ಬೆಂಗಳೂರು:ಫಾಸ್ಟ್​ಟ್ಯಾಗ್​  ಕಡ್ಡಾಯ ನಿಯಮ ಜಾರಿಯಾಗಿ ಕೆಲ ದಿನಗಳಾಗಿರುವಂತೆಯೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್​ಪ್ಲಾಜಾ ಪ್ರದೇಶದ ನಿವಾಸಿಗಳಿಗೆ ರಿಯಾಯಿತಿ ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ಟೋಲ್​ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯಲ್ಲಿನ ನಿವಾಸಿಗಳು ಫಾಸ್ಟ್​ಟ್ಯಾಗ್​  ಮೂಲಕ ಟೋಲ್​ಶುಲ್ಕ ಪಾವತಿಸಲು ಮಾಸಿಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಹಲವು ರಿಯಾಯಿತಿ ಸೇವೆಗಳನ್ನೂ ಪ್ರಾಧಿಕಾರ ನೀಡಿದೆ.
ಈ ಹಿಂದೆ ಯಾವುದೇ ವಾಹನ 1 ಟೋಲ್​ನಲ್ಲಿ ಹೋಗಿ 24 ಗಂಟೆಯೊಳಗೆ ಮತ್ತೆ ಅದೇ ಟೋಲ್​ಗೆ ವಾಪಸ್ ಬಂದರೆ ರಿಯಾಯಿತಿ ಸಿಗುತ್ತಿರಲಿಲ್ಲ ಎಂಬ ದೂರಿತ್ತು. ಈ ಕೊರತೆ ಸರಿಪಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಂದೇ ಟೋಲ್​ನಲ್ಲಿ 24 ಗಂಟೆಯೊಳಗೆ ಹೋಗಿ ವಾಪಸ್ ಬರುವವರಿಗೆ ತನ್ನಿಂದ ತಾನೇ ರಿಯಾಯಿತಿ ದೊರೆಯುವಂತಹ ವ್ಯವಸ್ಥೆ ಮಾಡಿದೆ.
20 ಕಿಲೋಮೀಟರ್​ಗೆ 300 ರೂಪಾಯಿ
ಟೋಲ್​ಪ್ಲಾಜಾ ಸುತ್ತಲಿನ ಗ್ರಾಮಗಳ ವಾಹನಗಳಿಗೆ ರಿಯಾಯಿತಿ ನೀಡುತ್ತಿಲ್ಲ ಎಂಬ ದೂರಿಗೂ ಪರಿಹಾರ ಸಿಕ್ಕಿದೆ. ಟೋಲ್​ಪ್ಲಾಜಾದ 20 ಕಿ.ಮೀ. ವ್ಯಾಪ್ತಿಯ ನಿವಾಸಿಗಳು 300 ರೂ. ಪಾವತಿಸಿ ಮಾಸಿಕ ಪಾಸ್ ಪಡೆಯಬಹುದಾಗಿದೆ. ಅದೇ ರೀತಿ 10 ಕಿ.ಮೀ. ವ್ಯಾಪ್ತಿಯೊಳಗಿದ್ದರೆ 150 ರೂಪಾಯಿಗೆ ಪಾಸ್ ಸಿಗಲಿದೆ. ಮಾಸಿಕ ಪಾಸ್ ಪಡೆಯುವವರು ಎಷ್ಟು ಬಾರಿ ಬೇಕಾದರೂ ಟೋಲ್​ಪ್ಲಾಜಾಗಳಲ್ಲಿ ಓಡಾಡಬಹುದಾಗಿದೆ.
ಫಾಸ್ಟ್​ಟ್ಯಾಗ್​ ಪಥದಲ್ಲಿ ಸಂಚರಿಸುವುದು ಕಡ್ಡಾಯವಾಗಿರುವುದರಿಂದ ಮೊದಲು ಫಾಸ್ಟ್​ಟ್ಯಾಗ್​ ಐಡಿಯಿಂದಲೇ ಶುಲ್ಕ ಕಡಿತವಾಗುತ್ತದೆ. ನಂತರ ಕ್ಯಾಷ್​ಬ್ಯಾಕ್ ರೂಪದಲ್ಲಿ ವಾಹನಗಳ ಫಾಸ್ಟಾ್ಯಗ್ ಅಕೌಂಟ್​ಗೆ ಹಣ ಮರುಪಾವತಿಯಾಗುತ್ತದೆ.
ಆನ್​ಲೈನ್ ನೋಂದಣಿ
ಮಾಸಿಕ ಪಾಸ್ ಪಡೆಯುವವರು ಟೋಲ್​ಪ್ಲಾಜಾದಿಂದ 20 ಅಥವಾ 10 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕುರಿತ ದಾಖಲೆಗಳನ್ನು ಸಲ್ಲಿಸಿ ಫಾಸ್ಟ್​ಟ್ಯಾಗ್​  ಐಡಿ ಪಡೆಯಬಹುದಾಗಿದೆ. ಅದಾಗದಿದ್ದರೆ ಈಗಾಗಲೆ ಫಾಸ್ಟ್​ಟ್ಯಾಗ್​  ಐಡಿ (ಸ್ಟಿಕ್ಕರ್) ಪಡೆದಿದ್ದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೆಬ್​ಸೈಟ್​ಗೆ ತೆರಳಿ ಮಾಸಿಕ ಪಾಸ್ ಕುರಿತಂತೆ ಐಡಿ ಮತ್ತು ವಾಹನದ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಳ್ಳಬಹುದು.
ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್​ಟ್ಯಾಗ್​ಗೆ ಸಂಬಂಧಿಸಿದಂತೆ ನಿಗದಿ ಮಾಡಿರುವ ಟೋಲ್​ಫ್ರೀ ಸಂಖ್ಯೆ 1800 102 6480 ಗೆ ಕರೆ ಮಾಡಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಏನಾದರೂ ಸಮಸ್ಯೆಗಳಿದ್ದರೆ ಟೋಲ್​ಫ್ರೀ ಸಂಖ್ಯೆ 1033ಗೆ ಕರೆ ಮಾಡಿ ದೂರು ದಾಖಲಿಸಬಹುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen + 3 =
Remember me
