ಪೀಣ್ಯ ದಾಸರಹಳ್ಳಿ:ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಾಸರಹಳ್ಳಿ ಜಿ. ಧನಂಜಯ ಗೌಡ ಬಾಗಲಗುಂಟೆ ವಾರ್ಡ್ ಹಾವನೂರು ಬಡಾವಣೆ, ಡಿಫೆನ್ಸ್ ಕಾಲನಿ, ಮಂಜುನಾಥ ನಗರ, ರಾಮಯ್ಯ ಬಡಾವಣೆ, ಭುವನೇಶ್ವರಿ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಧನಂಜಯ ಗೌಡ, ದಾಸರಹಳ್ಳಿ ಕ್ಷೇತ್ರದಾದ್ಯಂತ ಎಲ್ಲಿ ಹೋದರೂ ಉತ್ತಮ ಸ್ಪಂದನೆ ಸಿಗುತ್ತಿದೆ. ಜನರು ಈ ಬಾರಿ ಬದಲಾವಣೆ ಬಯಸಿದ್ದು, ನಿಮಗೆ ಮತ ನೀಡುತ್ತೇವೆ. ಹಾಲಿ ಶಾಸಕರು ಏನು ಕೆಲಸ ಮಾಡಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ:ಇನ್ನೂ ಸಿಕ್ಕಿಲ್ಲ RSS ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿ; 5 ಲಕ್ಷ ರೂ. ಬಹುಮಾನ ಘೋಷಿಸಿದ NIA!
ಶಾಸಕರು ಕೋವಿಡ್ ಹಾಗೂ ನೆರೆ ಹಾವಳಿ ಹೇಳಿಕೊಂಡು ಜನಸೇವೆಯನ್ನೇ ಮರೆತಿದ್ದಾರೆ. ಸಂಕಷ್ಟದಲ್ಲಿದ್ದ ಜನರಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಈ ಬಾರಿ ಜನ ಕಾಂಗ್ರೆಸ್​ಗೆ ಒಲವು ತೋರಿಸುತ್ತಿದ್ದಾರೆ ಎಂದ ಅವರು, ಈ ಚುನಾವಣೆಯಲ್ಲಿ ನನಗೆ ಪ್ರತಿಸ್ಪರ್ಧಿ ಬಿಜೆಪಿಯೇ ಹೊರತು ಜೆಡಿಎಸ್ ಅಲ್ಲ, ಕಾರಣ ಇಲ್ಲಿನ ಶಾಸಕ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಸುಳ್ಳು ಅಪಪ್ರಚಾರ ಮಾಡಿದ್ದಾರೆ. ಹೀಗಾಗಿಯೇ ನೂರಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.
ಪಾಂಡಿಚೆರಿ ಮಾಜಿ ಮುಖ್ಯಮಂತ್ರಿ ವೈತಿಲಿಂಗಂ, ಮಾಜಿ ನಗರಸಭೆ ಸದಸ್ಯ ನರಸಿಂಹಾಚಾರಿ, ಬಾಕ್ ಅಧ್ಯಕ್ಷ ಅನುಭವ ಜಗದೀಶ್, ವಾರ್ಡ್ ಅಧ್ಯಕ್ಷ ಜಗದೀಶ್ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷ ಎಬಿಬಿ ಮಂಜುನಾಥ್ ಹಾಗೂ ಸ್ಥಳೀಯ ಮುಖಂಡರು ಜತೆಯಲ್ಲಿದ್ದರು.
ಮೂಲಸೌಕರ್ಯಕ್ಕೆ ವಿಶೇಷ ಆದ್ಯತೆ: ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಭರವಸೆ

ಬೆಂಗಳೂರು ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯೇ ಭರವಸೆ: ಎಂ.ಕೃಷ್ಣಪ್ಪ ಪ್ರತಿಪಾದನೆ

ಆಂಬ್ಯುಲೆನ್ಸ್ ಪಲ್ಟಿ; ಮೂವರು ಮೃತ್ಯು, ಮೂವರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
