ಪೀಣ್ಯದಾಸರಹಳ್ಳಿ:ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ದಾಸರಹಳ್ಳಿ ಜಿ. ಧನಂಜಯ ಗೌಡ ಅವರು ಮಲ್ಲಸಂದ್ರ ವಾರ್ಡ್​ನಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ಈ ವೇಳೆ ಮಾತನಾಡಿದ ಧನಂಜಯ ಗೌಡ ಅವರು, ದಾಸರಹಳ್ಳಿ ಕ್ಷೇತ್ರದಾದ್ಯಂತ ಎಲ್ಲಿ ನೋಡಿದರೂ ಹದಗೆಟ್ಟ ರಸ್ತೆಗಳು ರಾರಾಜಿಸುತ್ತಿದೆ. ಇಲ್ಲಿನ ಶಾಸಕ 5 ವರ್ಷದ ಅವಧಿಯಲ್ಲಿ ಏನನ್ನೂ ಅಭಿವೃದ್ಧಿ ಮಾಡಿಲ್ಲ. ಮಲ್ಲಸಂದ್ರದ ಕೆಲವೊಂದು ಬಡಾವಣೆಗಳಲ್ಲಿ ನೀರಿನ ಅಭಾವವಿದ್ದು, ಇಲ್ಲಿನ ಯಾವುದೇ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸಿಲ್ಲ. ಅದಕ್ಕಾಗಿ ಜನರು ಕಾಂಗ್ರೆಸ್​ನತ್ತ ಒಲವು ತೋರಿದ್ದಾರೆ ಎಂದರು.
ಇದನ್ನೂ ಓದಿ:ಶಿವಮೊಗ್ಗ ಶಿಕಾರಿ, ಯಾರಿಗೆ ಜಯಭೇರಿ: ಯಡಿಯೂರಪ್ಪ ಸ್ಥಾನ ತುಂಬಲು ವಿಜಯೇಂದ್ರ ಸಜ್ಜು
ನಾನು ಶಾಸಕನಾದರೆ ಐದು ವರ್ಷಗಳಲ್ಲಿ ಮಲ್ಲಸಂದ್ರದ ಚಿತ್ರಣವನ್ನೇ ಬದಲಿಸುತ್ತೇನೆ. ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸಿ ಬಗೆಹರಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ಐದು ವರ್ಷಗಳ ಕಾಲ ಬರಿ ಉದ್ಘಾಟನೆಗಳನ್ನು ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ಜನರು ಅಭಿವೃದ್ಧಿ ಕಾಣದೆ ಕಂಗಾಲಾಗಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡಿರುವ ಶಾಸಕರಿಗೆ ಜನರು ಬುದ್ಧಿ ಕಲಿಸುತ್ತಾರೆ’ ಎಂದರು.
ಇದನ್ನೂ ಓದಿ:ಅಭಿವೃದ್ಧಿಗಾಗಿ ಮತ ನೀಡಿ: ಮಂಜುಳಾ ಲಿಂಬಾವಳಿ ಮನವಿ
ಈ ಸಂದರ್ಭದಲ್ಲಿ ಮಾಜಿ ನಗರಸಭಾ ಸದಸ್ಯ ಕೆಸಿ ಅಶೋಕ್​ ಹಾಗೂ ಬಿಬಿಎಂಪಿ ಮಾಜಿ ಸದಸ್ಯ ಕೆ. ನಾಗಭೂಷಣ್​ ಹಾಗೂ ಬ್ಲಾಕ್​ ಅಧ್ಯರು, ವಾರ್ಡ್​ ಅಧ್ಯರು, ಪಕ್ಷದ ಮುಖಂಡರು ಸ್ಥಳಿಯ ಗ್ರಾಮಸ್ಥರು ಕಾರ್ಯಕರ್ತರು ಉಪಸ್ಥಿತರಿದ್ದು ಬೆಂಬಲ ಸೂಚಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 13 =
Remember me
