ಬೆಂಗಳೂರು:ರಾಜ್ಯಸಭಾ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್​ನ ಎರಡನೇ ಅಭ್ಯರ್ಥಿ ಕಣದಲ್ಲಿ ಉಳಿಯಲು ಪಕ್ಷದ ಶಾಸಕರ ಒತ್ತಡ ಕಾರಣವೇ? ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಕಣದಿಂದ ಹಿಂದಕ್ಕೆ ತೆಗೆಸುವಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ರಾಜ್ಯಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮೂಲಕ ಪ್ರಯತ್ನ ನಡೆಸುತ್ತಿದ್ದಂತೆ ಪಕ್ಷದ ಶಾಸಕರು ಬಂಡೆದಿದ್ದಾರೆ. ನಮ್ಮ ಅಭ್ಯರ್ಥಿ ಸೋತರೂ ಪರವಾಗಿಲ್ಲ, ಜೆಡಿಎಸ್​ಗೆ ಬೆಂಬಲ ನೀಡುವುದು ಮಾತ್ರ ಬೇಡವೇ ಬೇಡ, ಬೇಕಾದರೆ ಆ ಪಕ್ಷವೇ ಬೆಂಬಲ ನೀಡಲಿ ಎಂದು 40ಕ್ಕೂ ಹೆಚ್ಚು ಶಾಸಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಒತ್ತಡ ತಂದಿದ್ದಾರೆ. ಅದನ್ನು ಇಬ್ಬರು ನಾಯಕರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾಗೆ ಮನದಟ್ಟು ಮಾಡಿಕೊಟ್ಟಿದ್ದಾರೆಂದು ಮೂಲಗಳು ಖಚಿತಪಡಿಸಿವೆ.
ಜೆಡಿಎಸ್ ನಾಯಕರು ಪದೇಪದೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಾರೆ. ಆ ಪಕ್ಷವೇ ದಕ್ಷಿಣ ಭಾಗದಲ್ಲಿ ನಮಗೆ ಪ್ರಮುಖ ಎದುರಾಳಿ. ಚುನಾವಣೆಗೆ ಕೆಲವೇ ದಿನ ಇರುವಾಗ ಆ ಪಕ್ಷಕ್ಕೆ ಬೆಂಬಲ ನೀಡುವ ಅಗತ್ಯವಿಲ್ಲ. ಚುನಾವಣೆ ಹೆಸರಿನಲ್ಲಿ ಲಾಭ ಮಾಡಿಕೊಳ್ಳಲು ಆ ಪಕ್ಷಕ್ಕೆ ಏಕೆ ನೆರವಾಗಬೇಕು? ಕಾಂಗ್ರೆಸ್ ಬಿಟ್ಟು ತೃತೀಯ ರಂಗ ಕಟ್ಟುವ ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರಿಗೆ ದೇವೇಗೌಡ ಹಾಗೂ ಕುಮಾರಸ್ವಾಮಿ ಬೆಂಬಲಿಸುತ್ತಿದ್ದಾರೆ. ಕಳೆದ ಬಾರಿ ದೇವೇಗೌಡರನ್ನು ಬೆಂಬಲಿಸಿದ್ದಕ್ಕೆ ಅವರು ಕೊಟ್ಟಿರುವ ಪ್ರತಿಫಲ ಇದಾಗಿದೆ. ಮತ್ತೆ ಆ ತಪು್ಪ ಮಾಡಲು ಮುಂದಾದರೆ ಚುನಾವಣೆ ದಿನ ವಿಪ್ ಇದ್ದರೂ ಗೈರಾಗುತ್ತವೆ ಎಂದು ಶಾಸಕರು ಎಚ್ಚರಿಕೆ ನೀಡಿದರೆಂದು ಮೂಲಗಳು ತಿಳಿಸಿವೆ. ಶಾಸಕರ ಅಭಿಪ್ರಾಯ ತಿಳಿಯುತ್ತಿದ್ದಂತೆ ಪಕ್ಷದ ವರಿಷ್ಠರು ಸಹ ಜೆಡಿಎಸ್ ಬೆಂಬಲಿಸುವ ನಿರ್ಧಾರದಿಂದ ಹಿಂದೆ ಸರಿದರೆಂದು ಹೇಳಲಾಗಿದೆ. ಚುನಾವಣೆ ಗೆಲ್ಲುವುದಕ್ಕೆ ಬೇಕಾದ ಮತಗಳನ್ನು ಸೆಳೆಯುವುದಕ್ಕೆ ಪ್ರಯತ್ನ ಪಡುವುದು, ಪಕ್ಷದ ಮತಗಳು ಚದುರದಂತೆ ಎಚ್ಚರ ವಹಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ. ಸೋತರೂ ಚಿಂತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಪಕ್ಷದ ಮುಖಂಡರು ಬಂದಿದ್ದಾರೆಂದು ತಿಳಿದುಬಂದಿದೆ.
ಗೆಲ್ಲುವ ವಿಶ್ವಾಸದಿಂದಲೇ ನಾವು ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸಿರುವುದು. ಪ್ರಾಶಸ್ಱದ ಮತ ನಮಗೂ 71 ಇವೆ, ಬೇರೆ ಮತಗಳು ಬರುತ್ತವೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಹಲವು ಜನ ಮತ ಹಾಕುತ್ತಾರೆ, ಇದರಿಂದ ನಾವು ಗೆಲ್ಲುತ್ತೇವೆ. ನಮಗೆ ಹೈಕಮಾಂಡ್​ನವರೇ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಎಂದು ಹೇಳಿರುವುದು.
|ಸಿದ್ದರಾಮಯ್ಯಪ್ರತಿಪಕ್ಷದ ನಾಯಕ
ಖರ್ಗೆ ಪ್ರಯತ್ನವೇಕೆ?:ಮಲ್ಲಿಕಾರ್ಜುನ ಖರ್ಗೆ ಎರಡು ಉದ್ದೇಶಗಳನ್ನು ಹೊಂದಿ ಜೆಡಿಎಸ್​ಗೆ ಬೆಂಬಲ ಕೊಡಿಸಲು ಮುಂದಾಗಿದ್ದರೆಂದು ಪಕ್ಷದ ಮೂಲಗಳು ವಿಶ್ಲೇಷಣೆ ಮಾಡುತ್ತವೆ. ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದಿದ್ದರೆ ದೇವೇಗೌಡರ ಮೂಲಕ ಜೆಡಿಎಸ್ ಬೆಂಬಲದೊಂದಿಗೆ ಮುಖ್ಯಮಂತ್ರಿ ಹುದ್ಧೆ ಪಡೆಯುವುದು. ಎರಡನೇ ಉದ್ದೇಶವೆಂದರೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯೆ ಹೆಚ್ಚಾಗಿ ಕಾಂಗ್ರೆಸ್ ಕಡಿಮೆಯಾದರೆ ಪಕ್ಷಕ್ಕೆ ಸಿಕ್ಕಿರುವ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬುದಾಗಿದೆ ಎಂದು ಹೇಳಲಾಗುತ್ತಿದೆ.
ನಾನು ಏನು ಹೇಳುತ್ತೇನೋ ಅದನ್ನು ಮಾತ್ರ ಮಾಡುತ್ತೇನೆ… ಶುರುವಾಯ್ತು ಉಪ್ಪಿ ‘UI’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 18 =
Remember me
