ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ವಿರುದ್ಧ ಕ್ರಮಕ್ಕೆ  ಬರೋಬ್ಬರಿ 700 ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ!
ಆಲ್-ಇಂಡಿಯಾ ಫೆಮಿನಿಸ್ಟ್ ಅಲೈಯನ್ಸ್, ವುಮೆನ್ ಫಾರ್ ಡೆಮಾಕ್ರಸಿ, ಇತರ ಮಹಿಳಾ ಹಕ್ಕುಗಳು, ಪ್ರಜಾಸತ್ತಾತ್ಮಕ ಸಮೂಹಗಳು ಮತ್ತು ಭಾರತದಾದ್ಯಂತ ಕಾಳಜಿವಹಿಸುವ ನಾಗರಿಕರು ಸಹಿ ಹಾಕಿ, ಪ್ರಜ್ವಲ್ ರೇವಣ್ಣ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಎಚ್.ಡಿ.ರೇವಣ್ಣ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ವಿಜೇತರೆಂದು ಘೋಷಣೆಯಾದರೂ ಅವರ ಮೇಲಿನ ಆರೋಪಗಳು ನ್ಯಾಯಾಂಗದಲ್ಲಿ ಇತ್ಯರ್ಥವಾಗುವವರೆಗೆ ಮತ್ತು ಎಸಗಿದ ಎಲ್ಲ ಅಪರಾಧಗಳಿಗೆ ಸಂಪೂರ್ಣ ಹೊಣೆಗಾರರಾಗುವವರೆಗೆ ಸಂಸದರಾಗಿ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.ಅಧಿಕಾರ ದುರ್ಬಳಕೆ ಮಾಡಿಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ತಮ್ಮ ಹುದ್ದೆ ಮತ್ತು ಪ್ರಭಾವ ಬಳಸಿ ಈ ರೀತಿ ಮಾಡಲಾಗಿದೆ. ಈ ವಿಚಾರದಲ್ಲಿ ಪ್ರಧಾನಿಗಳ ಮೌನ ನೋಡಿ ನಮಗೆ ಆಶ್ಚರ್ಯವಾಗಿದೆ.
ದೇಶದಲ್ಲಿ ಹತ್ತು ವರ್ಷದಲ್ಲಿ ಈ ರೀತಿ ಹಲವು ಹೈ ಪ್ರೊಫೈಲ್ ಕೇಸ್‌ಗಳು ನಡೆದಿವೆ. ಎನ್‌ಡಿಎ, ಬಿಜೆಪಿ ಮತ್ತು ಇತರ ಮೈತ್ರಿ ಪಕ್ಷಗಳ ಸದಸ್ಯರ ವಿರುದ್ಧ ಅನೇಕ ಕೇಸ್‌ಗಳಿವೆ. ಈ ಪ್ರಕರಣಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ತೆಗೆದುಕೊಂಡ ಕ್ರಮ ದುರ್ಬಲವಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಹಲವು ಆರೋಪಗಳಿವೆ. ಸುಮಾರು 2,976 ವಿಡಿಯೋಗಳಿವೆ ಎನ್ನಲಾಗಿದೆ. ಇಷ್ಟೆಲ್ಲ ಆಗಿದ್ದರೂ ರಾಷ್ಟ್ರೀಯ ಮಹಿಳಾ ಆಯೋಗ ಮೌನವೇಕೆ? ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು ಹೇಗೆ? ಪ್ರಜ್ವಲ್ ರೇವಣ್ಣ ಬಗ್ಗೆ 2023ರಲ್ಲೇ ದೇವರಾಜೇಗೌಡ ಅವರು ದೂರು ಕೊಟ್ಟರೂ ಸಹ ಅವರಿಗೆ ಟಿಕೆಟ್ ಹೇಗೆ ಕೊಡಲಾಗಿದೆ? ಇಂತವರ ಪರ ಪ್ರಚಾರ ಮಾಡಿ ಪ್ರಧಾನಿ, ಗೃಹ ಸಚಿವರು ಏನು ಸಂದೇಶ ನೀಡಿದ್ದಾರೆ? ಕೂಡಲೇ ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ರೇವಣ್ಣರನ್ನ ಶಾಸಕ ಸ್ಥಾನದಿಂದ ಅನರ್ಹ ಮಾಡಲು ಶಿಾರಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
