ಮೈಸೂರು:ಕರೊನಾ ತಪಾಸಣೆಗೆ ಒಳಪಟ್ಟ ವ್ಯಕ್ತಿಯೊಬ್ಬ ಪರೀಕ್ಷೆ ಬಳಿಕ ತನ್ನ ನಂಬರ್ ಬದಲು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕಿತಾಪತಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಇದನ್ನೂ ಓದಿ:ಮಗಳ ಸಾವಿನ ಸೇಡಿಗೆ ಪ್ರಿಯಕರನ ಕೊಲೆ, ಎರಡೂ ಕುಟುಂಬಗಳ ದ್ವೇಷದ ಜ್ವಾಲೆಗೆ ಹಾಡಹಗಲೇ ಹೊತ್ತಿ ಉರಿದ ಮನೆ!
ಮೈಸೂರಿನ ಹೆಬ್ಬಾಳ ಬಡಾವಣೆ ನಿವಾಸಿಯ ಕಳ್ಳಾಟ ಇಂದು ಬಯಲಾಗಿದೆ. ಪರೀಕ್ಷೆ ನಡೆಸಿದ ವ್ಯಕ್ತಿಯ ವರದಿಯಲ್ಲಿ ಕರೊನಾ ಪಾಸಿಟಿವ್ ದೃಢವಾಗಿತ್ತು. ಇದರ ಬೆನ್ನಲ್ಲೇ ಆತ ನೀಡಿದ್ದ ನಂಬರ್‌ಗೆ ಮೈಸೂರು ಜಿಲ್ಲಾಡಳಿತದ ಕಂಟ್ರೋಲ್ ರೂಂನಿಂದ ಕರೆ ಮಾಡಲಾಗಿತ್ತು.
ನಿಮಗೆ ಪಾಸಿಟಿವ್ ಬಂದಿದೆ ಎಲ್ಲಿದ್ದೀರಾ ಎಂದು ಕೇಳಲಾಗಿದೆ. ಆದರೆ, ಆಕಡೆಯಿಂದ ಮಾತನಾಡಿದ್ದು ಕರೊನಾ ಪಾಸಿಟಿವ್​ ವ್ಯಕ್ತಿಯಲ್ಲ, ಬದಲಾಗಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್​, ನನಗೆ ಪಾಸಿಟಿವ್ ಇದ್ಯಾ? ಎಂದು ಅಚ್ಚರಿಯಿಂದ ಕೇಳಿದ ಅವರು, ನಾನ್ ರೀ ಜಿಲ್ಲಾಧಿಕಾರಿ ಮಾತಾಡ್ತಾ ಇದ್ದೀನಿ ಎಂದಿದ್ದಾರೆ.
ಇತ್ತ ಡಿಸಿ ಮಾತು ಕೇಳಿ ಕಂಟ್ರೋಲ್ ರೂಮ್​ ಸಿಬ್ಬಂದಿ ಸಹ ತಬ್ಬಿಬ್ಬಾಗಿದ್ದಾರೆ. ಇದೀಗ ಪಾಸಿಟಿವ್ ಬಂದ ವ್ಯಕ್ತಿಗಾಗಿ ಅಧಿಕಾರಿಗಳು ಹುಡುಕಾಟ ಶುರುವಿಟ್ಟುಕೊಂಡಿದ್ದಾರೆ. ಸೋಂಕಿತ ವ್ಯಕ್ತಿಯ ಕಿತಾಪತಿ ಕೆಲಸ ಮಾಡಿದ ವ್ಯಕ್ತಿಯಿಂದ ಡಿಸಿಗೆ ತಲೆನೋವಾಗಿದೆ.
ಇದನ್ನೂ ಓದಿ:ಮಗಳ ಆತ್ಮಹತ್ಯೆ ಸೇಡಿಗೆ ಯುವಕನ ಬರ್ಬರ ಕೊಲೆ: ವರ್ಷದಿಂದ ನಡೆದಿತ್ತು ಭಾರಿ ಸಂಚು
ಈ ರೀತಿ ಮಾಡಿದ್ರೆ ಕರೊನಾ ಸಮಸ್ಯೆ ಮತ್ತಷ್ಟು ಕರೊನಾ ಸಮಸ್ಯೆ ಉಲ್ಬಣ ಆಗಲಿದೆ. ಸಾರ್ವಜನಿಕರು ಕರೊನಾ ಕಂಟ್ರೋಲ್‌ಗೆ ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಬಿಗ್​ಬಾಸ್​ ಮನೆ ಪ್ರವೇಶಿಸಲು ಭಾರಿ ಸಂಭಾವನೆ ಪಡೆದ ಹಾಟ್​ ಬ್ಯೂಟಿ ಪೂನಂ ಬಜ್ವಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
