ಬೆಂಗಳೂರು:ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟು ಕೊಂಡು ಕಾಂಗ್ರೆಸ್​ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆದಿರುವುದು ಗುಟ್ಟಿನ ವಿಚಾರವೇನಲ್ಲ. ಈ ಪೈಪೋಟಿ ಕುರಿತು ದೆಹಲಿ ನಾಯಕರಿಗೆ ದೂರು ನೀಡುವ ಹಂತಕ್ಕೂ ಬೆಳವಣಿಗೆಗಳು ನಡೆದಿವೆ.
ಸಾಮೂಹಿಕ ನಾಯಕತ್ವಕ್ಕೆ ಮನ್ನಣೆ ನೀಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷದ ಒಂದು ತಂಡ ಕತಿ ್ತುಸೆಯುವುದು ಮುಂದುವರಿಸಿದೆ. ಹಾಗೆಯೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿಲ್ಲ, ಸರ್ಕಾರದ ವಿರುದ್ಧ ದನಿ ಎತ್ತುತ್ತಿಲ್ಲ, ತಳಮಟ್ಟದಲ್ಲಿ ಸಂಘಟನೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧವೂ ಕೆಲ ಶಾಸಕರು ಪಕ್ಷದ ವೇದಿಕೆಯಲ್ಲಿ ದನಿ ಎತ್ತಿ ಹೈಕಮಾಂಡ್ ಗಮನಕ್ಕೂ ತಂದಿದ್ದಾರೆ. ಪ್ರಮುಖ ನಾಯಕರಲ್ಲಿನ ಸಮನ್ವಯತೆ ಕೊರತೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗದೇ ಇರುವುದು ಪಕ್ಷದ ಸರಣಿ ಸೋಲಿಗೆ ಪ್ರಮುಖ ಕಾರಣ ಎಂಬ ವಿಶ್ಲೇಷಣೆ ಈಗ ಹೈಕಮಾಂಡ್ ಮಟ್ಟದಲ್ಲಿಯೇ ನಡೆಯುತ್ತಿದೆ.
ಹೈಕಮಾಂಡ್​ಗೆ ಪತ್ರ ಬರೆದಿರುವ ವಿಧಾನಪರಿಷತ್ ಸದಸ್ಯರೊಬ್ಬರ ನೇತೃತ್ವದ ತಂಡ, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಸಾಮೂಹಿಕ ನಾಯಕತ್ವದ ನೀತಿ ಪಾಲಿಸುತ್ತಿಲ್ಲ. ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಪಕ್ಷದ ಭವಿಷ್ಯಕ್ಕೆ ಮುಳುವಾಗಲಿದೆ ಎಂಬ ಒಕ್ಕಣೆಯೊಂದಿಗೆ ದೆಹಲಿ ನಾಯಕರಿಗೆ ವಿಷಯ ತಲುಪಿಸಿದ್ದಾರೆ. ಅಷ್ಟೇ ಅಲ್ಲದೆ, ಚಾಮರಾಜಪೇಟೆ ಕ್ಷೇತ್ರದ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಿರುವುದನ್ನು ಪ್ರಸ್ತಾಪಿಸಿ, ಈ ಪ್ರಯತ್ನಕ್ಕೆ ತಡೆಯೊಡ್ಡುವ ಅಭಿಲಾಷೆಯನ್ನು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ದೆಹಲಿ ನಾಯಕರ ಸಂಪರ್ಕ ಹೊಂದಿರುವ ಪರಿಷತ್ ಸದಸ್ಯರ ನೇತೃತ್ವದಲ್ಲಿ ಪಕ್ಷದ ಕೆಲ ಶಾಸಕರೂ ಸೇರಿಕೊಂಡಿದ್ದು, ಎಲ್ಲರೂ ಒಟ್ಟಾಗಿ ಸಭೆ ನಡೆಸಿದ್ದಾರೆಂದು ಗೊತ್ತಾಗಿದೆ.
