ಬೆಂಗಳೂರು:“ಕಾಂಗ್ರೆಸ್(Congress)ಸರಕಾರಕ್ಕೆ ಯಾವುದೇ ಮಾನವೀಯತೆ ಉಳಿದ ಹಾಗಿಲ್ಲ! ಒಂದು ಕಡೆ ಕೊಟ್ಟ ಹಾಗೆ ಮಾಡುವುದು, ಮತ್ತೊಂದು ಕಡೆ ಅದನ್ನು ಕಸಿದುಕೊಳ್ಳುವುದು ಕಾಂಗ್ರೆಸ್‌ನ ಹಳೆ ಚಾಳಿ” ಎಂದು ಬಿಜೆಪಿ ಟ್ವೀಟ್​ನಲ್ಲಿ(Tweet)ಆರೋಪಿಸಿತ್ತು.
ಇದನ್ನೂ ಓದಿ:ಗೋವುಗಳನ್ನು ಏಕೆ ಕಡಿಯಬಾರದು ಎಂದು ಹೇಳಿದ್ದ ಪಶುಸಂಗೋಪನಾ ಸಚಿವ; ಮಾಜಿ ಸಿಎಂ ಕೆಂಡ…
“ಇದೀಗ ಹಾಲಿಗೆ ನೀಡುವ ಪ್ರೋತ್ಸಾಹಧನವನ್ನು ಕಡಿತಗೊಳಿಸಿ, ಹೈನುಗಾರರ ಮೇಲೆ ಬರೆ ಎಳೆದಿದೆ ಕಾಂಗ್ರೆಸ್ ಸರಕಾರ! ಈ ರೈತವಿರೋಧಿ ಆದೇಶವನ್ನು ಹಿಂಪಡೆದು ರೈತರ ಹಕ್ಕನ್ನು ಮರಳಿಸುವಂತೆ ನಾವು ಆಗ್ರಹಿಸುತ್ತೇವೆ” ಎಂದು ಟ್ವೀಟ್​ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿತ್ತು.
ಸದ್ಯ ಬಿಜೆಪಿ(BJP)ಮಾಡಿರುವ ಆರೋಪಕ್ಕೆ ಟ್ವೀಟ್​ ಮೂಲಕವೇ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, “ಬಿಜೆಪಿ ಹಾಗೂ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮನ್ಮೂಲ್ ಹಾಲು ಒಕ್ಕೂಟವು ಬೇಸಿಗೆಯ ಮೇವು ಕೊರತೆಯ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಹೆಚ್ಚುವರಿ ಪ್ರೋತ್ಸಾಹಧನ ನೀಡಿತ್ತು, ಮಳೆಗಾಲ ಶುರುವಾದ ಕಾರಣ ಅದನ್ನು ಹಿಂಪಡೆದಿದೆ. ಈ ಪ್ರೋತ್ಸಾಹಧನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಇದು ಒಕ್ಕೂಟದ ನಿರ್ಧಾರ” ಎಂದು ತಿಳಿಸಿದೆ.
ಇದನ್ನೂ ಓದಿ:ಗೋವುಗಳನ್ನು ಏಕೆ ಕಡಿಯಬಾರದು ಎಂದು ಹೇಳಿದ್ದ ಪಶುಸಂಗೋಪನಾ ಸಚಿವ; ಮಾಜಿ ಸಿಎಂ ಕೆಂಡ…
“ಬಿಜೆಪಿ ಇಂತಹ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುವ ಬದಲು 7 ತಿಂಗಳಿಂದ ಸರ್ಕಾರದ ಪ್ರೋತ್ಸಾಹಧನ ನೀಡದಿರುವುದೇಕೆ ಹೇಳಲಿ” ಎಂದು ಬಿಜೆಪಿಗೆ ಪ್ರಶ್ನೆಯೊಂದನ್ನು ನೀಡುವ ಮುಖೇನ ಕಾಂಗ್ರೆಸ್ ತಿರುಗೇಟು ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eleven =
Remember me
