| ಅಜ್ಜಮಾಡ ರಮೇಶ್​ ಕುಟ್ಟಪ್ಪ ಮಡಿಕೇರಿವಿಧಾನಸಭೆ ಮಾಜಿ ಸ್ಪೀಕರ್​ ಕೆ.ಜಿ. ಬೋಪಯ್ಯ ಸತತ ಮೂರು ಅವಧಿಯಿಂದ ಪ್ರತಿನಿಧಿಸುತ್ತಿರುವ ವಿರಾಜಪೇಟೆ ಕ್ಷೇತ್ರ ಪ್ರತಿಷ್ಠಿತ ಕಣವಾಗಿದೆ. ಕಾಂಗ್ರೆಸ್​ ನೆಲೆಯಾಗಿದ್ದ ಈ ಕ್ಷೇತ್ರವನ್ನು ಎರಡು ದಶಕಕ್ಕೂ ಮೊದಲು ಬಿಜೆಪಿ ಛಿದ್ರಗೊಳಿಸಿದೆ. ಪ್ರಸ್ತುತ ಬಿಜೆಪಿಯ ಭದ್ರಕೋಟೆಯಾಗಿದ್ದು, ಗತವೈಭವಕ್ಕೆ ಮರಳಲು ಕಾಂಗ್ರೆಸ್​ ಹರಸಾಹಸ ಪಡುತ್ತಿದೆ.
ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ ಎ.ಕೆ. ಸುಬ್ಬಯ್ಯ ಅವರ ಪುತ್ರ ಎ.ಎಸ್​. ಪೊನ್ನಣ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹೈಕೋರ್ಟ್​ ಹಿರಿಯ ವಕೀಲರೂ ಆಗಿರುವ ಎ.ಎಸ್​. ಪೊನ್ನಣ್ಣ ಮೂಲಕ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಕಾಂಗ್ರೆಸ್​ ಇದೆ.
ಮುಖ್ಯಮಂತ್ರಿಯಾಗಿದ್ದ ಆರ್​. ಗುಂಡೂರಾವ್​ ಬಳಿಕ ವಿಧಾನಸಭೆ ಉಪಾಧ್ಯಕ್ಷ, ಅಧ್ಯಕ್ಷರೂ ಆಗಿ ಜವಾಬ್ದಾರಿ ನಿರ್ವಹಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಪ್ರಸ್ತುತ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ಕೆ.ಜಿ. ಬೋಪಯ್ಯ ಅವರಿಗೆ ಸಲ್ಲುತ್ತದೆ. ಕೊಡವ ಸಮುದಾಯದ ಶಾಸಕ ಬೇಕೆಂಬ ಪ್ರಬಲ ಬೇಡಿಕೆ ಹಿನ್ನೆಲೆಯಲ್ಲಿ ಪ್ರತಿ ಚುನಾವಣೆ ಸಂದರ್ಭ ಸ್ವಪಕ್ಷೀಯರು ಸೇರಿ ಇತರರಿಂದ ತೀವ್ರ ವಿರೋಧ ಎದುರಿಸುತ್ತ ಬಂದಿದ್ದಾರೆ.
2008ರಲ್ಲಿ ಕ್ಷೇತ್ರ ಮರುವಿಂಗಡಣೆ ಸಂದರ್ಭ ಸಾಮಾನ್ಯ ಕ್ಷೇತ್ರವಾಗಿ ವಿರಾಜಪೇಟೆ ಮಾರ್ಪಟ್ಟಿತು. ಅದಕ್ಕೂ ಮೊದಲು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರವಾಗಿತ್ತು. ಕ್ಷೇತ್ರ ವ್ಯಾಪ್ತಿಯಲ್ಲಿ ಕೊಡವ ಭಾಷಿಕ ಮತದಾರರ ಪ್ರಾಬಲ್ಯ ಹೆಚ್ಚಿರುವುದರಿಂದ ಕೊಡವ ಶಾಸಕ ಬೇಕೆಂಬ ಹಂಬಲ ಪ್ರಬಲವಾಗಿ ವ್ಯಕ್ತವಾಗುತ್ತಿದೆ.
