ಬೆಂಗಳೂರು:ಏಕರೂಪ ನಾಗರಿಕ ಸಂಹಿತೆ ಜಾರಿ ಆಗಬೇಕು ಎನ್ನುವುದು ಅನೇಕ ಸಮಯದಿಂದ ಕೇಳಿ ಬರುತ್ತಿರುವ ಕೂಗು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಕಾಂಗ್ರೆಸ್​ ಪ್ರತಿಕ್ರಿಯೆ ನೀಡಲು ಹಿಂಜರಿದಿದೆ. ಕಾಂಗ್ರೆಸ್​ನ ಈ ನಡೆಯನ್ನು ಎಚ್ಚರಿಕೆಯ ‌ಹೆಜ್ಜೆ ಎಂದೇ ಕರೆಯಬಹುದು. ‘ಇದೊಂದು ಸೂಕ್ಷ್ಮ ವಿಚಾರ. ನಾಯಕರ ಜೊತೆ ಚರ್ಚೆ ನಡೆಸುತ್ತೇವೆ. ಕಾಂಗ್ರೆಸ್​ನ ಹೇಳಿಕೆಯಲ್ಲಿ ಯಾವುದೇ ಗೊಂದಲ ಆಗಬಾರದು. ಕಾಂಗ್ರೆಸ್ ನಿರ್ಣಯ ಒಂದೇ ಆಗಿರಬೇಕು’ ಎಂದು ಡಿ.ಕೆ ಶಿವಕುಮಾರ್​ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಹೈಕಮಾಂಡ್ ಸೂಚನೆ ಪಡೆದು ನಂತರ ಮಾತನಾಡಲು ಕಾಂಗ್ರೆಸ್​ ಚಿಂತನೆ ನಡೆಸಿದೆ.
‘ಏಕರೂಪ ನಾಗರಿಕ ಕಾಯ್ದೆ ಬಗ್ಗೆ ಈಗ ಡಿಬೇಟ್ ಬೇಡ. ನಾವು ಖಂಡಿತವಾಗಿ ಇದರ ಬಗ್ಗೆ ಮಾತನಾಡುತ್ತೇವೆ. ಇವತ್ತು ಎಲ್ಲ ಮಿಕ್ಸ್ ಮಾಡೋದು ಬೇಡ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ ಹಿಜಾಬ್ ವಿಚಾರವಾಗಿ ಕಾಂಗ್ರೆಸ್ ದ್ವಂದ್ವ ನಿಲುವು ತೆಗೆದುಕೊಂಡಿತ್ತು. ಇದರಿಂದ ಕಾಂಗ್ರೆಸ್​ಗೆ ಸಾಕಷ್ಟು ಮುಜುಗರವೂ ಆಗಿತ್ತು. ಜೊತೆಗೆ ವಿವಾದಕ್ಕೂ ಕಾರಣವಾಗಿತ್ತು. ಹಾಗಾಗಿ‘ ಈ ಬಾರಿ ಕಾಂಗ್ರೆಸ್ ನಾಯಕರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ,
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 16 =
Remember me
