| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯದಲ್ಲಿ ದಕ್ಷ ಆಡಳಿತ ನೀಡುವ ಸಲುವಾಗಿ ಸಚಿವರ ಕಾರ್ಯವೈಖರಿಯನ್ನು ಮೌಲ್ಯಮಾಪನಕ್ಕೆ ಒಳಪಡಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿರುವುದು ಪಕ್ಷದ ವಲಯದಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿದೆ.
ರಾಜ್ಯ ಸರ್ಕಾರಕ್ಕೆ ಆರು ತಿಂಗಳು ತುಂಬುತ್ತಿದ್ದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಚಿವರ ಖಾತೆಯಲ್ಲಿ ನಡೆದಿರುವ ಪ್ರಗತಿ, ಕಾರ್ಯವೈಖರಿಯನ್ನು ಹೈಕಮಾಂಡ್ ಪರಿಶೀಲನೆ ಮಾಡಲಿದೆ. ಆ ಮೂಲಕ ಸುಧಾರಣೆಗೆ ಒತ್ತು ನೀಡಲಿದೆ ಅದರಿಂದ ಆಡಳಿತ ದಿಕ್ಕು ತಪು್ಪವುದಿಲ್ಲವೆಂಬುದು ಹೈಕಮಾಂಡ್ ಉದ್ದೇಶವೆಂದು ಮೂಲಗಳು ಖಚಿತಪಡಿಸಿವೆ. ಸರ್ಕಾರದ ಇಮೇಜ್​ಗೆ ಎಲ್ಲಿಯೂ ಧಕ್ಕೆ ಬರಬಾರದು, ಪ್ರತಿಪಕ್ಷಗಳು ಎಷ್ಟೇ ಪ್ರಯತ್ನ ಮಾಡಿದರೂ ಸರ್ಕಾರ ಹಳಿ ತಪ್ಪಬಾರದು ಎಂಬುದು ಎಐಸಿಸಿ ಉದ್ದೇಶವಾಗಿದೆ. ಕರ್ನಾಟಕ ಮಾದರಿಯನ್ನು ಮುಂದಿನ ಲೋಕಸಭೆಯ ತನಕ ಕಾಪಾಡುವುದು ದೊಡ್ಡ ಜವಾಬ್ದಾರಿಯಾಗಿದೆ.
ನವೆಂಬರ್ ವೇಳೆಗೆ ರಾಜ್ಯದಲ್ಲಿ ರಾಜಕೀಯ ಸಂಚಲನ ಉಂಟಾಗಲಿದೆ ಎಂಬ ವದಂತಿಗಳಿಗೆ ಬ್ರೇಕ್ ಹಾಕುವ ಮೂಲಕ ಒಗ್ಗಟ್ಟು ಕಾಪಾಡಿಕೊಳ್ಳುವ ದೊಡ್ಡ ಜವಾಬ್ದಾರಿ ಕಾಂಗ್ರೆಸ್ ಮುಂದೆ ಇದೆ. ಆದ್ದರಿಂದಲೇ ಸಚಿವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹೈಕಮಾಂಡ್ ತಂತ್ರಗಾರಿಕೆಯೂ ಆಗಿದೆ ಎಂದೇ ಪಕ್ಷದ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
ಗುಂಪು ಗುಂಪಲ್ಲಿ ಚರ್ಚೆ:ಸಚಿವ ಸಂಪುಟದ ಎಲ್ಲ 34 ಸದಸ್ಯರನ್ನು ಒಂದೇ ಬಾರಿ ದೆಹಲಿಗೆ ಕರೆಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್​ಸಿಂಗ್ ಸುರ್ಜೆವಾಲಾ ಪಾಠ ಮಾಡುವ ಕಾರ್ಯಕ್ರಮ ಇತ್ತು. ಆದರೆ ರಾಹುಲ್ ಅಮೆರಿಕಾ ಪ್ರವಾಸದಿಂದ ಹಿಂತಿರುಗುವುದು ಒಂದು ದಿನ ತಡವಾಗಿದ್ದರಿಂದ ರದ್ದಾಗಿತ್ತು. ಈಗ ಒಂದೇ ಬಾರಿ ಎಲ್ಲ ಸಚಿವರನ್ನು ದೆಹಲಿಗೆ ಕರೆಸಿಕೊಳ್ಳುವ ಉದ್ದೇಶ ಕೈಬಿಡಲಾಗಿದೆ. ಒಮ್ಮೆಗೆ ಮೂರು ಅಥವಾ ನಾಲ್ಕು ಸಚಿವರನ್ನು ಮಾತ್ರ ಕರೆಸಿಕೊಂಡು ಚರ್ಚೆ ನಡೆಸಲಾಗುತ್ತದೆ. ಈ ಕಾರ್ಯ ವಿಧಾನಮಂಡಲ ಅಧಿವೇಶನ ಮುಗಿದ ಕೂಡಲೇ ನಡೆಯಲಿದೆ. ಆ ಸಂದರ್ಭದಲ್ಲಿ ಸಚಿವರಿಗೆ ಒಂದಷ್ಟು ಹೊಣೆಗಾರಿಕೆ ನೀಡಿ ಕಳುಹಿಸಲಾಗುತ್ತದೆ.
