ಬೆಂಗಳೂರು:ಖಾಸಗಿ ವಾಹಿನಿಯ ನಿರೂಪಕ ರಾಹುಲ್ ಶಿವಶಂಕರ್ ಸಾರ್ವಜನಿಕರ ಶಾಂತಿ ನೆಮ್ಮದಿ ಹಾಗೂ ಕೋಮು ಸೌಹಾರ್ದತೆ ಧಕ್ಕೆ ತರುವ ದುರುದ್ದೇಶದಿಂದ ಟ್ವೀಟ್​​ ಮಾಡಿದ್ದಾರೆಂದು ಪೊಲೀಸ್​ ಆಯುಕ್ತರ ಬಳಿ ಕರ್ನಾಟಕ ಪ್ರದೇಶ ಕಾಂಗ್ರೆಸ್​​ ಸಮಿತಿ, ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗ, ದೂರು ಸಲ್ಲಿಕೆ ಮಾಡಲಾಗಿದೆ.
ರಾಹುಲ್ ಶಿವಶಂಕರ್​​ ಟ್ವೀಟ್​​ನಲ್ಲಿ ಏನಿದೆ?:ಕಾಂಗ್ರೆಸ್ ಕರ್ನಾಟಕ ರಾಜ್ಯ ಸರ್ಕಾರವು ತನ್ನ ಬಜೆಟ್‌ನಲ್ಲಿ 330 ರೂ. ಕೋಟಿಗಳನ್ನು ಮೀಸಲಿಟ್ಟಿದೆ. ವಕ್ಫ್ ಆಸ್ತಿಯ ಅಭಿವೃದ್ಧಿ, ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಮತ್ತು ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ. ಕರ್ನಾಟಕ ದತ್ತಿ (ಮುಜರಾಯಿ) ಇಲಾಖೆಯಿಂದ ನಿಯಂತ್ರಿಸಲ್ಪಡುವ 400 ‘ಎ & ಬಿ’ ವರ್ಗದ ದೇವಸ್ಥಾನಗಳಿಗೆ ಹಿಂದೂ ಭಕ್ತರಿಂದ ವಾರ್ಷಿಕ ಸರಾಸರಿ 450 ಕೋಟಿ ರೂಪಾಯಿ ಮೌಲ್ಯದ ದೇಣಿಗೆಯನ್ನು ಸರ್ಕಾರವು ಜೇಬಿಗಿಳಿಸುತ್ತಿದೆ. ಹಿಂದೂ ದೇವಾಲಯಗಳನ್ನು ರಾಜ್ಯದ ನಿಯಂತ್ರಣದಿಂದ ಮುಕ್ತಗೊಳಿಸುವ ಯಾವುದೇ ಮಸೂದೆಯನ್ನು ಅದು ವಿರೋಧಿಸುತ್ತದೆ.
Rs 330 crores have been earmarked by Cong Karnataka state government in its budgetfor development of wakf property, for construction of Haj Bhavan in Mangaluru and Christian community development.
This is a state where the government pockets on an average Rs 450 crores worth…pic.twitter.com/MqWLNrQzji
— Rahul Shivshankar (@RShivshankar)February 16, 2024

ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ನಿರೂಪಕ ರಾಹುಲ್ ಶಿವಶಂಕರ್ ಕುರಿತಾಗಿ ದೂರಿನಲ್ಲಿ ಏನಿದೆ?: 2024 ಫೆಬ್ರವರಿ 16ರಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವಾಹಿನಿವೊಂದರ ನಿರೂಪಕರಾಗಿರುವ ರಾಹುಲ್ ಶಿವಶಂಕರ, ಕರ್ನಾಟಕ ಸರ್ಕಾರವು 330 ಕೋಟಿ ಹಣವನ್ನು ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳಿಗೆ ಮೀಸಲಿಟ್ಟಿದೆ ಎಂದು ತಪ್ಪು ಮಾಹಿತಿ ನೀಡಿದೆ ಎಂದು ಪೋಸ್ಟ್​​ ಮಾಡಿದ್ದಾರೆ. ಈ ಪೋಸ್ಟನ್ನು ಸಾರ್ವಜನಿಕರ ಶಾಂತಿ ನೆಮ್ಮದಿ ಹಾಗೂ ಕೋಮು ಸೌಹಾರ್ದತೆ ಧಕ್ಕೆ ತರುವ ದುರುದ್ದೇಶದಿಂದ ಟ್ವೀಟ್​ ಮಾಡಿರುತ್ತಾರೆ.
ಮೇಲಿನ ಬರಹ ಸಂಪೂರ್ಣವಾಗಿ ಸುಳ್ಳು ಮಾಹಿತಿಯಿಂದ ಕೂಡಿದ್ದು ಎರಡು ಸಮುದಾಯಗಳ ನಡುವೆ ದ್ವೇಷ ಮೂಡಿಸುವ ದೃಶ್ಯದಿಂದ ಪೋಸ್ಟ್ ಮಾಡಲಾಗಿರುತ್ತದೆ. ರಾಜ್ಯ ಸರ್ಕಾರದ ಕುರಿತು ಹಿಂದೂ ಸಮುದಾಯದಲ್ಲಿ ದ್ವೇಷ ಭಾವನೆ ಮೂಡಿಸಲು ಟೀಟ್ ಮಾಡಿರುವ ರಾಹುಲ್ ಶಿವಶಂಕರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕೆಂದು ಕೋರುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿ ದೂರು ದಾಖಲಿಸಿದೆ.

ಆದರೆ ಈ ಕುರಿತಾಗಿ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಾರಾ?  ಈ ಕುರಿತಾಗಿ ಕ್ರಮ ಕೂಗೊಳ್ಳುತ್ತಾರ ಎನ್ನುವ ಮಾಹಿತಿ ತಿಳಿದುಬರಬೇಕಿದೆ.
ನಿನ್ನೆ ಬಜೆಟ್​ನಲ್ಲಿ ಸುಳ್ಳು ಸುದ್ದಿ ತಡೆಗಟ್ಟಲು ಐಟಿಬಿಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ಶೋಧನಾ ತಂಡ ಹಾಗೂ ವಿಶೇಷ ಕೋಶ ರಚನೆ ಮಾಡಲಾಗುವುದು. ಡೀಫ್​ ಫೇಕ್​​ ಹಾಗೂ ಸೈಬರ್ ಕ್ರೈಂ ತಡೆಗೆ 43 ಹೊಸ ಪೊಲೀಸ್​ ಸಿಇಎನ್​ ಠಾಣೆ ಆರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಬೆನ್ನಲ್ಲೆ ಕಾಂಗ್ರೆಸ್​​ ದೂರು ದಾಖಲಾಗಿದೆ.
‘ದಂಗಲ್’ ನಟಿ ಸುಹಾನಿ ಭಟ್ನಾಗರ್ ನಿಧನ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − eight =
Remember me
