|ವಿ.ಕೆ.ರವೀಂದ್ರ/ವೀರೇಂದ್ರ ನಾಗಲದಿನ್ನಿಬಳ್ಳಾರಿ
ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕರು, ಪಕ್ಷದ ಭದ್ರಕೋಟೆಯಾಗಿದ್ದ ಬಳ್ಳಾರಿಯಿಂದ ಮತ್ತೊಮ್ಮೆ ರಾಜಕೀಯ ಪುನರ್ಜನ್ಮ ಕಾಣಲು ಶನಿವಾರ ಚುನಾವಣಾ ರಣಕಹಳೆ ಮೊಳಗಿಸಿದರು. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಮೊದಲ ಸಾರ್ವಜನಿಕ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನ ಬೆಂಬಲ ದೊರೆತಿದ್ದು, ಕೈ ನಾಯಕರ ಹುಮ್ಮಸ್ಸು ನೂರ್ಮಡಿಗೊಳಿಸಿದೆ. ರಾಹುಲ್ ಗಾಂಧಿ ಮೊದಲುಗೊಂಡು ‘ಇದು ರಾಜಕೀಯ ಕಾರಣಕ್ಕಾಗಿ ಅಲ್ಲ’ವೆಂದು ಎಲ್ಲರೂ ಪ್ರತಿಪಾದಿಸಿದರಾದರೂ, ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿ ಜನಾರ್ಶೀವಾದ ಬೇಡಿದರು.
ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಪಾದಯಾತ್ರೆ ಬಳ್ಳಾರಿ ತಲುಪುವ ಹೊತ್ತಿಗೆ ಒಂದು ಸಾವಿರ ಕಿ.ಮೀ. ಪೂರೈಸಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ಮೊದಲ ಸಾರ್ವಜನಿಕ ಸಮಾವೇಶ ಆಯೋಜಿಸಿ ಮತ್ತೊಂದು ದಾಖಲೆ ನಿರ್ವಿುಸಿದರು. ವಿವಿಧ ಜಿಲ್ಲೆಗಳಿಂದ ಬಂದಿದ್ದ ಮೂರು ಲಕ್ಷಕ್ಕೂ ಅಧಿಕ ಯಾತ್ರೆಗೆ ಬೂಸ್ಟ್ ನೀಡಿದರು. ಬಳ್ಳಾರಿಯೊಂದಿಗೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವಿನಾಭಾವ ರಾಜಕೀಯ ಸಂಬಂಧ ಹೊಂದಿದ್ದು, ರಾಹುಲ್ ಸಮಾವೇಶ ಮೂಲಕ ಗಾಂಧಿ ಕುಟುಂಬದ ಮೂರನೇ ತಲೆಮಾರಿನ ಭಾಷಣಕ್ಕೆ ಮುನ್ಸಿಪಲ್ ಮೈದಾನ ವೇದಿಕೆ ಸಾಕ್ಷಿಯಾಯಿತು. ಹಿಂದೊಮ್ಮೆ ಸೋನಿಯಾ ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದು, ಇಂದಿರಾ, ರಾಜೀವ್ ಗಾಂಧಿ ಚುನಾವಣೆ ರ್ಯಾಲಿಗಳಿಗೆ ಆಗಮಿಸಿದ್ದನ್ನು ಇದೇ ವೇಳೇ ನೆನಪಿಸಲಾಯಿತು.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್​ಟಿ ಜಾರಿ, ನೋಟು ಅಮಾನ್ಯೀಕರಣ, ಪಿಎಸ್​ಐ ನೇಮಕಾತಿ ಅಕ್ರಮ, ಶೇ.40 ಪರ್ಸೆಂಟೇಜ್ ಸೇರಿ ಬಿಜೆಪಿ ವೈಫಲ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ರಾಹುಲ್ ಗಾಂಧಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಕಲ್ಯಾಣ ಕರ್ನಾಟಕಕ್ಕೆ ವರವಾಗಿರುವ 371(ಜೆ) ಜಾರಿ ಮಾಡಿದ್ದು ಕಾಂಗ್ರೆಸ್. ಇದಕ್ಕೆ ಲೋಕಸಭೆಯಲ್ಲಿ ಬಿಜೆಪಿ ವಿರೋಧಿಸಿತ್ತು. ಆದರೂ ಬಿಲ್ ಪಾಸ್ ಮಾಡುವ ಮೂಲಕ ಈ ಭಾಗದ ಲಕ್ಷಾಂತರ ಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ದೊರೆಯಲು ಕಾರಣವಾಗಿದೆ ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಭಾಷಣದಲ್ಲಿ ಒತ್ತಿ ಹೇಳಿ ಜನರನ್ನು ಭಾವನಾತ್ಮಕವಾಗಿ ಸೆಳೆದರು. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಚತ್ತೀಸ್​ಗಡ ಸಿಎಂ ಭೂಪೇಶ ಬಾಘಲ್, ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್, ಜೈರಾಂ ರಮೇಶ್, ಕೆಪಿಸಿಸಿ ಪದಾಧಿಕಾರಿಗಳು, ಮೂರ್ನಾಲ್ಕು ಜಿಲ್ಲೆಗಳ ಕಾಂಗ್ರೆಸ್ ಪದಾಧಿಕಾರಿಗಳು, ಹಾಲಿ, ಮಾಜಿ ಶಾಸಕ, ಸಂಸದರು, ವಿಪ ಸದಸ್ಯರು ಸಮಾವೇಶಕ್ಕೆ ಸಾಕ್ಷಿಯಾದರು.
