್ಥಿಕ​ ಪ್ಯಾಕೇಜ್​​ ಮೂಲಕ 6 ಹೊಸ ಕ್ರಮಗಳು: ನಿರ್ಮಲಾ ಸೀತಾರಾಮನ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 5 =
Remember me
