ಬೆಂಗಳೂರು:ಒಂದಿಲ್ಲೊಂದು ಕಾರಣವೊಡ್ಡಿ ಕೇಂದ್ರದ‌ ಜತೆಗೆ ರಾಜ್ಯ ಸರ್ಕಾರ ಸದಾ ಸಂಘರ್ಷದ ಧೋರಣೆ ಪ್ರದರ್ಶಿಸುತ್ತಿದೆ. ಅದೇ ಹಾದಿಯಲ್ಲಿ ಮುಂದುವರಿದು ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.
ಇದನ್ನೂ ಓದಿ:ರೋಟರಿ ಸೇರ್ಪಡೆಯಾಗುವವರ ಸಂಖ್ಯೆ ಭಾರತದಲ್ಲಿಯೇ ಅಧಿಕ: ದೀಪಕ್ ಪುರೋಹಿತ್
ಇಂದು ಬೆಂಗಳೂರಿನ ವಸಂತನಗರ ವಾರ್ಡ್​ನ ಬೂತ್​ನಲ್ಲಿ ರಾಷ್ಟ್ರ ಬಾವುಟ ಹಾರಿಸಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳ ಮೂಲಕ ಬಡವರಿಗೆ ಕಡಿಮೆ ದರದಲ್ಲಿ ಔಷಧಿ, ಮಾತ್ರೆ ಸಿಗುತ್ತವೆ. ಸಾಕಷ್ಟು ಜನರು ಪ್ರಯೋಜನ ಪಡೆದು, ಪ್ರಧಾನಿ ನರೇಂದ್ರ ಮೋದಿಯವರ ಈ ಉಪಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಏನೋ ಒಂದು ಕಾರಣ ಹೇಳಿ ಜನೌಷಧಿ ಕೇಂದ್ರಗಳನ್ನು ಮುಚ್ಚುವುದರಿಂದ ಬಡವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರವೇ ಹೊಣೆ:ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗುವುದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು. ಕಳೆದ ಬಾರಿ ಬರದಿಂದ ನಷ್ಟ ಅನುಭವಿಸಿದ ರೈತರು, ಈ ಬಾರಿ ಮಾನವ ನಿರ್ಮಿತ ತಪ್ಪಿನಿಂದ ನಾಲ್ಕು ಜಿಲ್ಲೆಗಳ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಬೆಳೆಯೂ ಸಿಗುವುದಿಲ್ಲವೆಂದು ಕಂಗಾಲಾಗಿದ್ದಾರೆ. ಪ್ರತಿ ಹೆಕ್ಟೇರ್​ಗೆ 50 ಸಾವಿರ ರೂ. ಪರಿಹಾರ ಘೋಷಿಸಿ ಸರ್ಕಾರವೇ ಈ ನಷ್ಟ ತುಂಬಿ ಕೊಡಬೇಕು ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಇದನ್ನೂ ಓದಿ:ವಿಜಯಪುರವನ್ನೇ ನೋಡಲ್ ಜಿಲ್ಲೆಯಾಗಿ ಆಯ್ದುಕೊಂಡಿದ್ದೇಕೆ? ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಯೋಜನೆಗಳೇನು ಗೊತ್ತಾ?
ತುಂಗಭದ್ರಾ ಯೋಜನೆಯ ಕೇಂದ್ರ ವಲಯಕ್ಕೆ ಒಂದು ವರ್ಷದಿಂದ ಮುಖ್ಯ ಇಂಜಿನಿಯರ್ ನೇಮಕವಾಗಿಲ್ಲ. ಸರಿಯಾಗಿ ನಿರ್ವಹಣೆಯಾಗಿಲ್ಲ. ಈ ಲೋಪ ಸರಿಪಡಿಸಿಕೊಳ್ಳಲು ಸಲಹೆ ನೀಡಿದರೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎನ್ನುತ್ತಿದ್ದಾರೆ. ತುಂಗಭದ್ರಾ ಮಂಡಳಿ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಈ ಅವಘಡಕ್ಕೆ ಕೇಂದ್ರವೇ ಹೊಣೆ ಎಂದು ಪ್ರತ್ಯಾರೋಪ ಮಾಡುತ್ತಿದ್ದಾರೆ. ಅಣೆಕಟ್ಟೆಯ 17ರಿಂದ 33 ಕ್ರಸ್ಟ್ ಗೇಟ್​ಗಳ ನಿರ್ವಹಣೆ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರ ಅಧೀನದ ತುಂಗಭದ್ರಾ ಮಂಡಳಿ ಸುರಕ್ಷತೆಗೆ ಕೈಗೊಳ್ಳಬೇಕಾದ ಸುರಕ್ಷತೆ ಬಗ್ಗೆ ಮಾಡಿದ ಶಿಫಾರಸುಗಳನ್ನು ನಿರ್ಲಕ್ಷಿಸಿದವರು ಯಾರು? ಎಂದು ಮರು ಪ್ರಶ್ನಿಸಿದರು.
ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಬಿಟ್ಟು‌ ಇಲಾಖೆ ಬಗ್ಗೆ ಆಸಕ್ತಿಯೇ ಇಲ್ಲ. ಒಂದೂವರೆ ವರ್ಷ ಕಳೆದರೂ ಇಲಾಖೆ ಪ್ರಗತಿ ಪರಿಶೀಲನೆಯೇ ಮಾಡಿಲ್ಲ. ಬೇರೆ ಸಂಪನ್ಮೂಲದ ಬಗ್ಗೆ ಹೆಚ್ಚಿನ ಕಾಳಜಿಯಿದೆ. ಜಲ ಅತ್ಯಮೂಲ್ಯ ಸಂಪನ್ಮೂಲ ಎನ್ನುವುದನ್ನು ಕಡಗಣಿಸಿದ್ದಾರೆ. ಕ್ರಸ್ಟ್ ಗೇಟ್ ಕಿತ್ತು ಹೋಗಿದ್ದರಿಂದ 65 ಟಿಎಂಸಿ ಅಡಿ ನೀರು ವ್ಯರ್ಥವಾಗುತ್ತಿದೆ. ಭರಪೂರ ಮಳೆಯಿಂದ ಸಂತಸದಲ್ಲಿದ್ದ ರೈತರು ಈಗ ಚಿಂತೆಗೀಡಾಗಿದ್ದಾರೆ. ರಾಜ್ಯದ ಶೇ. 40ರಷ್ಟು ಭತ್ತ ಉತ್ಪಾದನೆ ಇದೇ ಅಣೆಕಟ್ಟು ಪ್ರದೇಶದಿಂದ ಆಗುತ್ತಿದ್ದು, ಅದೀಗ ಕೈಬಿಟ್ಟು ಹೋಗುತ್ತಿದೆ ಎಂದು ವಿಜಯೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ

ನಿವೃತ್ತಿ ಹೊಂದಿದ ಕ್ರಿಕೆಟ್ ಆಟಗಾರರಿಗೂ ಬರಲಿದೆ ಐಪಿಎಲ್​! ಯಾವಾಗ? ಹೀಗಿದೆ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − four =
Remember me
