ಬೆಂಗಳೂರು:ರಸ್ತೆಗುಂಡಿ-ಚರಂಡಿ ಸಮಸ್ಯೆ ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದ ನಳಿನ್ ಕುಮಾರ್ ಕಟೀಲ್​ರನ್ನು ಕಾಂಗ್ರೆಸ್​ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಕೋಮು ಕಲಹವನ್ನ ಬಳಸುತ್ತಿದೆ. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ “ಸಣ್ಣ ವಿಷಯಗಳು”. ಬಿಜೆಪಿಗೆ ಅಭಿವೃದ್ಧಿ ಬೇಡ್ವಂತೆ, ಲವ್​ ಜಿಹಾದ್​ ವಿವಾದದ ವಿಚಾರ ಬೇಕಂತೆ ಎಂದು ಕಿಡಿಕಾರಿದೆ.
ಸರಣಿ ಟ್ವೀಟ್​ ಮೂಲಕ ಕಟೀಲ್​ರ ವಿರುದ್ಧ ಕಾಂಗ್ರೆಸ್​ ಆಕ್ರೋಶ ಹೊರಹಾಕಿದೆ. ಅಭಿವೃದ್ಧಿ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಬೆಲೆ ಏರಿಕೆ, ರಸ್ತೆ ಗುಂಡಿಯಿಂದ ಸಾವುಗಳು, ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ನೇಮಕಾತಿ ಹಗರಣಗಳು, ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣ… ಇವೆಲ್ಲಾ ಬಿಜೆಪಿಗೆ ಸಣ್ಣ ವಿಷಯಗಳಂತೆ. ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿದರೂ ಉದ್ಯೋಗ ಕೇಳಬೇಡಿ. ‘ಲವ್ ಜಿಹಾದ್’ ಎಂಬ ಇಲ್ಲದ ವಿಷಯವನ್ನು ದೊಡ್ಡದಾಗಿಸೋದು ಬಿಜೆಪಿಯ ಲಜ್ಜೆಗೇಡಿತನದ ಪರಮಾವಧಿ. ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ ಎಂದು ಕಟುವಾಗಿ ಟೀಕಿಸಿದೆ.
ಮಾನ್ಯ ನಳಿನ್​ ಕುಮಾರ್​ ಕಟೀಲ್​ ಅವರೇ ಲವ್ ಜಿಹಾದ್ ಬಿಡಿ, ಮೊದಲು ಡಾಲರ್ ಬಗ್ಗೆ ಮಾತಾಡಿ. “ಡಾಲರ್ ಮತ್ತು ರೂಪಾಯಿ” ಬಗ್ಗೆ ಮಾತಾಡಲು ನಿಮಗೇಕೆ ಹಿಂಜರಿಕೆ? ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗ್ತಿದೀರಾ? “ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ” ಎಂಬುದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ. ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ ಕರ್ನಾಟಕ ಬಿಜೆಪಿಯು ತನ್ನ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿಯಲ್ಲಿ ವಿಫಲವಾಗಿದೆ. ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ತಾನೇ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.
ಬಿಜೆಪಿ ಅಧ್ಯಕ್ಷ@nalinkateelಅವರೇ, ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ.
◆ಬಿಟ್ ಕಾಯಿನ್ ಹಗರಣ◆PSI ಅಕ್ರಮ◆ಕೆಪಿಟಿಸಿಎಲ್ ಅಕ್ರಮ◆ಸಾಲು ಸಾಲು ನೇಮಕಾತಿ ಅಕ್ರಮಗಳು◆ಗುತ್ತಿಗೆದಾರರ ಆತ್ಮಹತ್ಯೆ◆ರಸ್ತೆ ಗುಂಡಿಯ ಸಾವುಗಳು◆ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ
ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ.pic.twitter.com/toOY9mHBVH
— Karnataka Congress (@INCKarnataka)January 3, 2023

ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ “ಮುಖ್ಯಮಂತ್ರಿ ನಗರೋತ್ಥಾನ ಯೋಜನೆ” ಮಾಡುತ್ತೇವೆ ಎಂದು ಕರ್ನಾಟಕ ಬಿಜೆಪಿ ಹೇಳಿತ್ತು. ಆದರೆ ರಾಜ್ಯಕ್ಕೆ ನಯಾಪೈಸೆ ಅಭಿವೃದ್ಧಿ ಕೊಡುಗೆ ನೀಡದ ಬಿಜೆಪಿಗೆ ಇಂದು ಅಭಿವೃದ್ಧಿ ಎಂಬುದು ಸಣ್ಣ ವಿಷಯವಾಗಿದೆ, ಅದರ ಬಗ್ಗೆ ಮಾತೇ ಆಡಬೇಡಿ ಎನ್ನುತ್ತಿದೆ. ಇದು ಬಿಜೆಪಿಯ ವೈಫಲ್ಯವಲ್ಲವೇ?
ಬಿಜೆಪಿ ಅಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರೇ ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ. ಮೊದಲು ಬಿಟ್ ಕಾಯಿನ್ ಹಗರಣ, PSI ಹುದ್ದೆ ಅಕ್ರಮ, ಕೆಪಿಟಿಸಿಎಲ್ ಅಕ್ರಮ, ಸಾಲು ಸಾಲು ನೇಮಕಾತಿ ಅಕ್ರಮಗಳು, ಗುತ್ತಿಗೆದಾರರ ಆತ್ಮಹತ್ಯೆ, ರಸ್ತೆ ಗುಂಡಿಯಿಂದ ಸಂಭವಿಸುತ್ತಿರುವ ಸಾವುಗಳು, ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ… ಈ ವಿಷಯಗಳ ಬಗ್ಗೆ ಮಾತಾಡಿ. ಆ ಮೂಲಕ ನಿಮ್ಮ ದಮ್ಮು, ತಾಕತ್ತು ತೋರಿಸಿ ಎಂದು ಕಾಂಗ್ರೆಸ್​ ಸವಾಲು ಹಾಕಿದೆ.
ರಸ್ತೆಗುಂಡಿ-ಚರಂಡಿ ಸಮಸ್ಯೆ ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಿ ಎಂದ ನಳಿನ್ ಕುಮಾರ್ ಕಟೀಲ್ ವಿರುದ್ಧ ಭುಗಿಲೆದ್ದ ಆಕ್ರೋಶ

ಆನೇಕಲ್​ನಲ್ಲಿ ಈ ನಾಗರಹಾವಿನ ನಡೆಯೇ ವಿಚಿತ್ರ-ವಿಸ್ಮಯ! ಹಾವು ನೋಡಲು ಜನವೋ ಜನ

ಮಂಡ್ಯದಲ್ಲಿ ಜಮೀನು ವಿವಾದ: ಹೊಲದಲ್ಲೇ ದಂಪತಿ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳು! ಪತ್ನಿ ಸಾವು, ಪತಿ ಸ್ಥಿತಿ ಚಿಂತಾಜನಕ

ರಾತ್ರಿ ಪಾಳಿಯ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದ ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ ಹೃದಯಾಘಾತದಿಂದ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
