|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲು ಪ್ರಮಾಣ ಹೆಚ್ಚಿಸಿದ ಬೆನ್ನ ಹಿಂದೆಯೇ ರೋಸ್ಟರ್ ಬಿಂದು ವ್ಯತ್ಯಾಸದ ವಿಚಾರ ಮುನ್ನೆಲೆ ಬಂದಿದ್ದು, ಸರ್ಕಾರದ ಮೇಲೆ ಒತ್ತಡ ಬೀಳಲು ಆರಂಭವಾಗಿದೆ. ರಾಜ್ಯದ 36 ಇಲಾಖೆಗಳಲ್ಲಿ ರೋಸ್ಟರ್ ಬಿಂದು ವ್ಯತ್ಯಾಸವಾಗಿದ್ದು, ಕೆಲವು ಇಲಾಖೆಗಳಲ್ಲಿ ಮೀಸಲು ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಇದನ್ನು ಸರಿಪಡಿಸಿ ಸರ್ಕಾರದ ಹಿಂದಿನ ಆದೇಶ, ಕೋರ್ಟ್ ಸೂಚನೆ ಪ್ರಕಾರ ಮೀಸಲು ಪ್ರಮಾಣ ವೈಜ್ಞಾನಿಕವಾಗಿ ನಿಗದಿ ಮಾಡಬೇಕೆಂಬ ಬೇಡಿಕೆ ಸರ್ಕಾರಕ್ಕೆ ಮುಂದೆ ಸಲ್ಲಿಕೆಯಾಗಿದೆ. ಇನ್ನೊಂದೆಡೆ ಎಸ್ಸಿ, ಎಸ್ಟಿ ನೌಕರರ ಸಂಘ ಯಾವ ರೀತಿ ಮೀಸಲು ಪ್ರಮಾಣ ಪರಿಗಣಿಸಬೇಕೆಂದು ಬೇಡಿಕೆ ಪಟ್ಟಿ ಮುಂದಿಟ್ಟಿದೆ.
ಕರ್ನಾಟಕ ಇಂಜಿನಿಯರುಗಳ ಸಂಘದ ಪ್ರತಿನಿಧಿಗಳು ಮುಖ್ಯಕಾರ್ಯದರ್ಶಿಯವರನ್ನು ಭೇಟಿ ಮಾಡಿ, ನ್ಯಾಯೋಚಿತವಾಗಿ ರೋಸ್ಟರ್ ಬಿಂದು ಅಳವಡಿಸಬೇಕೆಂದು ಒತ್ತಡ ತಂದಿದ್ದಾರೆ. ಸಂವಿಧಾನದಡಿಯ ಅವಕಾಶದಂತೆ ಸಾಮಾನ್ಯ ವರ್ಗಕ್ಕೆ ಶೇ.50, ಹಿಂದುಳಿದ ವರ್ಗಕ್ಕೆ (ಪ್ರವರ್ಗ 1, 2ಬಿ, 3ಎ, 3ಬಿ ಒಳಗೊಂಡು ಒಟ್ಟು) ಶೇ.32, ಪರಿಶಿಷ್ಟ ಜಾತಿ ವರ್ಗಕ್ಕೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3ರಂತೆ ನೇರ ನೇಮಕದಲ್ಲಿ ಮೀಸಲು ಒದಗಿಸಿ ಸರ್ಕಾರ 1996ರ ಜೂನ್ 20ರಂದು ಆದೇಶ ಹೊರಡಿಸಿತ್ತು. ಆ ಪ್ರಕಾರ 100 ಬಿಂದುಗಳಿಗೆ ರೋಸ್ಟರ್ ಅಳವಡಿಸಿ ನಿರ್ದೇಶನ ನೀಡಲಾಗಿತ್ತು.
ಇದೀಗ ಸರ್ಕಾರ ಶೇ.17 ಪರಿಶಿಷ್ಟ ಜಾತಿಗೆ, ಶೇ.7 ಪರಿಶಿಷ್ಟ ಪಂಗಡಕ್ಕೆ ಮೀಸಲು ಹೆಚ್ಚಿಸಿದೆ. ಇದಾದ ಬಳಿಕ ರೋಸ್ಟರ್ ಬಿಂದುಗಳನ್ನು ಸರ್ಕಾರ ಪರಿಷ್ಕರಿಸಬೇಕಾಗುತ್ತದೆ. ಪ್ರಸ್ತುತ ಹೊಸ ಮೀಸಲಾತಿ ಜಾರಿಗೆ ಬರುತ್ತಿರುವುದರಿಂದ ರೋಸ್ಟರ್ ಬಿಂದುಗುರುತಿಸುವ ಪ್ರಕ್ರಿಯೆಯ ಭಾಗವಾಗಿ 2019ರಲ್ಲಿ ಅನುಸರಿಸಲಾಗಿರುವ ವೈಜ್ಞಾನಿಕ ಕ್ರಮ ಅನುಸರಿಸುವಂತೆ ಇಂಜಿನಿಯರುಗಳ ಸಂಘ ಒತ್ತಾಯಿಸಿದೆ. ಸಂಘದ ಅಧ್ಯಕ್ಷ ಎಸ್.ಡಿ.ತಿಮ್ಮೇಗೌಡ, ಡಿ.ಎಸ್.ದೇವರಾಜು ಮುಖ್ಯಕಾರ್ಯದರ್ಶಿಯವರನ್ನು ಕಂಡು ತಮ್ಮ ವಾದವನ್ನು ಮುಂದಿಟ್ಟು, ಪ್ರಸ್ತುತ ಆಗಿರುವ ಏರುಪೇರುಗಳ ಬಗ್ಗೆ ಗಮನ ಸೆಳೆದಿದೆ.
