ಬೆಂಗಳೂರು:ನಮಗೆ 136 ಶಾಸಕರ ಬಲವಿದೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ನವರ ಕೊಬ್ಬು, ಅಹಂಕಾರವನ್ನು ಕೇಸರಿ ಪಡೆ ಹೋರಾಟದ ಕಿಚ್ಚು ಕರಗಿಸಿದೆ. ದೆಹಲಿಗೆ ತೆರಳಿದ್ದ ಕಾಂಗ್ರೆಸ್ ನಾಯಕರು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅಣಕವಾಡಿದರು.
ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ರಾಜ್ಯ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವೈಫಲ್ಯಗಳ ವಿರುದ್ಧ ಬಿಜೆಪಿ ಹೋರಾಟ ಜನರ ಅಭಿಪ್ರಾಯಗಳಾಗಿ ಪರಿವರ್ತನೆಯಾಗಿದೆ. ಇದರಿಂದಾಗಿ ಕಾಂಗ್ರೆಸ್ ನವರಿಗೆ ಅಸ್ಥಿರತೆ ಭಾವನೆ ಕಾಡಲಾರಂಭಿಸಿದೆ. ವಾತಾವರಣ ಬದಲು ಮಾಡಿದ ಶ್ರೇಯಸ್ಸು ಪಕ್ಷದ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಪ್ರಶಂಸಿಸಿದರು.
ಮಹರ್ಷಿ ವಾಲ್ಮೀಕಿ ಹಾಗೂ ಮುಡಾದಲ್ಲಿ ನಿವೇಶನ ವಂಚಿತ ದಲಿತರ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಿದೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಸಿದ್ದರಾಮಯ್ಯ ಬಹಳ ದಿನ ಉಳಿಯರು. ಸರ್ಕಾರದ ಭವಿಷ್ಯದ ಬಗ್ಗೆ ಕಾಂಗ್ರೆಸ್ ಶಾಸಕರಲ್ಲಿ ಸಂದೇಹ ಶುರುವಾಗಿದೆ. ಕೇಸರಿ ಪಡೆ ಹೋರಾಟದ ಕಿಚ್ಚಿಗೆ ಕಾಂಗ್ರೆಸ್ ಸರ್ಕಾರ ತತ್ತರಿಸಿದೆ ಎಂಬ ಅಭಿಪ್ರಾಯವನ್ನು ಆರ್.ಅಶೋಕ್ ವ್ಯಕ್ತಪಡಿಸಿದರು.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧ ನಿಗಮದ ಅವ್ಯವಹಾರ, ಮುಡಾ ನಿವೇಶನಗಳ ಹಂಚಿಕೆ ಅಕ್ರಮ ವಿಷಯಗಳು ಈಗ ಪ್ರತಿಪಕ್ಷ ಬಿಜೆಪಿಯದಲ್ಲ, ಜನರ ಸ್ವತ್ತಾಗಿದೆ. ಇದು ಮಿಸ್ಟರ್ ಕ್ಲೀನ್ ಸಿದ್ದರಾಮಯ್ಯ ಅವರನ್ನು‌ ಕಂಗೆಡಿಸಿದೆ. ಮಾಧ್ಯಮದವರು ಮುಡಾ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೂ ನೀವು ಬಿಜೆಪಿಯವರಾ ? ಎಂದು ಮರು ಪ್ರಶ್ನಿಸುವ ಮೂಲಕ ತಮ್ಮ ಹತಾಶೆ ಹೊರ ಹಾಕುತ್ತಿದ್ದಾರೆ.
ಸದನದ ಒಳ-ಹೊರಗೆ ಬಿಜೆಪಿಯ ಪ್ರಬಲ ಹೋರಾಟವು‌ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಡಿದೆ. ಸದನದೊಳಗೆ ಬಹುತೇಕ ಮಂತ್ರಿಗಳು ಬೆಂಬಲಕ್ಕೆ ನಿಲ್ಲದ ಕಾರಣ ಚರ್ಚೆಗೆ ಅವಕಾಶ ಕೊಡದೆ ಸಿದ್ದರಾಮಯ್ಯ ಪಲಾಯನ ಮಾಡಿದರು.
ಸರ್ಕಾರವನ್ನು ಅಸ್ಥಿರಗೊಳಿಸಲು ನಾವು ಯಾರೂ ಪ್ರಯತ್ನಿಸುತ್ತಿಲ್ಲ. ಕಾಂಗ್ರೆಸ್ ನ ಯಾವೊಬ್ಬ ಶಾಸಕರನ್ನು ರೆಸಾರ್ಟ್ ನಲ್ಲಿ ಕೂಡಿ ಹಾಕಿಲ್ಲ. ಗ್ಯಾರಂಟಿಗಳ ವೈಫಲ್ಯ, ಅಭಿವೃದ್ಧಿ ಸ್ಥಗಿತ, ಭ್ರಷ್ಟಾಚಾರ ಪ್ರಕರಣಗಳಿಂದ ಆ ಪಕ್ಷದ ಶಾಸಕರು ರೋಸಿ ಹೋಗಿದ್ದಾರೆ. ಮುಡಾ ಅಕ್ರಮದ ಬಗ್ಗೆ ಹೈಕೋರ್ಟ್ ಮತ್ತೆ ಆ.29ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ದಿನಕ್ಕೊಂದು ದಾಖಲೆಗಳು ಹೊರ ಬರುತ್ತಿರುವ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡಲಾರಂಭಿಸಿದೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fourteen =
Remember me