ಹೈಕಮಾಂಡ್ ಹಿಡಿತ:ಕಾಂಗ್ರೆಸ್ ಹೈಕಮಾಂಡ್ ದುರ್ಬಲವಲ್ಲ, ಈಗ ಚೇತರಿಸಿಕೊಂಡಿದೆ. ಹಿಂದಿನ ಮಟ್ಟಕ್ಕೆ ಬರುತ್ತಿದೆ ಎಂಬ ಸಂದೇಶವನ್ನು ಈ ರೀತಿಯ ಪ್ರಯತ್ನಗಳ ಮೂಲಕ ಇಡೀ ದೇಶಕ್ಕೆ ಸಾರುವುದು ವರಿಷ್ಠರ ರಾಜಕೀಯ ತಂತ್ರಗಾರಿಕೆಯೂ ಆಗಿದೆ.
ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ:ಸಚಿವರ ಕಾರ್ಯವೈಖರಿಯ ಪ್ರಗತಿ ಪರಿಶೀಲನೆ ನವದೆಹಲಿಯಲ್ಲಿ ನಡೆಸಲಾಗುತ್ತದೆ. ಆರು ತಿಂಗಳು ಹನಿಮೂನ್ ಅವಧಿ ಎಂದು ಹೈಕಮಾಂಡ್ ಲೆಕ್ಕ ಹಾಕಿದೆ. ಆರು ತಿಂಗಳ ನಂತರ ಪ್ರತಿ ಮೂರು ತಿಂಗಳಿಗೊಮ್ಮೆ ನವದೆಹಲಿಗೆ ಕರೆಸಿಕೊಂಡು ಮೌಲ್ಯ ಮಾಪನ ಮಾಡಲಾಗುತ್ತದೆ. ಬೆಂಗಳೂರಿಗೆ ಬಂದು ಸಚಿವರನ್ನು ಕರೆಸಿಕೊಳ್ಳುವುದು ತಪು್ಪಸಂದೇಶಕ್ಕೆ ಕಾರಣವಾಗಬಾರದೆಂದು ಒಬ್ಬೊಬ್ಬರನ್ನೇ ದೆಹಲಿಗೆ ಕರೆಸಿಕೊಳ್ಳಲಾಗುತ್ತದೆ. ಸಚಿವರು ಏನೇನು ಪ್ರಗತಿ ಸಾಧಿಸಿದ್ದಾರೆ, ಜಿಲ್ಲಾ ಪ್ರವಾಸ ಎಷ್ಟು ಮಾಡಿದ್ದಾರೆ, ಕೆಡಿಪಿ ಸಭೆಗಳನ್ನು ಎಷ್ಟು ಮಾಡಲಾಗಿದೆ, ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿರುವುದು, ಲೋಕಸಭಾ ಚುನಾವಣೆಯ ಸಿದ್ಧತೆ ಹೀಗೆ ವಿವಿಧ ವಿಷಯಗಳಲ್ಲಿ ಮಾಹಿತಿ ಪಡೆಯಲಾಗುತ್ತದೆ. ಕಳಪೆ ಸಾಧನೆ ಮಾಡಿದ್ದರೆ ಇನ್ನಷ್ಟು ಸುಧಾರಣೆಗೆ ಸೂಚನೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಸಚಿವರ ಮೌಲ್ಯಮಾಪನಕ್ಕೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಅವರನ್ನು ಕರೆಸುವುದಿಲ್ಲ. ಎಐಸಿಸಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಸಚಿವರ ಜತೆ ಚರ್ಚೆ ಮಾಡಲಿದ್ದಾರೆ. ಆದರೆ ಮುಖ್ಯಮಂತ್ರಿ ಅವರಿಂದ ಹಾಗೂ ಕೆಪಿಸಿಸಿ ಅಧ್ಯಕ್ಷರಿಂದ ಮಾಹಿತಿ ಪಡೆಯಲಿದ್ದಾರೆ.
ಸಚಿವರ ಮೌಲ್ಯಮಾಪನ ಮಾಡುವುದು ಹೊಸದೇನು ಅಲ್ಲ. ಹಿಂದೆ ಎಸ್.ಎಂ.ಕೃಷ್ಣ ಅವಧಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಂಬಿಕಾ ಸೋನಿ ರಾಜ್ಯಕ್ಕೆ ಬಂದು ಮೌಲ್ಯಮಾಪನ ನಡೆಸಿರುವ ಉದಾಹರಣೆ ಇದೆ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ಪಕ್ಷದ ಸಚಿವರ ಕಾರ್ಯವೈಖರಿಯ ಪರಿಶೀಲನೆ ಆಗಾಗ ನಡೆಸುತ್ತಿದ್ದರು. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಮೌಲ್ಯಮಾಪನ ನಡೆಸಲು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ. ಪರಮೇಶ್ವರ್ ಮುಂದಾಗಿದ್ದರು. ಅದು ಆಗ ಹೈಕಮಾಂಡ್ ದುರ್ಬಲವಾಗಿದ್ದರಿಂದ ಮೌಲ್ಯಮಾಪನ ಸರಿಯಾಗಿ ನಡೆಯಲಿಲ್ಲ.
ತಾಯಿ ಜೊತೆಗಿದ್ದಾಗಲೇ ಮಗಳ ಅಪಹರಣ; ಸಂಜೆಯ ಸುಮಾರಿಗೆ ಮಹತ್ವದ ತಿರುವು ಪಡೆದ ಪ್ರಕರಣ!

ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಿಎಂ-ಡಿಸಿಎಂ, ಸಚಿವರು ಸಂಸದರ ಶುಭಾಶಯ: ಬೆಂಗಳೂರಲ್ಲಿ 23ರಂದು ಆಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − seven =
Remember me