ಇನ್ನೊಂದೆಡೆ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಂಘವೂ ಸಹ ಮುಖ್ಯಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿ, ದೀರ್ಘ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಪ್ರಮುಖವಾಗಿ ಸಾಮಾನ್ಯ ಅರ್ಹತೆಯಲ್ಲಿ ಅಂದರೆ ಜನರಲ್ ಮೆರಿಟ್ (ಜನರಲ್ ಬಿಂದು) ನೇಮಕವಾದ ಅಥವಾ ಮುಂಬಡ್ತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಶೇ.17, ಶೇ.7ರ ಮೀಸಲಾತಿಯ ಪ್ರಾತಿನಿಧ್ಯದಲ್ಲಿ ಪರಿಗಣಿಸಬಾರದೆಂದು ಆಗ್ರಹಿಸಿದೆ.
ಆದರೆ ಜನರಲ್ ಮೆರಿಟ್​ನಲ್ಲಿ ನೇಮಕವಾದವರು ಅಥವಾ ಬಡ್ತಿ ಪಡೆದವರು ಪರಿಶಿಷ್ಟ ಜಾತಿ, ಪಂಗಡದವರು ಮುಂದಿನ ವೃಂದಕ್ಕೆ ಪರಿಶಿಷ್ಟ ಜಾತಿ, ಪಂಗಡದ ಕೋಟಾದಲ್ಲಿ ಬಡ್ತಿ ಪಡೆಯಲು ಅರ್ಹರಿರುತ್ತಾರೆ ಎಂಬುದನ್ನು ಖಾತ್ರಿ ಪಡಿಸುವಂತೆ ಕೋರಲಾಗಿದೆ.
ಬ್ಯಾಕ್​ಲಾಗ್​ನಲ್ಲಿ ನೇಮಕವಾದವರನ್ನು ಅಥವಾ ಮುಂಬಡ್ತಿ ಪಡೆದವರು, ಅನುಕಂಪದಲ್ಲಿ ನೇಮಕಗೊಂಡವರು ಅಕ್ರಮ ಸಕ್ರಮದಲ್ಲಿ ನೇಮಕಗೊಂಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಶೇ.17 ಹಾಗೂ ಶೇ.7ರ ಮೀಸಲಾತಿಯ ಪ್ರಾತಿನಿಧ್ಯದಲ್ಲಿ ಪರಿಗಣಿಸಬಾರದು ಎಂಬ ಬೇಡಿಕೆ ಮುಂದಿಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಪ್ರಾತಿನಿಧ್ಯ ಲೆಕ್ಕ ಹಾಕುವಾಗ ನಮ್ಮ ಬೇಡಿಕೆಗಳನ್ನು ಸರ್ಕಾರ ಆದ್ಯತೆ ಮೇಲೆ ಪರಿಗಣಿಸಬೇಕು.
|ಚಂದ್ರಶೇಖರಯ್ಯಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷರು
ಹೊಸ ಮೀಸಲಾತಿ ಜಾರಿಗೆ ಬರುತ್ತಿರುವುದರಿಂದ ನ್ಯಾಯೋಚಿತವಾಗಿ ರೋಸ್ಟರ್ ಬಿಂದುಗಳ ಪದ್ಧತಿಯನ್ನು ಅಳವಡಿಸಬೇಕು. ಯಾರಿಗೂ ಅನ್ಯಾಯವಾಗದಿರಲಿ.
|ಕರ್ನಾಟಕ ಇಂಜಿನಿಯರುಗಳ ಸಂಘ
ಹಳೆ ಕ್ರಮಕ್ಕೆ ತಡೆ, ಹಾಕಲು ಒತ್ತಡ:ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಶೇ.15ರಿಂದ 17ಕ್ಕೆ ಮತ್ತು ಶೇ.3ರಿಂದ 7ಕ್ಕೆ ಹೆಚ್ಚಿಗೆಯಾಗಿರುವುದರಿಂದ ಯಾವುದೇ ಇಲಾಖೆ, ಪ್ರಾಧಿಕಾರ, ಸಂಸ್ಥೆ, ನಿಗಮಗಳು ಹಿಂದಿನ ಮೀಸಲು ಪ್ರಮಾಣದಂತೆ (ಶೇ.15, ಶೇ.3) ಬಡ್ತಿ ನೀಡುವುದು ಅಥವಾ ನೇಮಕ ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಎಸ್ಸಿ, ಎಸ್ಟಿ ನೌಕರರ ಸಂಘ ಸರ್ಕಾರದ ಮೇಲೆ ಒತ್ತಡ ಹೇರಿದೆ. ಕೂಡಲೇ ಹೊಸ ನಿಯಮ ರಚಿಸಿ ಆ ಪ್ರಕಾರ ನೇಮಕ, ಬಡ್ತಿ ಮಾಡಬೇಕೆಂದು ಕೋರಿದೆ.
‘ಕೆಜಿಎಫ್’​, ‘ಕಾಂತಾರ’ದಂತೆ ‘ವಿಜಯಾನಂದ’ ಕೂಡ ಪ್ಯಾನ್​ ಇಂಡಿಯಾ ಸದ್ದು ಮಾಡಲಿ: ಹರ್ಷಿಕಾ ಪೂಣಚ್ಚ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
