ಬೆಂಗಳೂರು:ಕರೊನಾ ಸಂಕಷ್ಟದಲ್ಲೂ ಕೃಷಿ ವಲಯ ಚೇತರಿಕೆ ಕಾಣುತ್ತಿದೆ ಎಂಬ ಹೊತ್ತಲ್ಲೇ ರೈತರಿಗೆ ಮತ್ತೊಂದು ಇಕ್ಕಟ್ಟಿನ ಸನ್ನಿವೇಶ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯ ರೈತರ ಸಾಲಮನ್ನಾ- ಪ್ರೋತ್ಸಾಹಧನ ವಿಚಾರದಲ್ಲಿ ಗೋಲ್ಮಾಲ್ ಆಗಿದೆ ಎಂಬ ವಿಚಾರವಾಗಿ ಮಾಜಿ ಮುಖ್ಯಮಂತ್ರಿಗಳಿಬ್ಬರ ನಡುವೆ ಮಾತಿನ ಘರ್ಷಣೆ ನಡೆದಿರುವಂತೆಯೇ ಸಾಲಮನ್ನಾ ಮಾಹಿತಿ ‘ಮಿಸ್​ವ್ಯಾಚ್’ ಆಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಸಾಲಮನ್ನಾ ಲೆಕ್ಕಾಚಾರ ಗೊಂದಲ ಬಗೆಹರಿಯದ ಹೊರತು ರೈತರಿಗೆ ಹೊಸ ಸಾಲ ಪಡೆಯಲಾಗದ ಸ್ಥಿತಿ ನಿರ್ವಣವಾಗಿದೆ.
ಸಾಲಮನ್ನಾ ಲೆಕ್ಕಾಚಾರದ ಏರುಪೇರಿನ ಕುರಿತಂತೆ ಸರ್ಕಾರ ಆರ್ಥಿಕ ಇಲಾಖೆಯಿಂದ ಆಂತರಿಕ ಲೆಕ್ಕಪರಿಶೋಧನಾ ವರದಿ ಪಡೆದುಕೊಳ್ಳುತ್ತಿದ್ದು, ಪರಿಶೀಲನೆ ನಡೆಸಲಿದೆ. ನಂತರ ಸಂಬಂಧಿಸಿದ ಬ್ಯಾಂಕುಗಳಿಗೆ ಸೂಕ್ತ ನಿರ್ದೇಶನ ನೀಡಲು ಚಿಂತನೆ ನಡೆಸಿದೆ. ಸಾಲಮನ್ನಾದಲ್ಲಿ ಗೊಂದಲಗಳಾಗಬಾರದು, ಅನರ್ಹರಿಗೆ ಸಿಗಬಾರದೆಂದು ಮುನ್ನೆಚ್ಚರಿಕೆ ವಹಿಸಲಾಗಿತ್ತಾದರೂ, ಬ್ಯಾಂಕ್ ಮತ್ತು ಸರ್ಕಾರದ ನಡುವೆ ಮಾಹಿತಿ ವಿನಿಮಯದಲ್ಲಿ ವ್ಯತ್ಯಾಸವಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ ಸೇರಿ ಒಟ್ಟು 35 ಬ್ಯಾಂಕ್ ಮೂಲಕ ಸಾಲಮನ್ನಾ ವ್ಯವಸ್ಥೆ ಜಾರಿ ಮಾಡಲಾಗಿತ್ತು. ಸರ್ಕಾರ, ಬ್ಯಾಂಕ್, ಬ್ಯಾಂಕ್ ಮುಖ್ಯ ಕಚೇರಿ ಹಾಗೂ ಸರ್ಕಾರದ ವಿಶೇಷ ಘಟಕದ ನಡುವೆ ಮಾಹಿತಿ ವಿನಿಮಯ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂಬುದು ವಿಜಯವಾಣಿಗೆ ಲಭ್ಯವಾದ ದಾಖಲೆ ಪತ್ರಗಳಿಂದ ಖಚಿತವಾಗಿದೆ.ಇದನ್ನೂ ಓದಿ:‘ವಧು ಇನ್ನೂ ಚೆನ್ನಾಗಿದ್ದಾಳೆ’ ಎಂದ್ರು, ‘ಐ ಲವ್​ ಯೂ’ ಕೂಡ ಅಂದ್ರು ಬಿಲ್​ ಕ್ಲಿಂಟನ್​!