ಡಿಕೆಶಿ ವಿರುದ್ಧ ಆಕ್ರೋಶ:ಡಿ.ಕೆ.ಶಿವಕುಮಾರ್ ವಿಚಾರಕ್ಕೆ ಬಂದರೆ, ಅಧ್ಯಕ್ಷರಾದ ಮೇಲೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿಲ್ಲ ಎಂಬ ಮಾತು ಬಲವಾಗಿದೆ. ಅಷ್ಟೇ ಅಲ್ಲದೆ, ಸಿಎಂ ವಿರುದ್ಧ ಪಕ್ಷದ ಅಧ್ಯಕ್ಷರಾಗಿ ದನಿ ಎತ್ತುತ್ತಿಲ್ಲ. ಅನೇಕ ವಿಚಾರಗಳಲ್ಲಿ ಆಡಳಿತ ಪಕ್ಷವನ್ನು ಸರಿಯಾಗಿ ಹಣೆಯಲು ಅವಕಾಶ ಸಿಕ್ಕರೂ ಕೈಚೆಲ್ಲುತ್ತಿದ್ದಾರೆಂಬ ಅಭಿಪ್ರಾಯವನ್ನು ಪತ್ರಗಳ ಮೇಲೆ ಪತ್ರ ಬರೆದು ಅವರ ವಿರೋಧಿಗಳು ಹೈಕಮಾಂಡ್​ಗೆ ದೂರು ನೀಡುತ್ತಿದ್ದಾರೆ. ಅಧ್ಯಕ್ಷರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ ಅವರ ಕುಟುಂಬದಲ್ಲಿ ಜನಪ್ರತಿನಿಧಿಗಳಾಗಿರುವವರನ್ನು ಮಾತ್ರ ಜತೆಯಲ್ಲಿಟ್ಟುಕೊಂಡಿದ್ದಾರೆ. ತಳಮಟ್ಟದಲ್ಲಿ ಸಂಘಟನೆಗೆ ಆದ್ಯತೆ ನೀಡುತ್ತಿಲ್ಲ. ರಾಜ್ಯ ಮಟ್ಟದಲ್ಲಿಯೂ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಇತ್ತೀಚಿಗೆ ನಡೆದ ಪಕ್ಷದ ಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಪಕ್ಷದಲ್ಲಿ ಸಮನ್ವಯದ ಬಗ್ಗೆ ದನಿ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.
ಪಕ್ಷದಲ್ಲಿ ಹುಮ್ಮಸ್ಸು ತರಲು ಡಿಕೆಶಿ ಪ್ರವಾಸ
ಬೆಂಗಳೂರು:ಪಕ್ಷಕ್ಕೆ ಸುತ್ತಿಕೊಂಡಿರುವ ಸರಣಿ ಸೋಲಿನ ಸರಪಳಿಯನ್ನು ಕಳಚಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯಪ್ರವಾಸ ಹೊರಟಿದ್ದಾರೆ. ನಾಯಕತ್ವ ಬದಲಾವಣೆ ಆದರೂ ಚುನಾವಣಾ ರಾಜಕಾರಣದಲ್ಲಿ ಪಕ್ಷದ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಖುದ್ದು ಅಖಾಡಕ್ಕಿಳಿದಿದ್ದಾರೆ. ಪಕ್ಷದೊಳಗಿನ ಸ್ಥಳೀಯ ಮಟ್ಟದ ಗೊಂದಲ ಪರಿಹಾರ, ಸ್ಥಳೀಯ ವಿಷಯ ಮುಂದಿಟ್ಟುಕೊಂಡು ಹೋರಾಟ ಸಂಘಟಿಸಲು ಯೋಜನೆ ರೂಪಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಜ.5ರಿಂದ 18ರವರೆಗೂ ಪ್ರವಾಸದಲ್ಲಿರುತ್ತೇನೆ. ಬ್ಲಾಕ್ ಅಧ್ಯಕ್ಷರನ್ನು ಭೇಟಿ ಮಾಡಿ ಅವರ ಧ್ವನಿ ಆಲಿಸಲು ನಿರ್ಧರಿಸಿದ್ದೇನೆ. 2021 ನಮ್ಮ ಪಕ್ಷಕ್ಕೆ ಸಂಘಟನೆಯ ವರ್ಷ, ಹೋರಾಟದ ವರ್ಷ. ಸ್ಥಳೀಯವಾಗಿ ಏನೇನು ಸಮಸ್ಯೆ ಇದೆ ಎಂದು ಗಮನದಲ್ಲಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
