| ಗಿರೀಶ್ ಗರಗ ಬೆಂಗಳೂರು
ದೇಶದಲ್ಲಿ ಉತ್ತಮ ವಾತಾವರಣ ನಗರ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ, ಮೋಟಾರು ವಾಹನಗಳ ಹಾವಳಿ ಹೆಚ್ಚಾಗಿದೆ. ಅದರ ಜತೆಗೆ ಸಂಚಾರದಟ್ಟಣೆ, ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ನೀಡಲು 2.30 ಲಕ್ಷ ಕೋಟಿ ರೂ. ಅವಶ್ಯಕತೆಯಿದೆ.
ಮುಂದಿನ 20 ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 3 ಕೋಟಿಗೆ ತಲುಪಲಿದೆ. ಅದೇ ರೀತಿ ವಾಹನಗಳ ಸಂಖ್ಯೆ 2 ಕೋಟಿಯಾಗಲಿದೆ. ಆದ್ದರಿಂದ ಈಗಿನಿಂದಲೇ ಸಂಚಾರದಟ್ಟಣೆ ನಿಯಂತ್ರಣ, ಮೋಟಾರು ವಾಹನಗಳ ಬಳಕೆ ತಗ್ಗಿಸುವ ಸಲುವಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಂತೆ ಬಿಎಂಆರ್​ಸಿಎಲ್ ಮತ್ತು ನಗರ ಭೂಸಾರಿಗೆ ನಿರ್ದೇಶನಾಲಯ ಕಳೆದ ಕೆಲತಿಂಗಳ ಹಿಂದೆ ರೂಪಿಸಿದ್ದ ಕರಡು ಸಮಗ್ರ ಚಲನಾ ಯೋಜನೆಯನ್ನು (ಕಾಂಪ್ರಹೆನ್ಸಿವ್ ಮೊಬಿಲಿಟಿ ಪ್ಲಾನ್) ಅಂತಿಮಗೊಳಿಸಿದ್ದು, ಕರಡಿನಲ್ಲಿನ ಅಂಶಗಳಲ್ಲಿ ಗುರುತರ ಬದಲಾವಣೆ ತರದೆ, ಅಂತಿಮ ವರದಿ ಸಿದ್ಧಪಡಿಸಲಾಗಿದೆ.
ಒಟ್ಟು ಮೂರು ಹಂತದಲ್ಲಿ ಸಮೂಹ ಸಾರಿಗೆಗೆ ಒತ್ತು ನೀಡುವುದು, ಮೋಟಾರು ರಹಿತ ಸಾರಿಗೆ ವ್ಯವಸ್ಥೆ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದ್ದು, ಆ ಯೋಜನೆಗಳಿಗಾಗಿ 2.30 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
80 ಯೋಜನೆಗಳು:ಸಮಗ್ರ ಚಲನಾ ಯೋಜನೆ ವರದಿಯಲ್ಲಿರುವಂತೆ 3 ಹಂತದಲ್ಲಿ ವಿವಿಧ ಕಾಮಗಾರಿ ಅನುಷ್ಠಾನಕ್ಕೆ ಶಿಫಾರಸು ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಉಪನಗರ ರೈಲು, ಮೆಟ್ರೋ ರೈಲು ಯೋಜನೆಗಳು, ಟ್ರಾನ್ಸಿಸ್ಟ್ ಓರಿಯೆಂಟೆಡ್ ಡೆವೆಲಪ್​ವೆುಂಟ್, ಇಂಟರ್​ವಾಡೆಲ್ ಟ್ರಾನ್ಸಿಸ್ಟ್ ಹಬ್ ಸೇರಿ ಒಟ್ಟು 80 ಯೋಜನೆಗಳನ್ನು ರೂಪಿಸಲಾಗಿದೆ.
ಎಂಟು ರಸ್ತೆಗಳಲ್ಲಿ ವಾಹನ ಸಂಚಾರ ಬಂದ್!
ಕರಡು ವರದಿಯಲ್ಲಿನ ಬಹುತೇಕ ಅಂಶಗಳನ್ನು ಅಂತಿಮ ವರದಿಯಲ್ಲಿಟ್ಟು ಕೊಳ್ಳಲಾಗಿದೆ. ಅದರ ನಡುವೆಯೂ ಚಿಕ್ಕಪುಟ್ಟ ಬದಲಾವಣೆಯನ್ನು ತರಲಾಗಿದೆ. ಅದರಂತೆ ಈ ಹಿಂದೆ 174 ಕಿ.ಮೀ. ಸೈಕಲ್ ಪಥದ ಪ್ರಸ್ತಾಪ ಮಾಡಲಾಗಿತ್ತು. ಆದರೀಗ, ಅದನ್ನು 600 ಕಿ.ಮೀ.ಗೆ ಹೆಚ್ಚಿಸಲಾಗಿದೆ. ಹಾಗೆಯೇ, 8 ರಸ್ತೆಗಳಲ್ಲಿ ಶನಿವಾರ ಮತ್ತು ಭಾನುವಾರ ಸೇರಿ ರಜಾ ದಿನಗಳಂದು ಮೋಟಾರು ವಾಹನ ಸಂಚಾರ ನಿಷೇಧದ ಕುರಿತು ಉಲ್ಲೇಖಿಸಲಾಗಿದೆ. ಈ ರೀತಿಯ ಸಣ್ಣಪುಟ್ಟ ಬದಲಾವಣೆ ಮಾಡಿ ವರದಿಯನ್ನು ಅಂತಿಮಗೊಳಿಸಲಾಗಿದೆ.
ಹಲವು ಶಿಫಾರಸುಗಳು
ಯೋಜನೆಗಳ ಅನುಷ್ಠಾನದ ಜತೆಗೆ ನಗರ ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸಲುವಾಗಿ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ಒಟ್ಟು 13 ಹಂತದಲ್ಲಿ ವಿವಿಧ ಶಿಫಾರಸುಗಳನ್ನು ಮಾಡಲಾಗಿದೆ. ಅದರಲ್ಲಿ ಸಮೂಹ ಸಾರಿಗೆಗೆ ಒತ್ತು ನೀಡುವುದು ಮತ್ತು ಮೋಟಾರುರಹಿತ ಸಾರಿಗೆ ವ್ಯವಸ್ಥೆಗೆ ಮಹತ್ವ ನೀಡಲಾಗಿದೆ. ಬೈಸಿಕಲ್ ಬಳಕೆ, ಪಾದಚಾರಿ ಮಾರ್ಗ, ಎಲೆಕ್ಟ್ರಿಕ್ ವಾಹನಗಳ ಬಳಕೆ ಸೇರಿ ಇತರ ವಿಷಯಗಳ ಬಗ್ಗೆ ತಿಳಿಸಲಾಗಿದೆ.
ಪ್ರಮುಖ ಶಿಫಾರಸುಗಳು
ಪ್ರಮುಖ ಯೋಜನೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
