ಬೆಂಗಳೂರು:ಕರೊನಾ ಸೋಂಕು ನಿಯಂತ್ರಿಸುವಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ಕ್ರಮಗಳನ್ನು ಕೇಂದ್ರ ಸರ್ಕಾರ ಮುಕ್ತ ಕಂಠದಿಂದ ಶ್ಲಾಘಿಸಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ‘‘ಕೋವಿಡ್ ನಿರ್ವಹಣೆಯಲ್ಲಿ ಕರ್ನಾಟಕ ಮಾದರಿಯನ್ನು ಅನುಸರಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ಟೀಮ್ ಕರ್ನಾಟಕ ಮತ್ತು ನಮ್ಮ ಎಲ್ಲ ಕರೊನಾ ಯೋಧರಿಗೆ ಅಭಿನಂದನೆಗಳು’’ ಎಂದಿದ್ದಾರೆ.
ಇದನ್ನೂ ಓದಿ:ಸಿದ್ಧಗಂಗಾ ಮಠದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕರೊನಾ: ಇತರ 400 ವಿದ್ಯಾರ್ಥಿಗಳಿಗೆ ಆತಂಕ!
‘‘ನಮ್ಮ ಈ ಅನುಕರಣೀಯ ಮಾದರಿಯ ಹಿಂದೆ ದಕ್ಷ, ಪ್ರಾಮಾಣಿಕ ಆಡಳಿತ, ಪರಿಣಾಮಕಾರಿ ನೀತಿಗಳು ಮತ್ತು ತಂತ್ರಜ್ಞಾನದ ಸದ್ಬಳಕೆ, ನಿಖರ ಅನುಷ್ಠಾನದ ಸಾಂಘಿಕ ಪ್ರಯತ್ನಗಳಿವೆ’’ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಇದಕ್ಕೆ ಮುನ್ನ ಕೇಂದ್ರ ಆರೋಗ್ಯ ಸಚಿವಾಲಯ, ‘‘ಕರೊನಾ ಹಾವಳಿಯನ್ನು ನಿಯಂತ್ರಿಸಲು ಕರ್ನಾಟಕ ಕೈಗೊಂಡ ಮಾದರಿಯಾಗಿವೆ. ಅದನ್ನು ಇತರ ರಾಜ್ಯಗಳೂ ಅನುಕರಿಸಬೇಕು’’ ಎಂದು ಮುಕ್ತ ಕಂಠದಿಂದ ಪ್ರಶಂಸಿಸಿತ್ತು.
ಕೋವಿಡ್ ನಿರ್ವಹಣೆಯಲ್ಲಿ "ಕರ್ನಾಟಕ ಮಾದರಿ"ಯನ್ನು, ಅನುಸರಿಸುವಂತೆ ಕೇಂದ್ರಸರ್ಕಾರ ರಾಜ್ಯಗಳಿಗೆ ಹೇಳಿದೆ. ನಮ್ಮ ಈ ಅನುಕರಣೀಯ ಮಾದರಿಯ ಹಿಂದೆ ದಕ್ಷ, ಪ್ರಾಮಾಣಿಕ ಆಡಳಿತ, ಪರಿಣಾಮಕಾರಿ ನೀತಿಗಳು ಮತ್ತು ತಂತ್ರಜ್ಞಾನದ ಸದ್ಭಳಕೆ, ನಿಖರ ಅನುಷ್ಠಾನಗಳ ಸಾಂಘಿಕ ಪ್ರಯತ್ನಗಳಿವೆ. ಟೀಮ್ ಕರ್ನಾಟಕ ಮತ್ತು ಎಲ್ಲ ನಮ್ಮ ಕರೋನಾ ಯೋಧರಿಗೆ ಅಭಿನಂದನೆಗಳು.
— B.S.Yediyurappa (@BSYBJP)June 19, 2020

ಕರೊನಾ ನಿಯಂತ್ರಣದಲ್ಲಿ ಕರ್ನಾಟಕವೇ ಮಾದರಿ: ಕೇಂದ್ರದ ಶ್ಲಾಘನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