ಉತ್ತರಪ್ರದೇಶ, ಗುಜರಾತ್​ ರಾಜ್ಯಗಳಲ್ಲಿ ಸಚಿವರು, ಶಾಸಕರು, ಮಾಜಿ ಶಾಸಕರನ್ನು ದೂರವಿಟ್ಟು ಹೊಸ ಮುಖಕ್ಕೆ ಅವಕಾಶ ನೀಡಿದ ಮಾದರಿ ವಿರಾಜಪೇಟೆ ಕ್ಷೇತ್ರದಲ್ಲಿಯೂ ಆಗಲಿದೆ ಎಂಬ ನಿರೀಕ್ಷೆಯಲ್ಲಿ ಹಲವರು ಬಿಜೆಪಿ ಟಿಕೆಟ್​ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್​ ನಾಣಯ್ಯ ಹೆಸರು ಮುಂಚೂಣಿಯಲ್ಲಿದೆ. ಮಾಜಿ ಎಂಎಲ್ಸಿ ಮಂಡೇಪಂಡ ಸುನಿಲ್​ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್​ ದೇವಯ್ಯ, ಮಾಜಿ ಜಿಲ್ಲಾಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಸದಸ್ಯೆ ಪಟ್ಟಡ ರೀನಾ ಪ್ರಕಾಶ್​, ಬಿಜೆಪಿ ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್​ಕುಮಾರ್​ ಕಮಲ ಪಾಳಯದಲ್ಲಿ ಪ್ರಬಲ ಟಿಕೆಟ್​ ಅಕಾಂಕ್ಷಿಗಳಾಗಿದ್ದಾರೆ.ಕಾಂಗ್ರೆಸ್​ ಟಿಕೆಟ್​ಗೆ ಕೆಪಿಸಿಸಿ ವಕ್ತಾರ ಎ.ಎಸ್​. ಪೊನ್ನಣ್ಣ ಅವರಿಗೆ ಮಾಜಿ ಎಂಎಲ್ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಪೈಪೋಟಿ ಕೊಡುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಸಂಪರ್ಕದಲ್ಲಿರುವ ಕೆಪಿಸಿಸಿ ಕಾನೂನು ಟಕ ಅಧ್ಯಕ್ಷ ಎ.ಎಸ್​. ಪೊನ್ನಣ್ಣ ಅವರ ಸ್ಪರ್ಧೆ ನಿಶ್ಚಿತ ಎನ್ನಲಾಗುತ್ತಿದೆ. ಕ್ಷೇತ್ರದಲ್ಲಿ ಜೆಡಿಎಸ್​ ಅಸ್ತಿತ್ವ ಕಳೆದು ಕೊಂಡಿರುವುದರಿಂದ ಬಿಜೆಪಿ& ಕಾಂಗ್ರೆಸ್​ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಜೆಡಿಎಸ್​ನಿಂದ ನಾಮ್​ ಕೇ ವಾಸ್ತೆಗೆ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಹಿಂದುತ್ವ, ಟಿಪ್ಪು ಜಯಂತಿ ಆಚರಣೆ, ಕೊಡವ ಶಾಸಕ ಬೇಡಿಕೆ ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಲಿವೆ.
ಬಿಜೆಪಿ ಪ್ಲಸ್​&ಮೈನಸ್​* ಬಲಿಷ್ಠ ಸಂಟನೆ, ಪಕ್ಷಕ್ಕಾಗಿ ಹಗಲು&ರಾತ್ರಿ ದುಡಿಯುವ ಕಾರ್ಯಕರ್ತರ ಪಡೆ.* ಬೋಪಯ್ಯ ಅವರಿಗೆ ಪ್ರತಿರೋಧ ವ್ಯಕ್ತಪಡಿಸುವ ನಾಯಕರು ಅಂತಿಮ ಕ್ಷಣದಲ್ಲಿ ತೋರುವ ಪಕ್ಷನಿಷ್ಠೆ.* ಹಿಂದುತ್ವ, ನರೇಂದ್ರ ಮೋದಿ ಅವರಿಗಾಗಿ ಮತ ಹಾಕುವವರ ಸಂಖ್ಯೆ ಅಧಿಕ.* ಕೊಡವ ಶಾಸಕ ಬೇಕೆಂಬ ಬೇಡಿಕೆ.* ವಾಹನ ಸಂಚರಿಸಲು ಸಾಧ್ಯವಾಗದಷ್ಟು ಕೆಟ್ಟು ಹೋಗಿರುವ ರಸ್ತೆ.* ನಿವೇಶನ& ವಸತಿರಹಿತರ ಆಕ್ರೋಶ. ವನ್ಯಪ್ರಾಣಿ ಹಾವಳಿ.
