ಕೊಪ್ಪಳ:ರಾಜ್ಯ ಮಾತ್ರವಲ್ಲ ದೇಶದಲ್ಲೂ ಕಾಂಗ್ರೆಸ್ ಕಥೆ ಮುಗಿದಿದೆ. ರಾಜ್ಯದಲ್ಲಂತೂ ಕಾಂಗ್ರೆಸ್​ ಎರಡು ಭಾಗವಾಗಿದೆ ಎಂಬುದಾಗಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾತನಾಡಿಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​. ಈಶ್ವರಪ್ಪ ಕಾಂಗ್ರೆಸ್​ ಕುರಿತು ಈ ರೀತಿಯಾಗಿ ಟೀಕೆ ಮಾಡಿದರು.
ರಾಜ್ಯ ಕಾಂಗ್ರೆಸ್​​ನಲ್ಲಿ ಇಬ್ಬರು ದೊಡ್ಡ ಸುಳ್ಳುಗಾರರು ಇದ್ದಾರೆ. ಅವರು ಲೆಕ್ಕ ಇಲ್ಲದಷ್ಟು ಸುಳ್ಳು ಹೇಳುತ್ತಿದ್ದಾರೆ. ಎಲ್ಲ ಕಡೆ ಗ್ರಾಮ ಪಂಚಾಯತ್​ನಲ್ಲಿ ಕಾಂಗ್ರೆಸ್​ನವರೇ ಗೆದ್ದಿದ್ದಾರೆ ಎಂದು ಹೇಳುತ್ತಿದ್ದಾರೆ. ಅಂಥವರನ್ನು ಇಲ್ಲಿಗೆ ಕರೆತಂದು ತೋರಿಸಬೇಕು ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಮೈಸೂರು ಮಹಾನಗರಪಾಲಿಕೆಯಲ್ಲಿನ ಮೇಯರ್ ಚುನಾವಣೆ ನಂತರ ಕಾಂಗ್ರೆಸ್ ಎರಡು ಭಾಗವಾಗಿದೆ. ಒಂದು ಕಡೆ ಸಿದ್ದರಾಮಯ್ಯ ಅವರು ರೆಸಾರ್ಟ್​ಗೆ ಹೋದರು, ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ಇದರಲ್ಲಿ ನಮ್ಮ ಪಾತ್ರ ಇಲ್ಲ ಎನ್ನುತ್ತಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಕಥೆ ಮುಗಿದಂತೆ ಎಂದು ಈಶ್ವರಪ್ಪ ಹೇಳಿದರು. ಕಾಂಗ್ರೆಸ್ ವಾಪಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆಗೆ ಅವಕಾಶ ಕೊಡುತ್ತಾರಂತೆ. ಹೇಳಿ ಇಂಥವರು ಬೇಕಾ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಗಂಡ ಮನೆಯಲ್ಲಿ ಇಲ್ಲವೆಂದು ಪ್ರಿಯತಮನನ್ನು ಕರೆಸಿಕೊಂಡ ಹೆಂಡತಿ! ಅಮೇಲಾಗಿದ್ದು ಏನು ಗೊತ್ತಾ?

ಮದ್ವೆಗೆ ಮನೆಯವ್ರು ಒಪ್ಲಿಲ್ಲ ಅಂತ ಪ್ರಿಯಕರ ನೇಣು ಹಾಕಿಕೊಂಡ; ಪ್ರೇಮಿ ಸತ್ತಿದ್ದಕ್ಕೆ ಊಟ ಬಿಟ್ಟ ಪ್ರೇಯಸಿ ಬೆಂಕಿ ಹಾಕಿಕೊಂಡು ಸತ್ತಳು..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 2 =
Remember me
