|ಶಿವಮೂರ್ತಿ ಹಿರೇಮಠರಾಯಚೂರು
ಬಿಜೆಪಿ-ಕಾಂಗ್ರೆಸ್ ನಾಯಕರಿಗೆ ಪ್ರತಿಷ್ಠೆಯಾಗಿದ್ದ ಮಸ್ಕಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಕೈ ಅಭ್ಯರ್ಥಿ ಬಸನಗೌಡ ತುರ್ವಿಹಾಳರ ಕೈಹಿಡಿದಿದ್ದಾರೆ. ನಾಲ್ಕನೇ ಬಾರಿ ಗೆಲ್ಲುವ ಉತ್ಸಾಹದಲ್ಲಿದ್ದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರಾಭವಗೊಳ್ಳುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ತೀವ್ರ ಪೈಪೋಟಿಯಿದ್ದ ಚುನಾವಣೆಯಲ್ಲಿ ಯಾರೇ ಗೆದ್ದರೂ ಅದು 4-5 ಸಾವಿರ ಮತಗಳ ಅಂತರದಿಂದ ಮಾತ್ರ ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ತುರ್ವಿಹಾಳ 30,606 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಅಚ್ಚರಿ ತಂದಿದೆ. ಚುನಾವಣೆ ಚಾಣಕ್ಯ ಎಂದೇ ಬಿಂಬಿತರಾಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಲ್ಲೇ ಮೊಕ್ಕಾಂ ಹೂಡಿದ್ದರೂ ಅವರ ತಂತ್ರಗಾರಿಕೆ ವಿಫಲವಾಗಿದೆ. ಮೂಲ ಬಿಜೆಪಿ ಕಾರ್ಯಕರ್ತರನ್ನು ಪ್ರತಾಪಗೌಡ ಉಪೇಕ್ಷೆ ಮಾಡಿದ್ದು, 5ಎ ಕಾಲುವೆ ನಿರ್ವಣಕ್ಕೆ ನಡೆದ ಹೋರಾಟವನ್ನು ನಿರ್ಲಕ್ಷ್ಯ ಮಾಡಿದ್ದೂ ಬಿಜೆಪಿ ಸೋಲಿಗೆ ಕಾರಣವಾಗಿದೆ. ಇದರ ಎನ್​ಕ್ಯಾಷ್ ಮಾಡಿಕೊಂಡ ಕಾಂಗ್ರೆಸ್ ನಾಯಕರು, ಅಭ್ಯರ್ಥಿ ಗೆದ್ದರೆ ಕಾಲುವೆ ನಿರ್ಮಾಣದ ಭರವಸೆ ನೀಡಿದ್ದರಿಂದ ಹೆಚ್ಚಿನ ಬೆಂಬಲ ದೊರೆತಿದೆ.
ಚುನಾವಣೆ ಆರಂಭದಿಂದಲೂ ಕ್ಷೇತ್ರದಲ್ಲಿ ಪ್ರತಾಪಗೌಡ ಬಗ್ಗೆ ಮತದಾರರಲ್ಲಿದ್ದ ನಕಾರಾತ್ಮಕ ಅಭಿಪ್ರಾಯವನ್ನು ತೊಲಗಿಸುವಲ್ಲಿ ಬಿಜೆಪಿ ಹಿರಿಯ ನಾಯಕರು ಪ್ರಯತ್ನಿಸಲಿಲ್ಲ. ಪ್ರಧಾನಿ-ಸಿಎಂ ಸಾಧನೆ ಹಾಗೂ ಗೆದ್ದರೆ ಪ್ರತಾಪಗೌಡ ಸಚಿವರಾಗುತ್ತಾರೆ ಎಂಬುದನ್ನಷ್ಟೇ ಬಿಂಬಿಸಲು ಸೀಮಿತರಾದರು. ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ನಡೆಸುವ ಜತೆಗೆ ಜಿಲ್ಲೆಯ ನಾಯಕರಿಗೆ ಉಸ್ತುವಾರಿ ನೀಡಿ, ಶತಾಯಗತಾಯ ತುರ್ವಿಹಾಳರನ್ನು ಗೆಲ್ಲಿಸಲೇಬೇಕೆಂದು ಕಾರ್ಯಕರ್ತರಿಗೆ ಹುರಿದುಂಬಿಸಿದ್ದು, ಪಕ್ಷದ ನಾಯಕರು ಒಗ್ಗೂಡಿಸಿ ಕೆಲಸ ಮಾಡಿದ್ದು ಗೆಲುವಿಗೆ ಕಾರಣವಾಯಿತು. ಪ್ರತಾಪಗೌಡ ಬಗ್ಗೆ ಕ್ಷೇತ್ರದ ಜನರಲ್ಲಿದ್ದ ನಕಾರಾತ್ಮಕ ಅಭಿಪ್ರಾಯವನ್ನು ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದರು. ಕಳೆದ ಚುನಾವಣೆಯಲ್ಲಿ ಬಸನಗೌಡ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಅನುಕಂಪವನ್ನು ಪಡೆಯುವಲ್ಲಿ ಯಶಸ್ವಿಯಾದರು.
