ಮಂಡ್ಯ:ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದು, ದರ್ಶನ್​ರನ್ನು ಎರಡು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲಾಗಿದೆ. ಒಂದೆಡೆ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ, ಮತ್ತೊಂದೆಡೆ ನಟನ ಮಹಿಳಾ ಅಭಿಮಾನಿಯೊಬ್ಬರು ಕೇಂದ್ರ ಸಚಿವರಾದ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಎಸಗಿದ್ದಾರೆ.
ಇದನ್ನೂ ಓದಿ:ಕಟಕೋಳದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ
“ದರ್ಶನ್​ರನ್ನು ಪೊಲೀಸರು ಬಂಧಿಸಲು ಎಚ್​.ಡಿ. ಕುಮಾರಸ್ವಾಮಿ ಕಾರಣ. ಅವರ ಮೇಲೆ ಕೊಲೆ ಆರೋಪ ಬರುವಂತೆ ಎಚ್​ಡಿಕೆ ಮಾಡಿದ್ದಾನೆ. ಹಣ ಕೊಟ್ಟು ದರ್ಶನ್​ ವಿರುದ್ದ ಧಿಕ್ಕಾರದ ಕೂಗು ಹಾಕಿಸುತ್ತೀಯಾ? ಸುಮಲತಾ ಅಂಬರೀಶ್​ ಮಂಡ್ಯದಲ್ಲಿ ನಿನಗೆ ಸ್ಪರ್ಧಿಸಲು ಚಾನ್ಸ್​ ಕೊಟ್ಟಿದ್ದಕ್ಕೆ ಬಾಸ್​ ವಿರುದ್ಧ ಸ್ಕೆಚ್ ಹಾಕುತ್ತೀಯಾ? ಸುಮಲತಾ‌ ಅವರಿಂದ ಭಿಕ್ಷೆ ಪಡೆದುಕೊಂಡಿರುವ ಮಗ ನೀನು” ಎಂದು ಏಕವಚನದಲ್ಲಿ ದಾಳಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವರನ್ನು ಏಕವಚನದಲ್ಲಿ ನಿಂದಿಸಿದ ದರ್ಶನ್ ಅಭಿಮಾನಿ ಮಂಗಳಾ ಅವರು ವಿರುದ್ಧ ಇದೀಗ ಮಂಡ್ಯದ ಕೆ.ಆರ್.ಪೇಟೆ ಟೌನ್​ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜೆಡಿಎಸ್​ ತಾಲೂಕು ಘಟಕದ ಅಧ್ಯಕ್ಷ ಜಾನಿಕೀರಾಮ್​ ದೂರು ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

ನಾಯಕನಾಗಿ ನೀನು ಮಾಡಿದ್ದೇನೂ ಇಲ್ಲ! ಬಾಬರ್ ಆಜಂ ನಿವೃತ್ತಿಗೆ ಒತ್ತಾಯಿಸಿದ ಪಾಕ್​ ಮಾಜಿ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twelve =
Remember me