ಇದೀಗ 2018ರ ಸಾಲಮನ್ನಾ ಯೋಜನೆ ಪ್ರಕ್ರಿಯೆಯನ್ನು ಕೊನೆಗೊಳಿಸಲು ಸರ್ಕಾರ ಬಯಸಿದೆ. ಹೀಗಾಗಿ ಸ್ಪಷ್ಟತೆ ತಂದುಕೊಳ್ಳಲು ನಿರಂತರವಾಗಿ ಪ್ರಯತ್ನ ನಡೆಸಿದೆ. ಎರಡು ಮೂರು ಉನ್ನತ ಮಟ್ಟದ ಸಭೆ ನಡೆಸಿದರೂ ತುದಿ ತಲುಪಲು ಸಾಧ್ಯವಾಗಿಲ್ಲ.
ಸಾಲಮನ್ನಾ ಪ್ರಕ್ರಿಯೆ ಆರಂಭಿಸುವ ಮುನ್ನ ಸರ್ಕಾರ ಬ್ಯಾಂಕುಗಳಿಂದ ಅಂಕಿಅಂಶ ಸಂಗ್ರಹಿಸಿ ನೀಲಿನಕ್ಷೆ ಸಿದ್ಧಪಡಿಸಿಕೊಂಡಿತ್ತು. ಬಳಿಕ ಸಾಲ ಪಡೆಯಲು ಅರ್ಹರಾದವರ ಗ್ರೀನ್ ಲಿಸ್ಟ್ ಸಿದ್ಧಮಾಡಿಕೊಂಡು ಹಂತಹಂತವಾಗಿ ಬ್ಯಾಂಕುಗಳಿಗೆ ಹಣ ಬಿಡುಗಡೆ ಮಾಡಿದೆ. ಬ್ಯಾಂಕುಗಳಿಂದ ಸಾಲ ಮನ್ನಾ ಮಾಡಿ ಖಾತೆ ಮುಕ್ತಾಯಗೊಳಿಸಿದ ಮಾಹಿತಿಯನ್ನು ಸರ್ಕಾರ ಬಯಸಿತ್ತು. ಆ ಹಂತದಲ್ಲಿ ಸರಿಯಾದ ಮಾಹಿತಿ ತಲುಪದ ಕಾರಣ ಲೆಕ್ಕಾಚಾರ ಹೊಂದಾಣಿಕೆ ಆಗುತ್ತಿಲ್ಲ.