ಬಳ್ಳಾರಿಯೊಂದಿಗೆ ನನ್ನ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ. ನನ್ನ ತಾಯಿ ಇಲ್ಲಿಂದ ಲೋಕಸಭೆ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದಾರೆ. ನನ್ನ ಅಜ್ಜಿ ಇಂದಿರಾ ಗಾಂಧಿ ಹಲವು ಬಾರಿ ಬಂದಿದ್ದಾರೆ. ನಮ್ಮನ್ನು ಸದಾ ಕಾಲ ಬೆಂಬಲಿಸುತ್ತಿರುವ ನಿಮಗೆಲ್ಲ ಅನಂತ ಧನ್ಯವಾದಗಳು.
|ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಕೊಟ್ಟಿದ್ದು ಸೋನಿಯಾ ಗಾಂಧಿ. ಈ ಭಾಗದ ಜನರು ಅದನ್ನು ಮರೆಯಬಾರದು. ಬಿಜೆಪಿ ದೇಶದಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತುತ್ತಿದೆ. ಬೆಲೆ ಏರಿಕೆ, ನಿರಿದ್ಯೋಗ, ಭ್ರಷ್ಟಾಚಾರ ದಿಂದ ಜನರು ನಲುಗಿದ್ದಾರೆ. ಅದನ್ನು ತಡೆಯಲು ಭಾರತ್ ಜೋಡೋ ಯಾತ್ರೆ ಆರಂಭವಾಗಿದೆ. ರಾಜದಲ್ಲಿ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತಂದಲ್ಲಿ ಜನರು ನಮಗೆ ಶಕ್ತಿ ನೀಡಿದಂತಾಗಲಿದೆ.
|ಮಲ್ಲಿಕಾರ್ಜುನ ಖರ್ಗೆರಾಜ್ಯಸಭೆ ಪ್ರತಿಪಕ್ಷ ನಾಯಕ
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಷ್ಟದಲ್ಲಿದೆ. ಧರ್ಮದ ಆಧಾರದಲ್ಲಿ ಆಡಳಿತ ನಡೆಯುತ್ತಿದೆ. ಅಸಹಿಷ್ಣುತೆ ಹೆಚ್ಚುತ್ತಿದೆ. ಇಂಥ ಸಮಯದಲ್ಲಿ ರಾಹುಲ್ ಗಾಂಧಿ ದೊಡ್ಡ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಸ್ವಾತಂತ್ರ್ಯ ನಂತರ ನಡೆಯುತ್ತಿರುವ ಅತಿ ದೊಡ್ಡ ಯಾತ್ರೆ ಇದಾಗಿದೆ.
|ಅಶೋಕ ಗೆಹ್ಲೋಟ್ರಾಜಸ್ಥಾನ ಸಿಎಂ
ಕಾಂಗ್ರೆಸ್ ದೇಶಕ್ಕಾಗಿ ಏನೂ ಮಾಡಿಲ್ಲ ಎಂದು ಶ್ರೀರಾಮುಲು ಅನ್ನುತ್ತಾರೆ. ಆ ಪೆದ್ದನಿಗೆ ಇತಿಹಾಸ ಗೊತ್ತಿಲ್ಲ. ಅಂಥವರ ಜತೆ ರ್ಚಚಿಸಲು ನಾನು ಸಿದ್ಧನಿಲ್ಲ. ಬಳ್ಳಾರಿ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ರಾಹುಲ್ ಗಾಂಧಿ ಪಾದಯಾತ್ರೆಗೆ ಬೆದರಿ ಬಿಜೆಪಿಯವರು ಜನಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ರಾಜ್ಯ ಲೂಟಿ ಹೊಡೆದು, ಅಶಾಂತಿ ಸೃಷ್ಟಿಸುತ್ತಿರುವ ಬಿಜೆಪಿಯನ್ನು ಜನರು ಬರುವ ಚುನಾವಣೆಯಲ್ಲಿ ಅಧಿಕಾರದಿಂದ ಕಿತ್ತೆಸೆಯುವರು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ.
