ಬೆಂಗಳೂರು:ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿ ಬಂಧನವನ್ನು ಖಂಡಿಸಿರುವ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್​ ಸರ್ಕಾರದ ವಿರುದ್ಧ ತನ್ನ ಆರೋಪದ ಸರಮಾಲೆಯನ್ನು ಮುಂದುವರೆಸಿದೆ. ಇನ್ನು ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್​ ಘಟಕ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೊಸ ಪ್ರತಿಭೆಯನ್ನು ಪರಿಚಯಿಸಲಿ ಎಂದು ಟೀಕಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್​, ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ ಎಂದು ವಾಗ್ದಾಳಿ ನಡೆಸಿದೆ.
ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ. ಆತನ ಮೇಲೆ ಬಿಜೆಪಿಗೆ ಕಾಳಜಿ, ಪ್ರೀತಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರಲ್ಹಾದ್​ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ. ಹೊಸ ಪ್ರತಿಭೆಯನ್ನು ಪರಿಚಯಿಸಲಿ ಎಂದು ಕುಟುಕಿದೆ.
ಅಕ್ರಮ ಸಾರಾಯಿ ದಂಧೆಕೋರ, ಮಟ್ಕಾ, ಜೂಜುಕೋರನನ್ನು ರಾಮಭಕ್ತನೆಂದು ಹೇಳಿ ದೊಂಬಿ ಎಬ್ಬಿಸುತ್ತಿರುವ@BJP4Karnatakaಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಮರ್ಯಾದೆ ತೆಗೆಯುತ್ತಿದೆ.ಮಟ್ಕಾ, ಜೂಜು, ಅಕ್ರಮ ಹೆಂಡದ ದಂಧೆ ಮಾಡುವವರು ಶ್ರೀರಾಮನ ಭಕ್ತರಾಗಲು ಸಾಧ್ಯವೇ?ಬಿಜೆಪಿಗೆ ರಾಮನ ಬಗ್ಗೆ ಮಿನಿಮಮ್ ಪ್ರಜ್ಞೆ, ಗೌರವ ಇದ್ದಿದ್ದರೆ ರಾಮನ…
ಇದನ್ನೂ ಓದಿ:ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ನಿಜವಾದ ಹೆಸರು ಏನು ಗೊತ್ತಾ?
ಕ್ರಿಮಿನಲ್ ಗಳಿಗೆ, ಕಳ್ಳರಿಗೆ, ಅತ್ಯಾಚಾರಿಗಳಿಗೆ, ರೌಡಿಗಳಿಗೆ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಚಿತ್ತಾಪುರ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದೆ. ಮೋದಿ ರೌಡಿ ಶೀಟರ್‌ಗೆ ಕೈ ಮುಗಿದು ನಿಲ್ಲುವ ಮೂಲಕ ಸಮಾಜಘಾತುಕ ಶಕ್ತಿಗಳೇ ಬಿಜೆಪಿಯ ಶಕ್ತಿ ಎಂಬುದು ನಿರೂಪಿತವಾಗಿದೆ ಎಂದು ಹರಿಹಾಯ್ದಿದೆ.
ಅಕ್ರಮ ಸಾರಾಯಿ ದಂಧೆಕೋರ, ಮಟ್ಕಾ, ಜೂಜುಕೋರನನ್ನು ರಾಮಭಕ್ತನೆಂದು ಹೇಳಿ ದೊಂಬಿ ಎಬ್ಬಿಸುತ್ತಿರುವ ಬಿಜೆಪಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಮರ್ಯಾದೆ ತೆಗೆಯುತ್ತಿದೆ. ಮಟ್ಕಾ, ಜೂಜು, ಅಕ್ರಮ ಹೆಂಡದ ದಂಧೆ ಮಾಡುವವರು ಶ್ರೀರಾಮನ ಭಕ್ತರಾಗಲು ಸಾಧ್ಯವೇ. ಬಿಜೆಪಿಗೆ ರಾಮನ ಬಗ್ಗೆ ಮಿನಿಮಮ್ ಪ್ರಜ್ಞೆ, ಗೌರವ ಇದ್ದಿದ್ದರೆ ರಾಮನ ಪಾವಿತ್ರ್ಯತೆಗೆ ದಕ್ಕೆ ತರುತ್ತಿರಲಿಲ್ಲ ಎಂದು ರಾಜ್ಯ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
