ಬೆಂಗಳೂರು:ಕರೊನಾ ಸಂಕಷ್ಟದಲ್ಲಿಯೂ ಅಬಕಾರಿ ಇಲಾಖೆಗೆ ಮದ್ಯ ಮಾರಾಟದಿಂದ ಈ ವರ್ಷದಲ್ಲಿ ಭರ್ಜರಿ ಆದಾಯ ಬಂದಿದೆ. 2019ರ ಏ.1ರಿಂದ ಡಿ.31ರವರೆಗೆ ಮದ್ಯ ಮಾರಾಟದಿಂದ 16,218 ಕೋಟಿ ರೂ.ಆದಾಯ ಬಂದರೆ, 2020ರ ಏ.1ರಿಂದ ಡಿ.31ರವರೆಗೆ 16,405 ಕೋಟಿ ರೂ.ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಆದಾಯದಲ್ಲಿ 187 ಕೋಟಿ ರೂ. ಮುಂದಿದೆ. ಕರೊನಾ ನಿಯಂತ್ರಿಸುವ ಸಲುವಾಗಿ ಏಪ್ರಿಲ್ ಪೂರ್ತಿ ತಿಂಗಳು ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು. ಇದರಿಂದ ಅಂದಾಜು 2 ಸಾವಿರ ಕೋಟಿ ರೂ.ಆದಾಯ ಖೋತಾವಾಗಿತ್ತು. ಆದರೆ, ಲಾಕ್‌ಡೌನ್ ತೆರವು ಬಳಿಕ ಮದ್ಯ ಮಾರಾಟದಲ್ಲಿ ಇಲಾಖೆಗೆ ಭರ್ಜರಿ ಆದಾಯವಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2020ರ ತಿಂಗಳುವಾರು ಮಾಹಿತಿ: ಏಪ್ರಿಲ್‌ನಲ್ಲಿ 1.06 ಕೋಟಿ ರೂ., ಮೇನಲ್ಲಿ 1,403.02 ಕೋಟಿರೂ., ಜೂನ್‌ನಲ್ಲಿ 2,427.09 ಕೋಟಿ ರೂ., ಜುಲೈನಲ್ಲಿ 2,032.84 ಕೋಟಿ ರೂ., ಆಗಸ್ಟ್‌ನಲ್ಲಿ 1,891.39 ಕೋಟಿ ರೂ., ಸೆಪ್ಟೆಂಬರ್‌ನಲ್ಲಿ 2,010.23 ಕೋಟಿ ರೂ., ಅಕ್ಟೋಬರ್‌ನಲ್ಲಿ 2,197.20 ಕೋಟಿ ರೂ., ನವೆಂಬರ್‌ನಲ್ಲಿ 2,006.74 ಕೋಟಿ ರೂ. ಹಾಗೂ ಡಿಸೆಂಬರ್‌ನಲ್ಲಿ 2,436.34 ಕೋಟಿ ರೂ.ಆದಾಯ ಬಂದಿದ್ದು, ಒಟ್ಟಾರೆ ಮದ್ಯ ಮಾರಾಟದಲ್ಲಿ ಶೇ.1.16 ಬೆಳವಣಿಗೆಯಾಗಿದೆ.
ಬೆಂಗಳೂರಲ್ಲೇ 48.28 ಕೋಟಿ ರೂ ವಹಿವಾಟು:ಹೊಸ ವರ್ಷ ಹಿನ್ನೆಲೆಯಲ್ಲಿ ಡಿ.31ರಂದು ಬೆಂಗಳೂರಿನಲ್ಲಿ ಬರೋಬ್ಬರಿ ಮದ್ಯ ಮಾರಾಟದಿಂದ ಇಲಾಖೆಗೆ, 48.28 ಕೋಟಿ ರೂ.ಆದಾಯ ಬಂದಿದೆ. 56 ಸಾವಿರ ಬಾಕ್ಸ್ ಐಎಂಎಲ್ ಲಿಕ್ಕರ್ ಹಾಗೂ 50 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗಿದೆ. ಒಟ್ಟಾರೆ 2020ರ ಡಿ.31ರಂದು ರಾಜ್ಯಾದ್ಯಂತ 120.21 ಕೋಟಿ ರೂ. ಮೌಲ್ಯದ 2.23 ಲಕ್ಷ ಬಾಕ್ಸ್ ಐಎಂಎಲ್ ಹಾಗೂ 30.73 ಕೋಟಿ ರೂ.ಮೌಲ್ಯದ 1.73 ಲಕ್ಷ ಬಾಕ್ಸ್ ಬಿಯರ್ ಸೇರಿ ಒಟ್ಟು 150.94 ಕೋಟಿ ರೂ.ಮೌಲ್ಯದ ಮದ್ಯ ಮಾರಾಟವಾಗಿದೆ.
ಇವತ್ತೆಷ್ಟು ಮಕ್ಕಳು ಹುಟ್ಟುತ್ತವೆ ಗೊತ್ತಾ? ಅಬ್ಬಾ.. ಭಾರತದಲ್ಲೇ ಹೈಯೆಸ್ಟು!
ಕೆಜಿಎಫ್​ ನಿರ್ದೇಶಕರೇ ‘ಹುಟ್ಟು’ ಹಾಕಿದರು; ರವಿ ಬಸ್ರೂರ್​ಗಿಂದು ಒಂದಲ್ಲ ಎರಡು ಹುಟ್ಟುಹಬ್ಬ!
ನಿನ್ನೆ ದೀಪಿಕಾ ಪಡುಕೋಣೆ ಹಾಗೇಕೆ ಮಾಡಿದ್ರು?!; ಎಲ್ಲ ತೆಗೆದ ಅವರಿಂದು ಫೀಲಿಂಗ್ ಹೇಳಿಕೊಂಡಿದ್ದಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + ten =
Remember me
