ಬೆಂಗಳೂರು:ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆಹಾರ ಗುಣಮಟ್ಟ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೆಲ್​, ರೆಸ್ಟೋರೆಂಟ್​, ಲುಘು ಉಪಹಾರ ಕೇಂದ್ರಗಳಲ್ಲಿ ತಪಾಸಣೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆದೇಶ ಹೊರಡಿಸಿದೆ.ಹೋಟೆಲ್​, ರೆಸ್ಟೋರೆಂಟ್​, ಲುಘು ಉಪಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಕಲುಷಿತ, ವಿಷಹಾರ ಸೇವನೆ, ಕಲಬೆರಕೆ ಮತ್ತು ಅವಧಿ ಮೀರಿದ ಪದಾರ್ಥಗಳು ಕಂಡುಬರುತ್ತಿದೆ. ಹೀಗಾಗಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಲ್ಲಿ ಸೂಚಿಸಿರುವ ಮಾರ್ಗಸೂಚಿ ಅನ್ವಯ ತಪಾಸಣೆ ನಡೆಸಬೇಕು. ಕಲಬೆರಕೆ,ಅವಧಿ ಮೀರಿದ ಪದಾರ್ಥಗಳು, ಸ್ವಚ್ಛತೆ ಇಲ್ಲದಿರುವುದು ಕಂಡುಬಂದರೆ ಹೋಟೆಲ್​, ರೆಸ್ಟೋರೆಂಟ್​, ಲುಘು ಉಪಹಾರ ಕೇಂದ್ರಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಅಂಕಿತಾಧಿಕಾರಿಗಳಿಗೆ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ಅಂದಾಜು 5 ಲಕ್ಷ ಆಹಾರ ಉದ್ದಿಮೆಗಳಿವೆ. 15 ಲಕ್ಷ ಆಹಾರ ಉದ್ದಿಮೆಗಳು ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿವೆ.ಆಹಾರ ಕಲಬೆರಕೆ ಜಾಗೃತಿ ಮೂಡಿಸಲು “ಪುಡ್​ ಸೇಫ್ಟ್​​​ ಆನ್​ ವೀಲ್ಸ್​, “ಇಟ್​ ಟೆಟ್​ ಇಂಡಿಯಾ’, “ಇಟ್​ ಟೆಟ್​ ಕ್ಯಾಂಪಸ್​’, “ಕ್ಲೀನ್​ ಸ್ಟ್ರೀಟ್​ ಪುಡ್​ ಹಬ್​’ ಹಾಗೂ “ಪುಡ್​ ಪಾರ್ಟಿಫಿಕೇಷನ್​’ ಎಂಬ ಕಾರ್ಯಕ್ರಮಗಳನ್ನ ಇಲಾಖೆ ಜಾರಿಗೆ ತಂದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2011ರ ಆ.5ರಿಂದ ಜಾರಿಗೆ ಬಂದಿದೆ. ಕಾಯ್ದೆ ಅನ್ವಯ ಮಾರಾಟಗಾರರು ನಿಯಮವನ್ನು ಪಾಲಿಸಬೇಕು. ಆಹಾರ ಪದಾರ್ಥಗಳಿಗೆ ವೈಜ್ಞಾನಿಕ ಗುಣಮಟ್ಟ ನಿಗದಿ, ಆಹಾರ ತಯಾರಿಕೆ, ಸಂಗ್ರಹ, ವಿತರಣೆ, ಸಗಟು, ಚಿಲ್ಲರೆ ಮಾರಾಟ, ಆಮದು ಸೇರಿ ವಿವಿಧ ಹಂತಗಳಲ್ಲಿ ಉತ್ತಮ ಗುಣಮಟ್ಟ ಆಹಾರ ದೊರೆಯುವಂತೆ ಮಾಡಬೇಕು. ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟ ಹಂತಗಳಲ್ಲಿ ಸುರಕ್ಷತೆ ಕಾಪಾಡಬೇಕು.ಮಾನವ ಸೇವಿಸುವ ಆಹಾರ ನೈಸರ್ಗಿಕವಾಗಿರಬೇಕು. ಆದರೆ, ವರ್ಷದಿಂದ ವರ್ಷಕ್ಕೆ ಆಹಾರದಲ್ಲಿ ಕಲಬೆರಕೆ, ಗುಣಮಟ್ಟ ಕುಸಿತವಾಗದಿರುವುದು ಸಂಬಂಧ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಹಾಗಾಗಿ, ಇದನ್ನು ತಡೆಗೆ ಇಲಾಖೆ ಮುಂದಾಗಿದೆ.