ಕಾಂಗ್ರೆಸ್​ ಪ್ಲಸ್​-ಮೈನಸ್​* ಎ.ಕೆ. ಸುಬ್ಬಯ್ಯ ಅವರ ಪತ್ರ ಎ.ಎಸ್​. ಪೊನ್ನಣ್ಣ ಸ್ಪರ್ಧಿಸುತ್ತಿರುವುದು.* ಮೂರು ವರ್ಷದಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರುವುದು.* ಕ್ರೀಡಾಕೂಟ, ದೇವಾಲಯ, ಶಿಕ್ಷಣ, ಆರೋಗ್ಯ ಇನ್ನಿತರ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನೆರವು.* ಅಭ್ಯರ್ಥಿ ಸೋಲಿಸುವ ಚಾಳಿ ಮೈಗೂಡಿಸಿಕೊಂಡಿರುವ ಸ್ವಪಕ್ಷೀಯ ನಾಯಕರು.*  ಕ್ಷೇತ್ರ ವ್ಯಾಪ್ತಿಯಲ್ಲಿ ಸಂಟನಾತ್ಮಕವಾಗಿ ದುರ್ಬಲವಾಗಿರುವುದು.& ಪಕ್ಷನಿಷ್ಠೆ ಹೊಂದಿರುವ ಮುಖಂಡರು& ಕಾರ್ಯಕರ್ತರ ಕೊರತೆ.
ಕೊಡವರ ಪ್ರಾಬಲ್ಯವಿರಾಜಪೇಟೆ ಕ್ಷೇತ್ರ ವ್ಯಾಪ್ತಿಗೆ ಪೊನ್ನಂಪೇಟೆ, ವಿರಾಜಪೇಟೆ ತಾಲೂಕು ಪೂರ್ಣ ಪ್ರಮಾಣದಲ್ಲಿ ಹಾಗೂ ಮಡಿಕೇರಿ ತಾಲೂಕಿನ ಬಹುತೇಕ ಗ್ರಾಮಗಳಿವೆ. ಕೊಡವ ಭಾಷಿಕ ಮತದಾರರು ಪ್ರಾಬಲ್ಯ ಹೊಂದಿದ್ದು, ಮುಸ್ಲಿಂ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅರೆಭಾಷೆ ಗೌಡ, ತುಳುಭಾಷಿಕ, ಮಲೆಯಾಳಂ ಮತದಾರರು ನಿರ್ಣಾಯಕರಾಗಲಿದ್ದಾರೆ.
ಪಕ್ಷಗಳ ಸಿದ್ಧತೆಬಿಜೆಪಿ:ಶಾಸಕ ಕೆ.ಜಿ. ಬೋಪಯ್ಯ ಅವರಿಂದ ನಿರಂತರ ಕ್ಷೇತ್ರ ಪ್ರವಾಸ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಭೂಮಿಪೂಜೆ. ಬೂತ್​ ಅಭಿಯಾನದ ಮೂಲಕ ತಳಮಟ್ಟದಲ್ಲಿ ಪಕ್ಷ ಸಂಟನೆ.ಕಾಂಗ್ರೆಸ್​:ಸಂಭವನೀಯ ಅಭ್ಯರ್ಥಿ ಎ.ಎಸ್​.ಪೊನ್ನಣ್ಣ ಅವರಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಪ್ರವಾಸ, ಜನರ ವಿಶ್ವಾಸ ಗಳಿಸುವ ಯತ್ನ. ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ನೇತೃತ್ವದಲ್ಲಿ ಬೂತ್​ ಮಟ್ಟದಲ್ಲಿ ಪಕ್ಷ ಸಂಟನೆ ಜೆಡಿಎಸ್​: ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್​ ರಾಜಕೀಯವಾಗಿ ತಟಸ್ಥ. ಕೆಲವು ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುವುದಕ್ಕಷ್ಟೇ ಸೀಮಿತ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 19 =
Remember me
