ಸದೇಶ್ ಕಾರ್ವಡ್ಮೈಸೂರು:ಜೀವನದಿ ಕಾವೇರಿ, ಉಪನದಿ ಕಪಿಲಾ ಹಾಗೂ ಸ್ಪಟಿಕ ಸರೋವರದ ಸಂಗಮ ಸ್ಥಾನ ತಿ.ನರಸೀಪುರ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಲು ಪ್ರಾರಂಭವಾಗಿದೆ. ಪ್ರತಿ ಬಾರಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಅಂತಹದ್ದೇ ಜಿದ್ದಾಜಿದ್ದಿನ ಸ್ಪರ್ಧೆಗೆ ಅಖಾಡ ಸಿದ್ಧವಾಗುತ್ತಿದೆ.
1999ರಲ್ಲಿ ಮಾತ್ರ ಬಿಜೆಪಿ (ಡಾ.ಭಾರತಿ ಶಂಕರ್) ಗೆಲುವು ಸಾಧಿಸಿದ್ದು, ಉಳಿದೆಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಸ್ಪರ್ಧೆ ನಡೆದಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಪ್ತ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಸ್ಪರ್ಧೆಯ ಕಾರಣದಿಂದ ತಿ.ನರಸೀಪುರ ಕ್ಷೇತ್ರ ಈ ಬಾರಿಯೂ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದೆ.
ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಎಂ. ಅಶ್ವಿನ್​ಕುಮಾರ್​ಗೆ ಈ ಬಾರಿಯೂ ಜೆಡಿಎಸ್ ಟಿಕೆಟ್ ನಿಶ್ಚಿತವಾಗಿದ್ದು, ಬಂಡಾಯದ ಬಿಸಿ ಇಲ್ಲ. ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ, ಅಭಿವೃದ್ಧಿ ಕಾರ್ಯಗಳು ಇವರ ಅವಧಿಯಲ್ಲಿ ಹೆಚ್ಚು ಆಗಿಲ್ಲ ಎಂಬ ಕೊರಗು ಮತದಾರರ ಮನದಲ್ಲಿದೆ.
ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಇನ್ನೂ ಅಭ್ಯರ್ಥಿಗಳು ಅಂತಿಮಗೊಂಡಿಲ್ಲ. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್​ಗೋಸ್ಕರ ಕ್ಷೇತ್ರ ಬದಲಾಯಿಸುವ ಆಲೋಚನೆಯಲ್ಲಿದ್ದಾರೆ. ಕಳೆದ ಬಾರಿಯೇ ಸುನೀಲ್ ಬೋಸ್ ತಿ.ನರಸೀಪುರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಮಹದೇವಪ್ಪ ಸ್ಪರ್ಧಿಸಿದ್ದರು. ತಿ.ನರಸೀಪುರದಿಂದ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸಿ ಪಕ್ಕದ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಮಹದೇವಪ್ಪ ಅವರ ಲೆಕ್ಕಾಚಾರ. ಆದರೆ, ಒಂದೇ ಜಿಲ್ಲೆಯಲ್ಲಿ ಅಪ್ಪ-ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡುವುದೇ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಆದರೂ ಟಿಕೆಟ್ ದೊರೆಯುವ ನಿರೀಕ್ಷೆಯೊಂದಿಗೆ ಅಪ್ಪ-ಮಗ ಎರಡೂ ಕಡೆ ಸಕ್ರಿಯರಾಗಿದ್ದಾರೆ. ಮಹದೇವಪ್ಪ, ಸುನೀಲ್ ಬೋಸ್ ಜತೆಗೆ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎನ್. ಮಂಜುನಾಥ್ ಅವರ ಪುತ್ರ ಪ್ರಫುಲ್​ಚಂದ್ರ, ಕಾಂಗ್ರೆಸ್ ಮುಖಂಡರಾದ ನೂತನ್, ಮೂಗೂರು ಚಿನ್ನಸ್ವಾಮಿ ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಮಹದೇವಪ್ಪ ಕ್ಷೇತ್ರದ ಜವಾಬ್ದಾರಿಯನ್ನು ಸುನೀಲ್ ಬೋಸ್​ಗೆ ವಹಿಸಿದ್ದರು. ಆದರೆ, ಮಹದೇವಪ್ಪ ಸಮಕಾಲೀನರು ಸುನೀಲ್ ಬೋಸ್ ಅವರೊಂದಿಗೆ ಬೆರೆಯುತ್ತಿಲ್ಲ. ಇದು ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗುತ್ತಿದೆ.