ಮತದಾರರಿಗೆ ಬೇಡವಾಗಿದ್ದ ಪ್ರತಾಪಗೌಡ:ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೂ ಇಲ್ಲಿ ಕಾಂಗ್ರೆಸ್ ಗೆಲುವಿಗಿಂತ ಕ್ಷೇತ್ರದ ಮತದಾರರಿಗೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಬೇಡವಾಗಿತ್ತು ಎಂಬ ಮಾತು ಬಲವಾಗಿ ಕೇಳಿಬರುತ್ತಿವೆ. ಅಚ್ಚರಿಯೆಂದರೆ, ಕಾಂಗ್ರೆಸ್​ಗೆ ಮುಖಂಡರ ಕೊರತೆಯಿರುವ ಪ್ರದೇಶಗಳಲ್ಲೂ ಆ ಪಕ್ಷಕ್ಕೆ ಮುನ್ನಡೆ ದೊರೆತಿದೆ. ಇದನ್ನು ನೋಡಿದಾಗ ಪ್ರತಾಪಗೌಡ ವಿರೋಧಿ ಅಲೆಯೇ ಸೋಲಿಗೆ ಪ್ರಮುಖ ಕಾರಣವಾಗಿದೆ.
ಅಧಿಕಾರ/ಹಣ ಬಲದ ಮುಂದೆ ಜನ ಮೇಲುಗೈ ಸಾಧಿಸಿದ್ದು, ಮಸ್ಕಿ ಕ್ಷೇತ್ರದ ಜನರು ಸ್ವಾಭಿಮಾನಿಗಳು ಎಂದು ತೋರಿಸಿಕೊಟ್ಟಿದ್ದಾರೆ. ಪ್ರತಾಪಗೌಡರ ನಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡ ಅನುಕಂಪ, ಕಾಂಗ್ರೆಸಿನ ವರ್ಚಸ್ಸು, ಮುಖಂಡರ ಒಗ್ಗಟ್ಟು ಪ್ರದರ್ಶನ ಗೆಲುವಿಗೆ ಕಾರಣವಾಗಿದೆ. ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ.
|ಬಸನಗೌಡ ತುರ್ವಿಹಾಳವಿಜೇತ ಕಾಂಗ್ರೆಸ್ ಅಭ್ಯರ್ಥಿ, ಮಸ್ಕಿ
ಬಹುತೇಕ ಕಡೆ ನಿರೀಕ್ಷೆಯಂತೆ ಮತಗಳು ಬಂದಿಲ್ಲ. ಮೂರು ಸಲ ಶಾಸಕನಾಗಿ ಅಭಿವೃದ್ಧಿ ಕೈಗೊಂಡಿದ್ದೆ. ಆಡಳಿತ ವಿರೋಧಿ ಅಲೆಯಿಂದ ಹಿನ್ನಡೆಯಾಗಿದೆ. ನಮ್ಮ ಪಕ್ಷದವರೇ ನಮ್ಮ ವಿರುದ್ಧ ಕೆಲಸ ಮಾಡಿದ್ದಾರೆ. ವಿಜಯೇಂದ್ರ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದರೂ ಹಿನ್ನಡೆಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮತದಾರರು ಬದಲಾವಣೆ ಬಯಸಿದ್ದಾರೆ.
|ಪ್ರತಾಪಗೌಡ ಪಾಟೀಲ್ಪರಾಜಿತ ಬಿಜೆಪಿ ಅಭ್ಯರ್ಥಿ, ಮಸ್ಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 8 =
Remember me