-ಅಧಿಕಾರ ದುರ್ಬಳಕೆ ಮಾಡಿಕೊಂಡು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಜ್ವಲ್ ರೇವಣ್ಣ ಮತ್ತು ಎಚ್‌ಡಿ ರೇವಣ್ಣ ಅವರನ್ನು ತಕ್ಷಣ ಬಂಧಿಸಬೇಕು.-ಈ ಪ್ರಕರಣದಲ್ಲಿ ಸ್ವತಃ ಪ್ರಧಾನಿ ಕ್ಷಮೆಯಾಚಿಸಬೇಕು ಮತ್ತು ಕಠಿಣ ಕ್ರಮವನ್ನು ಖಚಿತಪಡಿಸಬೇಕು.-ಎನ್‌ಸಿಡಬ್ಲ್ಯು ರಾಜ್ಯ ಡಿಜಿಪಿಗೆ ಪತ್ರ ಬರೆದು 3 ದಿನಗಳಲ್ಲಿ ವರದಿಯನ್ನು ಕೇಳಬೇಕಾಯಿತು. ಆದಾಗ್ಯೂ, ಈ ಕ್ರಮ ಮಾತ್ರ ಸಾಕಾಗುವುದಿಲ್ಲ.-ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ಶಿಫಾರಸು ಮಾಡಬೇಕು ಮತ್ತು ಅವರು ಭಾರತಕ್ಕೆ ಮರಳುವುದನ್ನು ಖಚಿತಪಡಿಸಬೇಕು.-ಲೈಂಗಿಕ ದೌರ್ಜನ್ಯ ಎದುರಿಸಿದ, ದೂರು ನೀಡಿದ, ದೂರು ನೀಡುವ ಸಾಧ್ಯತೆಯಿರುವ ಮತ್ತು ಪ್ರಕರಣದಲ್ಲಿ ಸಂಭಾವ್ಯ ಸಾಕ್ಷಿಗಳಾಗಿರುವ ಎಲ್ಲ ಮಹಿಳೆಯರಿಗೆ ಸಾಕಷ್ಟು ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು.-ಸಂತ್ರಸ್ಥೆಯರ ಸುರಕ್ಷತೆ ಮತ್ತು ಘನತೆ ರಕ್ಷಿಸಲು ಎಲ್ಲ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಡಿಜಿಟಲ್ ಸರ್ಚ್ ಇಂಜಿನ್‌ಗಳನ್ನು ಡಿ-ಇಂಡೆಕ್ಸ್‌ಗೆ ನಿರ್ದೇಶಿಸಿ ಮತ್ತು ವೀಡಿಯೊಗಳು ಮತ್ತು ಚಿತ್ರಗಳ ವಿತರಣೆಯನ್ನು ತಕ್ಷಣ ನಿಷೇಧಿಸಬೇಕು. ಜತೆಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಈ ವಿಷಯದ ಪ್ರಸಾರ ಮತ್ತು ವಿತರಣೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು.
ಸ್ತ್ರೀವಾದಿ, ಮಹಿಳಾ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಗುಂಪುಗಳ ಪರವಾಗಿ ಪ್ರೊ.ರಮಾ ಮೇಲ್ಕೋಟೆ, ಕವಿತಾ ಕುರುಗಂಟಿ, ಅರುಣಾ ರಾಯ್, ಹಸೀನಾ ಖಾನ್, ಮಧು ಭೂಷಣ್, ಚಯಾನಿಕಾ ಶಾ, ಲಲಿತಾ ರಾಮದಾಸ್, ಕವಿತಾ ಶ್ರೀವಾಸ್ತವ, ಮೌಮಿತಾ ಆಲಂ, ಗ್ರೇಸ್ ಬಾನು, ಮರಿಯಮ್ ಧಾವಳೆ, ಡಾ.ಸಿಲ್ವಿಯಾ ಕರ್ಪಗಂ, ವೀಣಾ ಶತ್ರುಘ್ನ, ಡಾ.ಜಯತಿ ಘೋಷ್, ಜರ್ಜುಮ್ ಜಿ. , ಡಾ. ಗೇಬ್ರಿಯಲ್ ಡೈಟ್ರಿಚ್, ಮೀನಾ ಕಂದಸಾಮಿ, ಮಾಧುರಿ, ಪ್ರೊ. ರೂಪರೇಖಾ ವರ್ಮಾ, ಕಲ್ಯಾಣಿ ಮೆನನ್ ಸೇನ್ ಮತ್ತಿತರರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + two =
Remember me