ಬಿಜೆಪಿಗೆ ಮತ್ತೆ ಗೆಲುವಿನ ತವಕ:
ಕ್ಷೇತ್ರದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಹೆಚ್ಚು ಬಲವನ್ನು ಹೊಂದಿಲ್ಲ. ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವ ಸಂಕಲ್ಪವನ್ನು ಪಕ್ಷದ ನಾಯಕರು ತೊಟ್ಟಿದ್ದಾರೆ. ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು ಇದ್ದು, ಟಿಕೆಟ್ ಪಡೆಯಲು ಪಕ್ಷದ ನಾಯಕರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಾಜಿ ಶಾಸಕ ಡಾ.ಎನ್.ಎಲ್. ಭಾರತೀಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಮಡುವಾಡಿ, ಜಿಲ್ಲಾ ಉಪಾಧ್ಯಕ್ಷ ದಾಸಯ್ಯ, ಪಕ್ಷದ ಮುಖಂಡ ಅರವಿಂದ್, ಸಂಸದ ವಿ.ಶ್ರೀನಿವಾಸಪ್ರಸಾದ್ ಪುತ್ರಿ ಪೂರ್ಣಿಮಾ, ಜೆಡಿಎಸ್​ನಿಂದ ಈ ಹಿಂದೆ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಪರಾಭವಗೊಂಡಿದ್ದ ದಿ.ಸುಂದರೇಶನ್ ಅವರ ಪುತ್ರ ಸಾಮ್ರಾಟ್ ಹೆಸರು ಕೇಳಿಬರುತ್ತಿವೆ. ಅಲ್ಲದೇ, ವೈದ್ಯ ಡಾ.ರೇವಣ್ಣ ಅವರ ಹೆಸರು ಕೂಡ ಕೇಳಿಬರುತ್ತಿದೆ.
ಮಹದೇವಪ್ಪ ಗೆಲುವಿನ ದಾಖಲೆ
ತಿ.ನರಸೀಪುರ ಕ್ಷೇತ್ರದಲ್ಲಿ ಡಾ.ಎಚ್.ಸಿ. ಮಹದೇವಪ್ಪ 5 ಬಾರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡು ಬಾರಿ, ಜೆಡಿಎಸ್, ಜನತಾದಳ ಮತ್ತು ಜನತಾ ಪಕ್ಷದ ಅಭ್ಯರ್ಥಿಯಾಗಿ ತಲಾ ಒಂದು ಬಾರಿ ಗೆಲುವು ಕಂಡಿದ್ದಾರೆ. ಒಟ್ಟು 8 ಬಾರಿ ಸ್ಪರ್ಧಿಸಿರುವ ಮಹದೇವಪ್ಪ 5 ಬಾರಿ ಗೆಲುವು, 3 ಬಾರಿ ಸೋಲಿನ ಕಹಿ ಅನುಭವಿಸಿದ್ದಾರೆ. ಹಾಲಿ ಶಾಸಕ ಎಂ. ಅಶ್ವಿನ್​ಕುಮಾರ್ 2018ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿ ಇದೀಗ ಎರಡನೇ ಬಾರಿ ವಿಧಾನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ.
ಕಾಂಗ್ರೆಸ್​ಗೆ ಅತ್ಯಧಿಕ ಗೆಲುವು
1951ರಿಂದ ಇಲ್ಲಿಯವರೆಗೆ 15 ಚುನಾವಣೆಗಳನ್ನು ಕಂಡಿರುವ ತಿ.ನರಸೀಪುರ ಕ್ಷೇತ್ರದಲ್ಲಿ ಪ್ರತಿ ಬಾರಿ ಜನತಾ ಪರಿವಾರ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಕಂಡುಬಂದಿದೆ. ತಲಾ ಒಂದು ಬಾರಿ ಕೆಎಂಪಿಪಿ, ಬಿಜೆಪಿ ಮತ್ತು ಎನ್​ಸಿಒ ಪಕ್ಷ ಗೆಲುವು ಸಾಧಿಸಿವೆ. ಒಟ್ಟು 7 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, 5 ಚುನಾವಣೆಗಳಲ್ಲಿ ಜನತಾ ಪರಿವಾರ ಮೇಲುಗೈ ಪಡೆದಿದೆ. 1951ರಿಂದ 1972ರವರೆಗೆ ಸಾಮಾನ್ಯ ಕ್ಷೇತ್ರವಾಗಿದ್ದ ತಿ.ನರಸೀಪುರ ನಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು.
ಮತದಾರರ ಮನವೊಲಿಕೆ
ತಿ.ನರಸೀಪುರದಲ್ಲಿ ಅವಧಿಗೆ ಮುನ್ನವೇ ಚುನಾವಣೆಯ ಕಾವು ಕಾಣಲು ಪ್ರಾರಂಭಿಸಿದೆ. ಶಾಸಕ ಅಶ್ವಿನ್​ಕುಮಾರ್ ಜೆಡಿಎಸ್​ನ ಟಿಕೆಟ್ ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಮತದಾರರನ್ನು ಭೇಟಿಯಾಗಿ ಕಷ್ಟ-ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಬಿಜೆಪಿ ಹಾಗೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಸಹ ಕಾರ್ಯಕರ್ತರ ಭೇಟಿ ಹಾಗೂ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕಾಂಗ್ರೆಸ್​ಪ್ಲಸ್-ಮೈನಸ್
ಜೆಡಿಎಸ್ ಪ್ಲಸ್-ಮೈನಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − five =
Remember me
