ಬೆಂಗಳೂರು :ಗೋವಿಂದರಾಜನಗರ ಕ್ಷೇತ್ರದ ಮಾಜಿ ಶಾಸಕರು, ಯುವ ನಾಯಕ ಶ್ರೀ ಪ್ರಿಯಾ ಕೃಷ್ಣ ಅವರು ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಜನ್ಮದಿನದ ಪ್ರಯುಕ್ತ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ, ಕುಟುಂಬ ಸದಸ್ಯರೊಂದಿಗೆ ಕೇಕ್‌ ಕತ್ತರಿಸುವ ಮೂಲಕ ಪ್ರಿಯಾ ಕೃಷ್ಣ ಅವರು ಜನ್ಮ ದಿನ ಆಚರಿಸಿಕೊಂಡರು. ಬಳಿಕ, ಇವರ ಕಛೇರಿ ಮತ್ತು ನಿವಾಸದ ಮುಂದೆ ಹುಟ್ಟು ಹಬ್ಬ ಆಚರಿಸಲು ಜಮಾಯಿಸಿದ್ದ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರನ್ನು ಭೇಟಿ ಮಾಡಿ, ಅವರು ತಂದ ಬೃಹತ್‌ ಗಾತ್ರದ ತರಹೇವಾರಿ ಕೇಕ್‌ಗಳನ್ನು ಕತ್ತರಿಸಿ ಜನುಮ ದಿನದ ಸಂಭ್ರಮಾಚರಣೆ ಮಾಡಿದರು.

ಪ್ರಿಯಾ ಕೃಷ್ಣ ಅಭಿಮಾನಿಗಳು ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಹೂ ಗುಚ್ಛ ನೀಡಿ ಶುಭ ಹಾರೈಸಿದರು. ಈ ನಡುವೆ ಕೆಲವರು ನೆಚ್ಚಿನ ನಾಯಕನ ಜೊತೆ ಸೆಲ್ಫೀ, ಫೋಟೋ ಕ್ಲಿಕ್ಕಿಸಿಕೊಳ್ಳುವುದನ್ನು ಮರೆಯಲಿಲ್ಲ.

ಚುನಾವಣೆಯ ಪ್ರಯುಕ್ತ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ಮತಬೇಟೆಯಲ್ಲಿ ಬ್ಯೂಸಿಯಾಗಿರುವ ಯುವ ನಾಯಕ ಪ್ರಿಯಾ ಕೃಷ್ಣ ಅವರಿಗೆ ಇಂದು, ಕುಟುಂಬದವರು, ಸ್ನೇಹಿತರು, ಆಪ್ತರು, ಬೆಂಬಲಿಗರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪುರವೇ ಹರಿದು ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
