ತುಮಕೂರು:ಆಡಳಿತಾರೂಢ ಕಾಂಗ್ರೆಸ್​ ಪಕ್ಷ ಸಿದ್ದಗಂಗಾ ಮಠದ 10 ಕೋಟಿ ರೂ. ಅನುದಾನ ಸೇರಿದಂತೆ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ 20 ಕೋಟಿ ರೂ. ಅನುದಾನವನ್ನು ತಡೆಹಿಡಿದಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಆರೋಪಿಸಿದ್ದಾರೆ.
ಈ ಕುರಿತು ಮಾತಾನಾಡಿದ್ದ ಅವರು, ಹಾಸ್ಟೆಲ್ ನಿರ್ಮಾಣಕ್ಕೆಂದು ಬಿಜೆಪಿ ಸರ್ಕಾರವು ತನ್ನ ಅವಧಿಯಲ್ಲಿ ಸಿದ್ದಗಂಗಾ ಮಠದಲ್ಲಿ ಹಾಸ್ಟೆಲ್​ ನಿರ್ಮಾಣಕ್ಕೆಂದು 10 ಕೋಟಿ ರೂ. ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ 20 ಕೋಟಿ ರೂ.ಅನುದಾನವನ್ನು ಕಾಂಗ್ರೆಸ್​ನವರು ತಡೆಹಿಡಿದಿದ್ದಾರೆ. ಸಿದ್ದಗಂಗಾ ಮಠದ ಅನುದಾನವನ್ನು ಶಾಶ್ವತವಾಗಿ ತಡೆ ಹಿಡಿಯುವ ಧಮ್ಮು ಸರ್ಕಾರಕ್ಕೆ ಇಲ್ಲ, ಅನುದಾನ ಬಿಡುಗಡೆ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಜಂತರ್​ ಮಂತರ್​ ಹೊರತುಪಡಿಸಿ ಕುಸ್ತಿಪಟುಗಳು ಬೇರೆಡೆ ಪ್ರತಿಭಟಿಸಲಿ: ದೆಹಲಿ ಪೊಲೀಸ್​
ಭ್ರಷ್ಟಾಚಾರ ಆಗಿದ್ದರೆ ತಡೆಹಿಡಿಯಲಿ. ಅದನ್ನು ಬಿಟ್ಟು ಅನಾವಶ್ಯಕವಾಗಿ ತಡೆಹಿಡಿಯಬಾರದು. ಆದರೂ ಮಠದ ಅನುದಾನದ ತಡೆ ತೆರವು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಾಂಗ್ರೆಸ್​ನವರು ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡದೇ ಜನರಿಗೆ ಮೋಸ ಮಾಡುತಿದ್ದಾರೆ. ರಾಜ್ಯದ ಜನತೆ ಮೋಸ ಹೋಗಿದ್ದಾರೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​ಗೆ ಧಮ್ ಇರಲಿಲ್ಲ. ಸುಳ್ಳು ಭರವಸೆ ಕೊಟ್ಟು ಹಿಂದಿನ ಬಾಗಿಲಿನಿಂದ ಚುನಾವಣೆವನ್ನು ಗೆದ್ದಿದ್ದಾರೆ. ಕಾಂಗ್ರೆಸ್​ನವರು ಹೇಳಿದಂತೆ ನಾನೂ ಹಾಗೂ ನಮ್ಮ ಪಕ್ಷದ ಯಾವ ಕಾರ್ಯಕರ್ತರು 200 ಯೂನಿಟ್​ವರೆಗೆ ಕರೆಂಟ್ ಬಿಲ್ ಕಟ್ಟಲ್ಲ ಎಂದರು.
ಡಿಕೆಶಿವಕುಮಾರ್​ ಮನೆ ಯಜಮಾನಿಗೆ 2 ಸಾವಿರ ರೂ. ಕೊಡುತ್ತೇನೆ ಅಂತ ಹೇಳಿದ್ದರು. ಈಗ ಆ ಹಣವನ್ನು ಸೊಸೆಗೆ ಹಾಕಬೇಕೋ ಅಥವಾ ಅತ್ತೆಗೆ ಹಾಕಬೇಕೋ ಎನ್ನುವ‌ ಗೊಂದಲ ಶುರುವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್​ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