|ಸಿದ್ದರಾಮಯ್ಯಮಾಜಿ ಸಿಎಂ
ಇದು ಪಾದಯಾತ್ರೆಯಲ್ಲ. ಕ್ವಿಟ್ ಬಿಜೆಪಿ ಮೂವ್​ವೆುಂಟ್. ಬುದ್ಧ ಮನೆಬಿಟ್ಟ ಘಳಿಗೆ, ಕ್ರಿಸ್ತ ಶಿಲುಬೆಗೇರಿದ ಸಮಯ, ಬಾಬಾ ಸಾಹೇಬ್ ಅಂಬೇಡ್ಕರ್ ಜನಿಸಿದ ಶುಭ ಘಳಿಗೆಯಲ್ಲಿ ನಮ್ಮ ಯಾತ್ರೆ ಆರಂಭವಾಗಿದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದೊಂದು ಕ್ರಾಂತಿಯಾಗಲಿದ್ದು, ರಾಜ್ಯದಲ್ಲಿ ಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಗೆಲ್ಲಲಿದೆ.
|ಡಿ.ಕೆ.ಶಿವಕುಮಾರ್ಕೆಪಿಸಿಸಿ ಅಧ್ಯಕ್ಷ
ಮಹಿಳೆ ಸಾವು:ಬಳ್ಳಾರಿ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ್ದ ಗದಗ ಮೂಲದ ಮಾಲಂಬಿ (40)ಎಂಬ ಮಹಿಳೆ ಹೃದಯಾಘಾತದಿಂದ ನಿಧನರಾದರು. ಸಮಾವೇಶ ಮುಗಿಸಿಕೊಂಡು ವಾಪಸ್ ಬಸ್ಸಿನಲ್ಲಿ ತೆರಳುವಾಗ ಹೃದಯಾಘಾತವಾಗಿದೆ.
ಕನಕ ದುರ್ಗೆಗೆ ಖಡ್ಗ ಅರ್ಪಣೆ:ಬಳ್ಳಾರಿ ಅಧಿದೇವತೆ ಕನಕ ದುರ್ಗೆದೇವತೆಗೆ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಖಡ್ಗ ಅರ್ಪಿಸಿದರು. ರಾಹುಲ್​ಗೆ ಭಾರತ್ ಜೋಡೋ ಯಾತ್ರೆಯ ಭಾವಚಿತ್ರ ಮತ್ತು ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥದ ಸ್ಮರಣಿಕೆಯನ್ನು ರಾಜ್ಯದ ನಾಯಕರು ಕರ್ನಾಟಕದ ಪರ ಉಡುಗೊರೆ ನೀಡಿದರು.
ಕರ್ನಾಟಕದಲ್ಲಿ ನೌಕರಿ ಮಾರಾಟಕ್ಕಿವೆ:ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳು ಮಾರಾಟಕ್ಕಿದ್ದು, ಪ್ರತಿ ಉದ್ಯೋಗಕ್ಕೂ ಇಂತಿಷ್ಟು ದುಡ್ಡು ಕೊಡಬೇಕು. ಹೀಗಾಗಿ ಯುವಕರು ಉದ್ಯೋಗ ಪಡೆಯುವ ಭರವಸೆ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೊದಲು ಇಷ್ಟು ದೊಡ್ಡ ಪಾದಯಾತ್ರೆ ನಡೆಸುವುದು ಸುಲಭವಲ್ಲ ಎಂದುಕೊಂಡಿದ್ದೆ. ಮಹಿಳೆಯರು, ರೈತರು, ಯುವಕರು ನಮ್ಮ ಜತೆ ಹೆಜ್ಜೆ ಹಾಕಿದಾಗ ನಮಗೆ ಮುನ್ನಡೆಯಲು ಶಕ್ತಿ ದೊರೆಯುತ್ತಿದೆ. ಪಾದಯಾತ್ರೆಯಲ್ಲಿ ಮಹನೀಯರ ತತ್ವಗಳ ದರ್ಶನವಾಗುತ್ತಿದೆ ಎಂದರು.
ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!
ಕ್ರಿಮಿನಲ್ ಅಂದ್ಕೊಂಡು ಉದ್ಯಮಿಯ ಬಂಧನ; ಪತ್ನಿಯನ್ನು ಭಾರತಕ್ಕೆ ಕಳಿಸಿ ಪತಿಯನ್ನು ವಶಕ್ಕೆ ಪಡೆದ ಪೊಲೀಸ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 19 =
Remember me