ರಾಜ್ಯದ ಜನರ ಕೈಗೆ ಚೊಂಬು ಕೊಟ್ಟ ಸಿಎಂ ಸಿದ್ದರಾಮಯ್ಯ
ಈಟ್​ ರೈಟ್​ ಇಂಡಿಯಾ:ಆಹಾರ ಸುರಕ್ಷತೆ ಮತ್ತು ಮಾನದಂಡ ಕಾಯ್ದೆಯಡಿ ಭಾರತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್​​​​ಎಸ್​ಎಸ್​ಎಐ) ದೇಶದ ಜನರಿಗೆ ಗುಣಮಟ್ಟದ ಮತ್ತು ಸುರತ, ಶುಚಿಯಾದ ಆಹಾರ ಸ್ವಾಸ್ಥ್ಯ ರಕ್ಷಣೆ ನೀಡುವ ಸಲುವಾಗಿ “ಈಟ್​ ರೈಟ್​ ಇಂಡಿಯಾ’ ಯೋಜನೆ ಜಾರಿಗೆ ತಂದಿದೆ. ಕೇಂದ್ರದ ಸಹಯೋಗದಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ “ಸಾಹಿ ಭೋಜನ್​ ಬೆಹ್ತಾರ್​ ಜೀವನ್​’ಧ್ಯೇಯವಾಕ್ಯದಡಿ ಈ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿದೆ. ಯೋಜನೆಯಡಿ ಆಹಾರದಲ್ಲಿ ಉಪು$್ಪ, ಸಕ್ಕರೆ, ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು, ಹೆಚ್ಚು ಶುದ್ಧ ಆಹಾರಗಳು ಲಭ್ಯವಾಗುವಂತೆ ಸೇರಿ ಇತರೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಪ್ರಮಾಣ ಪತ್ರ ಪಡೆಯಿರಿ:ಶಾಲೆಗಳು, ಹೋಟೆಲ್​ಗಳು, ಆಸ್ಪತ್ರೆಗಳು ಹಾಗೂ ಕಾರಾಗೃಹ ಸೇರಿ ಇತರರು ಇಟ್​ ರೈಟ್​ ಇಂಡಿಯಾ ಸರ್ಟೀಫಿಕೇಟ್​ ಪಡೆಯಬಹುದು. ದೇಶಾದ್ಯಂತ ಆಹಾರ ಕ್ಯಾಂಪಸ್​ಗಳಲ್ಲಿ ಸುರತ, ಆರೋಗ್ಯಕರ ಮತ್ತು ಸುಸ್ಥಿರ ಆಹಾರ ಬಗ್ಗೆ ಉತ್ತೇಜನ, ಆಹಾರ ತ್ಯಾಜ್ಯ ನಿರ್ವಹಣೆ, ಆರೋಗ್ಯಕರ ವಾತಾವರಣ ನಿರ್ಮಾಣ, ಸ್ಥಳಿಯ ಹಾಗೂ ಆಯಾ ಕಾಲಮಾನಕ್ಕೆ ತಕ್ಕಂತೆ ಆಹಾರ ಸೇವನೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವಿಧಾನ ಆಧಾರದ ಮೇಲೆ ಅಂಥ ಸಂಸ್ಥೆಗಳಿಗೆ ಎ್​ಎಸ್​ಎಸ್​ಎಐ ಒಂದರಿಂದ ಫೈವ್​​ ಸ್ಟಾರ್​ ರೇಟಿಂಗ್​ ಒಳಗೊಂಡ ಸರ್ಟೀಫಿಕೇಟ್​ ಸಿಗಲಿದೆ.ಇಲಾಖೆ ಅಧಿಕಾರಿಗಳು ಆಹಾರ ಕ್ಯಾಂಪಸ್​ಗಳನ್ನು ಗುರುತಿಸಿ ಕ್ಯಾಂಪಸ್​ ಮುಖ್ಯಸ್ಥರ ಜತೆ ಸಭೆ ನಡೆಸಿ ಗುಣಮಟ್ಟದ ಮತ್ತು ಶುಚಿಯಾದ ಆಹಾರ ತಯಾರಿಕೆ ಆಹಾರ ತ್ಯಾಜ್ಯ ನಿರ್ವಹಣೆ, ಆರೋಗ್ಯಕರ ವಾತಾವರಣ ನಿರ್ಮಾಣ, ಸ್ಥಳಿಯ ಹಾಗೂ ಆಯಾ ಕಾಲಮಾನಕ್ಕೆ ತಕ್ಕಂತೆ ಆಹಾರ ತಯಾರಿಕೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಇವುಗಳ ಆಧಾರದಲ್ಲಿ ಅಂಥ ಕ್ಯಾಂಪಸ್​ಗೆ ಎಫ್​​​​ಎಸ್​ಎಸ್​ಎಐ ಸರ್ಟೀಫೀಕೇಟ್​ ಸಿಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fourteen =
Remember me