ಬೆಳೆ ದತ್ತಾಂಶ ಪೂರಕ ಮಾಹಿತಿ ಒದಗಿಸುವ ಸಂದರ್ಭದಲ್ಲಿ ಖಾತೆಗಳ ತಪ್ಪು ವರ್ಗೀಕರಣದಿಂದ ಆಗಿರುವ ಲೋಪ ಸರಿಪಡಿಸಿ ಅರ್ಹರಿಗೆ ಹಣ ಬಿಡುಗಡೆ ಮಾಡಬೇಕೆಂದು ಸರ್ಕಾರ ಸೂಚಿಸಿದೆ. ಈ ಮೂಲಕ ಪರೋಕ್ಷವಾಗಿ ಬ್ಯಾಂಕ್ ಹಂತದಲ್ಲಿ ಒಂದಷ್ಟು ವ್ಯತ್ಯಾಸವಾಗಿರುವುದು ದೃಢಪಟ್ಟಿದೆ. ಹಾಗೆಯೇ, ಮಾರ್ಗಸೂಚಿ ಪ್ರಕಾರ ಕೈಬಿಟ್ಟುಹೋದ ಅರ್ಹ ಖಾತೆಗಳ ಮಾಹಿತಿಯನ್ನು ತಡಮಾಡದೆ ಇಲಾಖೆ ಗಮನಕ್ಕೆ ತರಲೂ ತಿಳಿಸಲಾಗಿದೆ. ಬ್ಯಾಂಕ್, ಡಿಜಿಎಂ ಹಂತದಲ್ಲೇ ಇನ್ನೂ ಅರ್ಜಿಗಳು ಬಾಕಿ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ನಿಖರ ದತ್ತಾಂಶ ಸರ್ಕಾರ ತಿಳಿಸುವಲ್ಲಿ ವ್ಯತ್ಯಯವಾಗಿದ್ದು, ಇದನ್ನು ಆದ್ಯತೆ ಮೇಲೆ ಬಗೆಹರಿಸಲು ತಿಳಿಸಲಾಗಿದೆ. ಜತೆಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ತಹಸೀಲ್ದಾರ್ ಕೂಡ ಪರಸ್ಪರ ಸಹಕಾರದೊಂದಿಗೆ ಬಾಕಿ ಇರುವ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಸೂಚಿಸಲಾಗಿದೆ. ‘ಇಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಲು ಆಗಲ್ಲ. ಅಂಕಿಅಂಶ ವಿನಿಮಯ ಮಾಡಿಕೊಳ್ಳುವಾಗ ವ್ಯತ್ಯಾಸವಾಗಿದೆ. ಅದರನ್ನು ಸರಿಪಡಿಸಲು ಸೂಚಿಸಲಾಗಿದೆ. ಅರ್ಹರಿಗೆ ಯೋಜನೆ ಲಾಭವಾಗಬೇಕು ಎಂಬುದು ಸರ್ಕಾರದ ಆಶಯ. ಅದಕ್ಕೆ ತಕ್ಕಂತೆ ಮಾಹಿತಿ ಬಯಸಿದೆ’ ಎಂದು ಬ್ಯಾಂಕ್ ಹಿರಿಯ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
2018ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 9,62,260 ರೈತರಿಗೆ 7241.94 ಕೋಟಿ ರೂ. ಸಾಲ ಮನ್ನಾ ಘೋಷಿಸಲಾಗಿತ್ತು. ಇದರ ಮಾಹಿತಿ ವ್ಯತ್ಯಾಸವಾಗಿರುವುದೀಗ ಸರ್ಕಾರಕ್ಕೆ ತಲೆನೋವಾಗಿದೆ. ಈ ಬೆಳವಣಿಗೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಗೊಂದಲ ಸೃಷ್ಟಿಯಾಗಿದೆ. ಜತೆಗೆ ರೈತರೂ ಇದರ ಪರಿಣಾಮ ಎದುರಿಸುವಂತಾಗಿದೆ.
2018ರ ಸಾಲಮನ್ನಾ ಯೋಜನೆಯಲ್ಲಿ ಇನ್ನೂ ಲಕ್ಷಕ್ಕೂ ಹೆಚ್ಚು ಅರ್ಜಿ ಬಾಕಿ ಉಳಿದಿವೆ. ಬ್ಯಾಂಕ್ ಹಂತದಲ್ಲೇ 9610 ಉಳಿದಿವೆ. ಡಿಜಿಎಂ ಹಂತದಲ್ಲಿ 1808 ಅರ್ಜಿಗಳಿದ್ದರೆ, ಉಳಿದ ಹಂತಗಳಲ್ಲಿ 106595 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಸರ್ಕಾರದ ನಿಯಮ, ಷರತ್ತುಗಳ ಕಾರಣದಿಂದ ಈ ಅರ್ಜಿಗಳನ್ನು ಒಪ್ಪಿಕೊಳ್ಳಲು ಬ್ಯಾಂಕುಗಳಿಗೆ ಸಾಧ್ಯವಾಗಿಲ್ಲ.
‘ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಶತಮಾನದ ಮಹಾ ಸುಳ್ಳುಗಾರ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
