ಬೆಂಗಳೂರು:ಮೊದಲು ಅಮೂಲ್ ಜೊತೆ KMF ವಿಲೀನದ ಪ್ರಸ್ತಾಪ ಮಾಡಲಾಗಿತ್ತು. ಬಳಿಕ ನಂದಿನಿ ಮೊಸರಿನ ಪಾಕೆಟ್ ಮೇಲೆ ದಹಿ ಹೆಸರು ಉಲ್ಲೇಖವಾಗಿತ್ತು ಎನ್ನುತ್ತಾ ತೀವ್ರ ವಾಗ್ದಾಳಿ ನಡೆಸುತ್ತಾ ರಾಜ್ಯ ಕಾಂಗ್ರೆಸ್​, ಚುನಾವಣಾ ಹೊಸ್ತಿಲಲ್ಲೇ ಬಿಜೆಪಿ ಮೇಲೆ ಗಂಭೀರ ವಾಗ್ದಾಳಿ ನಡೆಸಿದೆ.
ಗುಜರಾತ್ ಮೂಲದ ಅಮುಲ್ ಸಂಸ್ಥೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ನಂದಿನಿ ಉಳಿಸಿ, ಅಮೂಲ್ ಓಡಿಸಿ ಅಭಿಯಾನ ಜೋರಾಗಿದ್ದು ಇದೀಗ ಕಾಂಗ್ರೆಸ್​ ಕೂಡ ಅಖಾಡಕ್ಕೆ ಇಳಿದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ಕಾಂಗ್ರೆಸ್​ ಟ್ವೀಟ್​ ಮಾಡಿದ್ದು ಯಾವಾಗೆಲ್ಲ ಏನೇನಾಯ್ತು ಎಂದು ಅದರಲ್ಲಿ ಬರೆದಿದ್ದಾರೆ. ಮೊದಲ ಟ್ವೀಟ್​ನಲ್ಲಿ* ಅಮುಲ್ + ನಂದಿನಿ ವಿಲೀನ ಎಂದರು* ಮೊಸರಿಗೆ ಹಿಂದಿಯ ‘ದಹಿ’ ಇರಲೇಬೇಕು ಎಂದರು* KMFಗೆ ಹಾಲು ನೀಡುವ ರೈತರಿಗೆ 5,6 ತಿಂಗಳಿಂದ ಸಹಾಯಧನ ನಿಲ್ಲಿಸಿದರು* ಉದ್ದೇಶಪೂರ್ವಕವಾಗಿ ‘ನಂದಿನಿ’ ಉತ್ಪನ್ನಗಳ ಕೊರತೆ ಸೃಷ್ಟಿಸಿದರು* ಈಗ ಅಮೂಲ್‌ನ್ನು ಕರ್ನಾಟಕಕ್ಕೆ ತಂದುಬಿಟ್ಟರು* ನಂದಿನಿಯ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ.ಎಂದು ಬರೆಯಲಾಗಿದೆ.
ಕ್ರೋನಾಲಜಿ
◆ಅಮುಲ್ + ನಂದಿನಿ ವಿಲೀನ ಎಂದರು
◆ಮೊಸರಿಗೆ ಹಿಂದಿಯ 'ದಹಿ' ಇರಲೇಬೇಕು ಎಂದರು
◆KMFಗೆ ಹಾಲು ನೀಡುವ ರೈತರಿಗೆ 5,6 ತಿಂಗಳಿಂದ ಸಹಾಯಧನ ನಿಲ್ಲಿಸಿದರು
◆ಉದ್ದೇಶಪೂರ್ವಕವಾಗಿ 'ನಂದಿನಿ' ಉತ್ಪನ್ನಗಳ ಕೊರತೆ ಸೃಷ್ಟಿಸಿದರು
◆ಈಗ ಅಮೂಲ್‌ನ್ನು ಕರ್ನಾಟಕಕ್ಕೆ ತಂದುಬಿಟ್ಟರು
ನಂದಿನಿಯ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ.
— Karnataka Congress (@INCKarnataka)April 8, 2023

ನಂತರ ಎರಡನೇ ಟ್ವೀಟ್​ನಲ್ಲಿ ಬಿಜೆಪಿಯ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್​ “ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಬಿಜೆಪಿ” ಎಂದು ಆರೋಪಿಸಲಾಗಿದೆ.
ಅದಲ್ಲದೇ ಅಮುಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು ಎಂದೂ ಆರೋಪಿಸಿದ್ದು KMF ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿ ಮಾಡಲಾಗಿದೆ ಎಂದೂ ಹೇಳಿದ್ದಾರೆ.
ಹೀಗೆ ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು #ರ್ನಾಟಕ ವಿರೋಧಿ ಬಿಜೆಪಿ ಸರ್ವನಾಶ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.
ನಂದಿನಿ ಎಂಬ ಕನ್ನಡ ಕಾಮಧೇನುವಿನ ಕೆಚ್ಚಲು ಕೊಯ್ಯಲು ಹೊರಟಿದೆ ಬಿಜೆಪಿ.
ಅಮುಲ್ + ನಂದಿನಿ ವಿಲೀನ ಎಂದ ಅಮಿತ್ ಶಾ ಮೊಸರಿಗೆ ದಹಿ ಹೆಸರು ಕಡ್ಡಾಯಗೊಳಿಸಿದರು.
KMF ಹಾಲು ಪೂರೈಕೆಯಲ್ಲಿ ಉದ್ದೇಶಪೂರ್ವಕ ವ್ಯತ್ಯಯ ಸೃಷ್ಟಿಸಿದರು.
ಈಗ ಅಮೂಲ್ ಮೂಲಕ ನಂದಿನಿಯನ್ನು ನಂಬಿದ ರಾಜ್ಯದ ರೈತರನ್ನು ಸರ್ವನಾಶ ಮಾಡುತ್ತಿದೆ#ಕರ್ನಾಟಕವಿರೋಧಿಬಿಜೆಪಿpic.twitter.com/pXegreHqTu
— Karnataka Congress (@INCKarnataka)April 8, 2023

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
