ಚಿಕ್ಕಬಳ್ಳಾಪುರ :ಕಾಂಗ್ರೆಸ್​ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮುಂದುವರಿಯುತ್ತಿರುವಂತೆಯೇ, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರೇ, ಕಾಂಗ್ರೆಸ್​ ಕಾರ್ಯಕರ್ತರು, “ಮುಂದಿನ ಸಿಎಂ ಸಿದ್ದರಾಮಯ್ಯ” ಎಂದು ಘೋಷಣೆ ಕೂಗಿದ ಪ್ರಸಂಗ ನಡೆದಿದೆ.
ಬಾಗೇಪಲ್ಲಿಯಲ್ಲಿ ಕಾಂಗ್ರೆಸ್​ ಸಮಿತಿ ಇಂದು ಕೈಗೊಂಡಿದ್ದ ದಿನಸಿ ‌ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ನಾಯಕರು, “ಬಿಜೆಪಿ ತೊಲಗಿಸಿ, ಕಾಂಗ್ರೆಸ್​​ಗೆ ಮತ ಹಾಕಿ ಗೆಲ್ಲಿಸಿ” ಎಂದಾಗ ಹಲವು ಕಾರ್ಯಕರ್ತರು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು ಎನ್ನಲಾಗಿದೆ.
ಇದನ್ನೂ ಓದಿ:ರಾಜ್ಯಕ್ಕೂ ಜನಸಂಖ್ಯಾ ನೀತಿ : ಸಾರ್ವಜನಿಕ ಚರ್ಚೆಗೆ ಸಿ.ಟಿ.ರವಿ ಇಂಗಿತ
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮನೆ ಸುಡುತ್ತಿರುವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳೋರು ಜೆಡಿಎಸ್​​ನವರು. ಮನುಷ್ಯತ್ವ ಇಲ್ಲದ ಸರ್ಕಾರ, ಬಿಜೆಪಿ ಸರ್ಕಾರ. ಅಚ್ಛೆ ದಿನ್ ಬರುತ್ತದೆ ಎಂದವರು ಬರ್ಬಾದು ಮಾಡಿದ್ದಾರೆ ಎಂದರು. ಮುಂದಿನ ಸರ್ಕಾರವನ್ನು ಕಾಂಗ್ರೆಸ್ ರಚಿಸುತ್ತದೆ ಎಂದರು.
ರಾಜ್ಯದಲ್ಲಿ ಮಾಸಿಕ 60 ಲಕ್ಷ ಜನರಿಗೆ ಕರೊನಾ ಲಸಿಕೆ

ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ: ಶೇ. 28 ಕ್ಕೆ ಏರಿತು ಡಿಎ, ಡಿಆರ್​!

ಇಂಗ್ಲೆಂಡ್​ ಆಟಗಾರನ ತಂದೆಯ ಬೆನ್ನುಮೂಳೆ ಮುರಿದ ಅಭಿಮಾನಿಗಳ ದಂಡು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × four =
Remember me
